Second PUC (Kannada) Mid-Year Exam Paper PDF -4

Loading...
Loading...
Loading...
Loading...
Loading...
Loading...
Loading...

Summary

This document is a mid-year exam paper for the second year of PUC (Pre-University Course) in Kannada, in India. It includes a series of questions related to various subjects, including literature, history, and science. Expect further questions in this test with a focus on Kannada language and literature.

Full Transcript

ದ್ವಿತೀಯ ಪಿಯುಸಿ (ಕನ್ನಡ) ಅರ್ಧ ವಾರ್ಷಿಕ ಪರೀಕ್ಷೆ-೦೪ ಪ್ರಸ್ತುತಿ-ಶ್ರೀ ಷರೀಫಸಾಬ ಬಾವಿಕಟ್ಟಿ (ಕನ್ನಡ ಉಪನ್ಯಾಸಕರು) ತಾವರಗೇರಾ, ತಾ.ಕುಷ್ಟಗಿ ಜಿ.ಕೊಪ್ಪಳ ೯೫೯೧೮೪೩೯೭೩ 1. ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿದ ಸಂದರ್ಭವನ್ನು ವಿವರಿಸಿರಿ. 1 point ಬಹುರೂಪಿಣಿ ವಿದ್ಯೆ ರಾವಣನ ಎದುರು ಪ್ರತ್ಯಕ್ಷವಾಗಿ...

