ರೊಟ್ಟಿ ಮತ್ತು ಕೋವಿ PDF

Loading...
Loading...
Loading...
Loading...
Loading...
Loading...
Loading...

Summary

This Kannada poem, "ರೊಟ್ಟಿ ಮತ್ತು ಕೋವಿ", explores the theme of hunger and its impact on society. The poem depicts the harsh realities of poverty and depicts the desperation of those who struggle to survive. The author, sheds light on the deep-seated issues of inequality and social injustice through a poignant portrayal of human suffering.

Full Transcript

# ೭. ರೊಟ್ಟಿ ಮತ್ತು ಕೋವಿ ಸು.ರಂ.ಎಕ್ಕುಂಡಿ ತಟ್ಟನೆ ನಿಂತು ನೋಡಿದೆ, ತೊಟ್ಟಿಯಾಚಿಂದ ಹಸಿದ ಹಾವುಗಳಂತೆ ಇಳಿದು ಒಳಗೆ ಎರಡು ಕೈಗಳು; ಸಿಕ್ಕ ಎಂಜಲೆಲೆಯನ್ನು ಹಿರಿದು ತೆಗೆದವು, ಕಸದಿಂದ ಹೊರಗೆ ತಡಮಾಡಲಿಲ್ಲ, ತಡೆದನುಮಾನಿಸಲಿಲ್ಲ ಎಲ್ಲಾದರೂ ಉಂಟೆ ತುಂಡು ರೊಟ್ಟಿ? ಮತ್ತು ಅನ್ನದ ಅಗಳು? ಎಲೆಯೆಲ್ಲ ಬಳಿದಾಗ ಏನೋ ಸಿಕ್ಕಿತು; ತಣ್ಣಗಾತು ಹೊಟ್ಟೆ ಎರಡು ಬ್ರೆಡ್ಡಿನ ತುಂ...

# ೭. ರೊಟ್ಟಿ ಮತ್ತು ಕೋವಿ ಸು.ರಂ.ಎಕ್ಕುಂಡಿ ತಟ್ಟನೆ ನಿಂತು ನೋಡಿದೆ, ತೊಟ್ಟಿಯಾಚಿಂದ ಹಸಿದ ಹಾವುಗಳಂತೆ ಇಳಿದು ಒಳಗೆ ಎರಡು ಕೈಗಳು; ಸಿಕ್ಕ ಎಂಜಲೆಲೆಯನ್ನು ಹಿರಿದು ತೆಗೆದವು, ಕಸದಿಂದ ಹೊರಗೆ ತಡಮಾಡಲಿಲ್ಲ, ತಡೆದನುಮಾನಿಸಲಿಲ್ಲ ಎಲ್ಲಾದರೂ ಉಂಟೆ ತುಂಡು ರೊಟ್ಟಿ? ಮತ್ತು ಅನ್ನದ ಅಗಳು? ಎಲೆಯೆಲ್ಲ ಬಳಿದಾಗ ಏನೋ ಸಿಕ್ಕಿತು; ತಣ್ಣಗಾತು ಹೊಟ್ಟೆ ಎರಡು ಬ್ರೆಡ್ಡಿನ ತುಂಡು, ಚೆಲ್ಲಿದ ಹುಳಿಯನ್ನ ಸಿಪ್ಪೆ ಉಪ್ಪಿನ ಕಾಯಿ ಕೂಡಿದುಪ್ಪು