ದ್ವಿತೀಯ ಪಿಯುಸಿ (ಕನ್ನಡ) ಅರ್ಧ ವಾರ್ಷಿಕ ಪರೀಕ್ಷೆ-೦೪ ಪ್ರಸ್ತುತಿ-ಶ್ರೀ ಷರೀಫಸಾಬ ಬಾವಿಕಟ್ಟಿ (ಕನ್ನಡ ಉಪನ್ಯಾಸಕರು) ತಾವರಗೇರಾ, ತಾ.ಕುಷ್ಟಗಿ ಜಿ.ಕೊಪ್ಪಳ ೯೫೯೧೮೪೩೯೭೩ 1. ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿದ ಸಂದರ್ಭವನ್ನು ವಿವರಿಸಿರಿ. 1 point ಬಹುರೂಪಿಣಿ ವಿದ್ಯೆ ರಾವಣನ ಎದುರು ಪ್ರತ್ಯಕ್ಷವಾಗಿ ರಾಮ ಲಕ್ಷ್ಮಣರನ್ನು ಬಿಟ್ಟು ಉಳಿದವರನ್ನು ನಾಶ ಮಾಡುತ್ತೇನೆ ಎಂದ ತಕ್ಷಣ ವೈರಾಗ್ಯ ಉಂಟಾಯಿತು ಸೀತೆ ರಾವಣನ ಮಾತುಗಳನ್ನು ಕೇಳುತ್ತಲೇ ಮೂರ್ಛಿತಳಾಗಿ ಬೀಳುತ್ತಾಳೆ. ಆಗ ರಾವಣನಿಗೆ ಆಕೆಯ ಮೇಲೆ ಅನುಕಂಪ ಮೂಡಿ,ಕರುಣೆ ತೋರಿಸಿ, ತನಗೆ ತಾನೇ ನಿಂದಿಸಿಕೊಂಡು, ವಿಧಿ ಕರ್ಮವಶದಿಂದ ತನ್ನಲ್ಲಿ ಉಂಟಾದ ಕೆಟ್ಟಕರ್ಮವನ್ನು ಬಿಟ್ಟು, ಯಾವ ರೀತಿಯಾಗಿ ಕಲುಷಿತವಾದ ನೀರು ತನ್ನಿಂದ ತಾನೇ ತಿಳಿಯಾಗುವಂತೆ, ಇಲ್ಲಿ ರಾವಣನಿಗೆ ಸೀತೆಯ ಮೇಲೆ ಮೋಹ ಕರಗಿ ವೈರಾಗ್ಯ ಉಂಟಾಯಿತು. 2. ಕೊಲಲಕ್ಷಮರೆಂದು ದ್ರೌಪದಿ ಯಾರನ್ನು ಕುರಿತು ಹೇಳಿದ್ದಾಳೆ? 1 point ಭೀಮನನ್ನ ಮಾತ್ರ ಕುರಿತು ಧರ್ಮರಾಯ ಮತ್ತು ಅರ್ಜುನನನ್ನು ಕುರಿತು ಕೀಚಕ ಮತ್ತು ಸೈಂಧವನನ್ನು ಕುರಿತು ನಕುಲ ಮತ್ತು ಸಹದೇವರನ್ನು ಕುರಿತು 3. ಅನ್ಯ ಡಾಕ್ಟರುಗಳು ಬಸಲಿಂಗನ ಕಾಯಿಲೆ ಬಗ್ಗೆ ಏನೆಂದು ಪ್ರತಿಕ್ರಿಯಿಸಿದರು? 1 point ಡಾಕ್ಟರ್ ತಿಮ್ಮಪ್ಪನವರಿಂದ ಬಸಲಿಂಗನ ಕಣ್ಣಿನ ಕಾಯಿಲೆ ಖಂಡಿತವಾಗಿ ವಾಸಿಯಾಗುತ್ತೆ ಎಂದು ಪ್ರತಿಕ್ರಿಯಿಸಿದರು. ಬಸಲಿಂಗನ ಕಣ್ಣಿನ ಕಾಯಿಲೆ ಒಂದು ವಿಸ್ಮಯವಾದ ಸೋಜಿಗವಾದ ಹಾಗೂ ಗಾಂಭೀರ್ಯದಿಂದ ಕೂಡಿದೆ. ಬಸಲಿಂಗನ ಕಣ್ಣಿನ ಕಾಯಿಲೆಗೆ ಆಪರೇಶನ್ನೇ ಬೇಕಿಲ್ಲ, ಆ ಡಾ. ತಿಮ್ಮಪ್ಪನಿಗೆ ಬುದ್ಧಿ ಇಲ್ಲ- ಅದಕ್ಕೆ ಆಪರೇಶನ್ ಮಾಡಿದ್ದಾರೆ. 4. ತ್ರಿಭಾಷಾ ಸೂತ್ರದ ಬಳಕೆ ಹೇಗಿರಬೇಕು? 1 point ಕೇಂದ್ರ ಕಚೇರಿಯಲ್ಲಿ ಸಂವಿಧಾನದ ಯಾವುದೇ ಮೂರು ಭಾಷೆಗಳನ್ನು ಬಳಸುವುದು ರಾಜ್ಯ ಇಲಾಖೆಯಲ್ಲಿ ಅನುಕ್ರಮವಾಗಿ ಇಂಗ್ಲಿಷ್ ಹಿಂದಿ ಮತ್ತು ಆಯಾ ಪ್ರಾದೇಶಿಕ ಭಾಷೆ ಬಳಸುವುದು. ಆಯಾ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಕಚೇರಿಗಳಲ್ಲಿರುವ ಎಲ್ಲಾ ಸೂಚನೆಗಳು, ಎಲ್ಲಾ ಫಾರಂಗಳು, ಎಲ್ಲಾ ಬರವಣಿಗೆಯ ವ್ಯವಹಾರಗಳು ಅನುಕ್ರಮವಾಗಿ ಆಯಾ ಪ್ರಾದೇಶಿಕ ಭಾಷೆ(ಕನ್ನಡ) ರಾಷ್ಟ್ರೀಯ ಭಾಷೆ(ಹಿಂದಿ) ಹಾಗೂ ಅಂತರಾಷ್ಟ್ರೀಯ ಭಾಷೆ(ಇಂಗ್ಲಿಷ್) ಗಳಲ್ಲಿರಬೇಕು. 