ಎಲ್ಲಿಯೋ ಕಂಡಿದ್ದೆನಲ್ಲ ಈ ಕೈಗಳನು? ಹೌದಿವೇ ಕೈಗಳು : ಬಲಿಷ್ಠ ಕಪ್ಪು ಆಷಾಢ ಮೋಡಗಳು 'ಧೋ' ಗುಟ್ಟಿ ಸುರಿದು ಹೊಲಗದ್ದೆಗಳು ತೊಯ್ದು ತಪ್ಪಡ್ಯಾಗಿ ಹೂಡಿದ್ದ ನೇಗಿಲಿನ ಹಾಡು, ರವಕೆಯ ಹಸಿರು ತೊಡಿಸಿದ್ದವಲ್ಲವೆ ತೆನೆಯು ತೂಗಿ ಅಂದುಕೊಂಡೆನು, ಅಲ್ಲ ಇವುಗಳೆ ಅಲ್ಲವೆ ಗಚ್ಚುಗಾರೆಯ ಹೊತ್ತು ಹಗಲು ಇರುಳು ಉಪ್ಪರಿಗೆ ಬಂಗಲೆಯ ನಿಲ್ಲಿಸಿಲ್ಲವೆ? ಮತ್ತೆ; ಇವುಗಳಿಂದಲ್ಲವೇ ಸುಖದ ನೆರಳು ಹಸಿದ ಕೈಗಳಿಗೆ ದುಡಿಮೆಯೆಂದರೆ ಪ್ರೀತಿ ಚೆಲುವೆಂದರೂ ಪ್ರೀತಿ ಕಾಣೋ ಅವಕೆ ಹಾಗೆಂದೇ ಲಾವಣ್ಯ ವರ್ತುಲಗಳನು ಬರೆವ, ಬೆಳ್ಳಕ್ಕಿಗಳ ಹಿಂಡು ಬೆರೆವ ಬಯಕೆ ಕಣ್ಣಿಗಷ್ಟೇ ಅಲ್ಲ, ಕಿವಿಗಳೂ ಸಂತಸದ ಹಕ್ಕಿಗಳ ಗೂಡಾಗಲೆಂದು, ನುಡಿಸಿ ಯಾವ್ಯಾವುದೋ ವಾದ್ಯ, ಈ ಕೈಗಳಲ್ಲವೆ ಇಂದೇಕೆ ಇಳಿದಿವೆ? ಎಂಜಲನು ಬಯಸಿ ಹಸಿದ ಕೈಗಳಿಗೆ ಪ್ರೀತಿಯೆಂದರು ಪ್ರೀತಿ ಹಾಗೆಂದ ತಟ್ಟಿ ಎದೆ ಎದೆಯ ಕದವ ಕಾದರೂ, ಹಸಿದವರಿಗವು ತೆರೆಯಲೆ ಇಲ್ಲ! ಎಷ್ಟೆಂದು ತಡೆದಾರು? ತಮ್ಮ ಹಸಿವು? ಕಸದ ತೊಟ್ಟಿಗೆ ಇನ್ನು ಹಸಿದ ಕೈ ಇಳಿಯವು ಅಂದುಕೊಂಡೆನು. ಅಂಜಿ ನೊಂದುಕೊಂಡು. ನೇಣುಗಂಬವ ಕೂಡ ಧಿಕ್ಕರಿಸಿ ನುಗ್ಗುವರು ಎತ್ತಿಕೊಳ್ಳಲು ಸಿಕ್ಕ ಕೋವಿ ಗುಂಡು ಹಸಿದವರು ಕೂಡ ಬದುಕಬೇಕಲ್ಲವೇ? ಮತ್ತೆ, ಪ್ರೀತಿಯೂ ಬೇಕಲ್ಲ ದುಡಿವ ಜನಕೆ ಎದೆಯ ಕದಗಳು ಮುಚ್ಚಿದಾಗ ಮತ್ತಿನ್ನೇನು ಮುಖ್ಯವಲ್ಲವೆ ಸಾವಿಗಿಂತ ಬದುಕೆ? *** # ಕವಿ ಪರಿಚಯ: ಕಥನ ಕವನಗಳ ಕವಿಯೆಂದೇ ಖ್ಯಾತಿಗೊಂಡಿರುವ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರು ಪ್ರಗತಿಪರ ಪಂಥಕ್ಕೆ ಇನ್ನುಷ್ಟು ಬಲವನ್ನು ಒದಗಿಸಿದರು. ಹಾಗೆಯೇ ನವ್ಯ ಪಂಥದ ಬಂಧನಕ್ಕೆ ಸಿಲುಕದೆ ತಮ್ಮದೇ ಆದ ವೈಶಿಷ್ಟ್ಯವನ್ನು ಕಾಯ್ದುಕೊಂಡು ಬೆಳೆದರು. ಸುಬ್ಬಣ್ಣನವರು (೧೯೨೩ ರಿಂದ ೧೯೯೫) ಧಾರವಾಡ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಜನಿಸಿದರು. ಆರಂಭದ ಶಿಕ್ಷಣವು ಹುಬ್ಬಳ್ಳಿಯಲ್ಲಿ ನಡೆದು, ಬಿ.ಎ. ಆನರ್ಸ್ ಪದವಿಯನ್ನು ಸಾಂಗಲಿಯ ವಿಲ್ಲಿಂಗ್‌ಡನ್‌ ಕಾಲೇಜಿನಿಂದ ಪಡೆದುಕೊಂಡರು. ವೃತ್ತಿಯಿಂದ ಶಿಕ್ಷಕರಾಗಿ ಸುಮಾರು ನಲವತ್ತು ವರ್ಷಗಳ ಕಾಲ ಕಾವ್ಯತಪಸ್ಸಿನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ಕಾವ್ಯತಪಸ್ಸಿಗೆ ಭೂಮಿಕೆಯಾದುದು ಗೋಕರ್ಣದ ಹತ್ತಿರವಿರುವ ಸೌಂದರ್ಯದ ಬೀಡಾದ ಬಂಕಿಕೊಡ್ಲ. ಕ್ರಿ.ಶ.೧೯೫೩ರಲ್ಲಿ ಅವರ ಪ್ರಥಮ ಕವನ ಸಂಕಲನ "ಸಂತಾನ" ಪ್ರಕಟವಾಯಿತು. ನಂತರದಲ್ಲಿ ಶ್ರೀಆನಂದತೀರ್ಥರು, ಹಾವಾಡಿಗರ ಹುಡುಗ, ಮತ್ತ್ವಗಂಧಿ, ಬೆಳ್ಳಕ್ಕಿಗಳು, ಕಥನ ಕವನಗಳು, ಬಕುಲದ ಹೂಗಳು ಎಂಬ ಕವನ ಸಂಕಲನಗಳು ರಚನೆಗೊಂಡು ಹೊರಬಂದವು. ಕವನ ಸಂಕಲನಗಳೊಂದಿಗೆ ಎಕ್ಕುಂಡಿ ಅವರು ಕಥೆ, ವಿಮರ್ಶೆ ಅನುವಾದ ಕ್ಷೇತ್ರಗಳಲ್ಲಿಯೂ ಕೃಷಿಗೈದಿರುವರು. ಸುಬ್ಬಣ್ಣನವರ ಸಾಹಿತ್ಯಕ ಸಾಧನೆಗಳಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (೧೯೭೦), ಉತ್ತಮ ಶಿಕ್ಷಕ ಪ್ರಶಸ್ತಿ (೧೯೭೮), ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೮), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೨)-ಇವು ಅವುಗಳಲ್ಲಿ ಪ್ರಮುಖವಾದುವುಗಳಾಗಿವೆ. ಅರ್ಥಕೋಶ: ಹಿರಿದು= ಹೊರಕ್ಕೆ ಎಳೆದು, ಕಿತ್ತು ತೆಗೆದು, ಲಾವಣ್ಯ ವರ್ತುಲಗಳನು= ಚೆಲುವಾದ ವೃತ್ತಾಕಾರದ ನರ್ತನ ಮಾಡುವುದು / ಚಿತ್ರ ಬರೆಯುವುದು, ## ಕವನದ ಆಶಯ: ಸು. ರಂ. ಎಕ್ಕುಂಡಿಯವರು ಈ ಕವನದಲ್ಲಿ ಹಸಿವಿನ ಸಮಸ್ಯೆಯ ತೀವ್ರತೆಯನ್ನು ಮನಗಾಣಿಸಿದ್ದಾರೆ. ಹಸಿದ ಕೈಗಳು ಕಸದ ತೊಟ್ಟಿಯಿಂದ ಎಂಜಲೆಲೆಯನ್ನು ಕಿತ್ತು ತೆಗೆದು ಯಾವುದೇ ನಾಚಿಕೆ, ಸಂದೇಹ, ಮುಜುಗರಗಳಿಲ್ಲದೆ ಆ ಎಲೆಗಳಲ್ಲಿ ಉಳಿದಿರಬಹುದಾದ ತುಂಡುರೊಟ್ಟಿ, ಅನ್ನದ ಅಗುಳಿಗಾಗಿ ಹುಡುಕಿ ತಿನ್ನುವ ಕರುಣಾಜನಕ ದೃಶ್ಯವನ್ನು ನೆನಪಿಸುತ್ತಾರೆ. ಬ್ರೆಡ್ಡಿನ ತುಂಡೋ ಯಾರೋ ಉಂಡು ಹೆಚ್ಚಾಗಿ ಚೆಲ್ಲಿದ ಹುಳಿಯನ್ನವೋ, ಉಪ್ಪು ಬೆರತ ಉಪ್ಪಿನಕಾಯಿಯ ಸಿಪ್ಪೆಯೋ ಏನು ಸಿಕ್ಕರೂ ತಿನ್ನುವವರನ್ನು ಕಂಡಾಗ ನಮ್ಮ ಸುತ್ತಲಿನ ಜನರಲ್ಲಿ ಹಸಿವಿನ ಪ್ರಮಾಣ ಎಷ್ಟೊಂದು ಹೆಚ್ಚಾಗಿದೆ ಎಂಬ ವಿಚಾರ ಮನವರಿಕೆಯಾಗುತ್ತದೆ. ಆದರೆ ಈ ಕೈಗಳು ಜನರಿಗೆ ಅಪರಿಚಿತವೇನಲ್ಲ. ಈ ಬಲಿಷ್ಠ ಕಪ್ಪು ಕೈಗಳೇ ವ್ಯವಸಾಯ ಮಾಡಿ, ಭೂಮಿಗೆ ಹಸಿರಿನ ಉಡಿ ತುಂಬಿದ್ದವು. ಭರ್ಜರಿ ಬೆಳೆ ಬೆಳದು ಎಲ್ಲರ ಹೊಟ್ಟೆ ತುಂಬಿಸಿದ್ದವು. ಗಚ್ಚು-ಗಾರೆಯನ್ನು ಹೊತ್ತು ಮನೆ ಕಟ್ಟಿದ್ದವು. ಹೀಗೆ ಅವಿರತವಾಗಿ ದುಡಿಯುವ ಯಾವ ರೈತರ ಹಾಗೂ ಶ್ರಮಿಕರ ಕೈಗಳು ಕಲೆಯ ಬಗ್ಗೆ ಪ್ರೀತಿ ಬೆಳೆಸಿಕೊಂಡು, ನೃತ್ಯ, ಗೀತೆ, ಚಿತ್ರ, ವಾದ್ಯನುಡಿಸುವುದು ಮುಂತಾದ ಜೀವನಪ್ರೇಮದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವೋ, ಅವೇ ಕೈಗಳು ಈಗ ಎಂಜಲನ್ನು ಬಯಸಿ ಕಸದ ತೊಟ್ಟಿಗೆ ಇಳಿದಿರುವುದನ್ನು ನೆನೆದಾಗ ದುಃಖವಾಗುತ್ತದೆ. ಸಮಸ್ತ ಜನರ ಹಸಿವೆ ನೀಗಿಸಲು ರೈತರಾಗಿ ದುಡಿದು, ಜನರು ಸುಖದಿಂದ ನೆಲೆಸಲು ಕಟ್ಟಡಗಳನ್ನು ನಿರ್ಮಿಸಲು ದುಡಿದ ಈ ಕೈಗಳು ಈಗ ಹಸಿವಿನಿಂದ ಕಂಗಾಲಾಗಿ ಪ್ರೀತಿಯನ್ನು ಬಯಸಿ ಕಾಯುತ್ತಿರುವಾಗ; ಉಳ್ಳವರೆನಿಸಿಕೊಂಡಿದರು ಹಸಿದವರ ಬಗ್ಗೆ ಸ್ಪಂದಿಸದೆ ತಾತ್ಸಾರ ತೋರಿದರೆ ಆ ಜನರು ಎಲ್ಲಿಯವರೆಗೆ ತಮ್ಮ ಹಸಿವೆಯನ್ನು ತಡೆದುಕೊಳ್ಳಲು ಸಾಧ್ಯ? ಹೀಗೆ ವಿಚಾರಿಸುತ್ತಿರುವ ಕವಿಗೆ ಒಂದು ಸತ್ಯ ಗೋಚರಿಸತೊಡಗುತ್ತದೆ. ಇನ್ನುಮೇಲೆ ಹಸಿದ ಕೈಗಳು ಕಸದ ತೊಟ್ಟಿಯ ಕಡೆಗೆ ಇಳಿಯುವುದಕ್ಕೆ ಬದಲಾಗಿ ತಮಗೆ ಪ್ರೀತಿ ತೋರದ ನಿರ್ದಯಿಗಳನ್ನು ಕೊಲ್ಲಲು ಕೋವಿ-ಗುಂಡುಗಳನ್ನು ಎತ್ತಿಕೊಳ್ಳುತ್ತವೆ. ಕೆರಳಿ ನಿಂತ ಅವರು ಗಲ್ಲುಶಿಕ್ಷೆಗೂ ಹೆದರದೆ ಹಿಂಸಾಚಾರದ ಮೂಲಕ ತಮ್ಮ ಸೇಡನ್ನು ತೀರಿಸಿಕೊಂಡರೆ ಗತಿಯೇನು? ಎಂಬ ಆಲೋಚನೆ ಮೂಡಿ ಕವಿಯು ಭಯ ಹಾಗೂ ನೋವುಗಳನ್ನು ಅನುಭವಿಸುತ್ತಾರೆ. ನಮ್ಮ ಸಾವಿಗೆ ಅಂಜುವ ನಾವು, ಹಸಿವಿನಿಂದ ಸಾಯುತ್ತಿರುವವರ ಬಗ್ಗೆ ಏಕೆ ಸ್ವಲ್ಪವೂ ಕಾಳಜಿಯನ್ನು ತೋರುವುದಿಲ್ಲ? ಹಸಿದವರೂ ಬದುಕಬೇಕು. ಅವರಿಗೂ ಸಮಾಜದ ಪ್ರೀತಿಬೇಕು. ಅದು ಸಿಗದೆ ಹೋದಾಗ ಅವರು ಬದುಕುವುದಾದರೂ ಹೇಗೆ? “ಸಾವಿಗಿಂತ ಬದುಕೇ ಉತ್ತಮ' ಎಂಬುದು ನಮಗೆ ಮಾತ್ರ ಅನ್ವಯವೇ? ಅವರೂ ಬದುಕಬೇಕಲ್ಲವೆ? ಅವರಿಗೆ ಯಾರ ಭಿಕ್ಷೆಯೂ ಬೇಕಿಲ್ಲ. ದುಡಿಯುವ ಕೈಗಳಿಗೆ ಕೆಲಸ, ಸೂಕ್ತ ವೇತನ ಕೊಟ್ಟರೆ ಸಾಕು, ಶೋಷಣೆ ಮಾಡದಿದ್ದರೆ ಸಾಕು. ಅವರನ್ನು ಮನುಷ್ಯರಂತೆ ನಡೆಸಿಕೊಂಡರೆ ಸಾಕು, ಸಮಸ್ಯೆ ಬಗೆಹರಿಯುತ್ತದೆ. ಆದ್ದರಿಂದ 'ಶ್ರಮಿಕ ವರ್ಗದ ಬಗ್ಗೆ ಪ್ರೀತಿಯಿರಲಿ' ಎಂಬುದೇ ಈ ಕವನದ ಸಂದೇಶ. ## ಮಾದರಿ ಪ್ರಶ್ನೆಗಳು : 1. ಸು.ರಂ.ಎಕ್ಕುಂಡಿ ಅವರ ಕವನದಲ್ಲಿ ಚಿತ್ರಿಸಿದ ಹಸಿವಿನ ತೀವ್ರತೆ ಮತ್ತು ಅದರ ದುಷ್ಪರಿಣಾಮಗಳನ್ನು ವಿವರಿಸಿ. 2. 'ರೊಟ್ಟಿ ಸಿಗದ ಕೈ ಕೋವಿ ಹಿಡಿದೀತು' ಏಕೆ? 3. ಟಿಪ್ಪಣಿ ಬರೆಯಿರಿ: 1. ರೊಟ್ಟಿ ಮತ್ತು ಕೋವಿ 2. ದುಡಿಯುವ ಕೈಗಳು ಮತ್ತು ಪ್ರೀತಿ ***

Use Quizgecko on...
Browser
Browser