5. ದುರ್ಗಪ್ಪ ಏಕೆ ಬಂದಿರಬಹುದೆಂದು ನಿರೂಪಕರು ಯೋಚಿಸಿದರು? 1 point ದುರ್ಗಪ್ಪ ವಿದ್ಯುತ್ ಲೈನ್ ಮೇಲೆ ಬಿದ್ದಿರುವ ಮರದ ಕೊಂಬೆಯನ್ನು ತೆಗೆದುಹಾಕಲು ಕೊಡಲಿ ಕೇಳಲು ಬಂದಿರಬಹುದು ಕೃಷ್ಣೇಗೌಡನ ಆನೆಯ ಕೆಲಸವನ್ನು ಮತ್ತು ಫಾರೆಸ್ಟ್ ನಾಗರಾಜನನ್ನು ಕುರಿತು ಮಾತನಾಡಲು ಬಂದಿರಬಹುದು. ಏನೋ ಇನಾಮು ಕೇಳಲೊ, ಚಂದಾ ವಸೂಲಿಗೊ, ಇಲ್ಲವೇ ಮನೆಯ ಉಪಯೋಗಕ್ಕೆ ಕಾಫಿ ಬೀಜವನ್ನೊ, ಏಲಕ್ಕಿಯನ್ನೊ ಕೇಳಲು ಬಂದಿರಬಹುದು. 6. ಕಾಡಾನೆಗಳ ಹಾವಳಿಗೆ ಪ್ರಕಾಶ್ ನೀಡಿದ ಕಾರಣಗಳೇನು? 1 point ಕೃಷ್ಣೇಗೌಡನ ಆನೆ ಹೆಣ್ಣಾನೆ ಆಗಿದ್ದರಿಂದ ಅದನ್ನು ಹುಡುಕಿಕೊಂಡು ಕಾಡಾನೆಗಳು ಗ್ರಾಮಕ್ಕೆ ಹಾವಳಿ ಮಾಡುತ್ತವೆ. ಕಾಡಾನೆಗಳು ಬಿಸಿಲಿಗೆ ತಮ್ಮ ಸೈರಣೆ ಕಳೆದುಕೊಂಡು ನೀರನ್ನು ಹುಡುಕಿಕೊಂಡು ಗ್ರಾಮಕ್ಕೆ ಹಾವಳಿ ಮಾಡುತ್ತವೆ. ಅರಣ್ಯ ಇಲಾಖೆಯವರು ಕಾಡಿನ ಮರಗಳನ್ನು ತೆಗೆದು, ಅಲ್ಲಿ ಅಕೇಶಿಯಾ, ನೀಲಗಿರಿ ಮುಂತಾದ ಆನೆಗಳಿಗೆ ನಿರುಪಯುಕ್ತವಾದ ಮರಗಳನ್ನು ನೆಡುತ್ತಿರುವುದು. 7. ನಾಗರಾಜ ದುರ್ಗಪ್ಪನ ಮೇಲೆ ಏನೆಂದು ರೇಗಿದನು? 1 point ವಿನಾಕಾರಣ ನೀನು ಕೃಷ್ಣೇಗೌಡರ ಆನೆಗೆ ಏಕೆ ಅವಮಾನಿಸಿದ್ದೀಯಾ ಎಂದು ರೇಗಿದನು. ದುರ್ಗಪ್ಪನು ಮರ ನಾನು ಕಡಿದಿಲ್ಲ, ಕೃಷ್ಣೇಗೌಡರ ಆನೆ ಮರವನ್ನು ಬೀಳಿಸಿದೆ ಎಂದು ಮತ್ತೆ ಮತ್ತೆ ಹೇಳುವುದನ್ನು ನೋಡಿ ರೇಗಿದ ನಾಗರಾಜ, ಹಾಗಂತ ಹೇಳಿಕೆ ಬರೆದು ಕೊಡ್ತೀಯಾ? ಹಾಗಿದ್ರೆ ಹೇಳು, ಅದನ್ನು ಎಳಕೊಂಡು ಬಂದು ಅಂಬಾಸಿಡರ್ ಕಾರಿನ ಜೊತೆ ಕಟ್ಟಾಕಿ ಬರೆಹಾಕಿಬಿಡ್ತೀನಿ. ನಿನ್ನ ಪುಕಾರೇನಿದ್ದರೂ ಬರವಣಿಗೆಯಲ್ಲಿ ಇರಬೇಕು, ಹಂಗಿದ್ರೆ ಮಾತ್ರ ನಾನು ಆಕ್ಷನ್ ತೆಗೆದುಕೊಳ್ಳುವುದು ಎಂದು ಗುಡುಗಿದ. 8. ಜಬ್ಬಾರ ನಿರೂಪಕರಿಗೆ ಅಂಚೆ ವಿಲೇವಾರಿ ಬಗ್ಗೆ ಅಸಡ್ಡೆಯಿಂದ ಏನು ಹೇಳಿದನು? 1 point ಸರ್ ನನಗೆ ನಾಯಿ ಕಚ್ಚಿದೆ ದಯವಿಟ್ಟು ನಿಮಗೆ ನಿಮ್ಮ ಅಂಚೆಪತ್ರಗಳನ್ನು ಕೊಡಲು ಇನ್ನೂ ತಡವಾಗಬಹುದು ಸರ್ ನನಗೆ ವಯಸ್ಸಾಗಿದೆ ನಡೆದಾಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ನಿಧಾನವಾಗಿ ನಿಮಗೆ ಅಂಚೆ ಪತ್ರವನ್ನು ನೀಡುತ್ತೇನೆ. ಅಯ್ಯೋ ಯಾವೋ ಮದುವೆ ಮನೆ ಕಾಗದ ಸರ್, ನೀವೇನು ಹೋಗೋದಿಲ್ಲ ಏನಿಲ್ಲ. ಅವುಗಳನ್ನು ಇವತ್ತು ಕೊಟ್ಟರೂ ಒಂದೆ, ನಾಳೆ ಕೊಟ್ಟರೂ ಒಂದೆ. 9. ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ? 1 point ಸೀತೆಯನ್ನು ಹೇಗಾದರೂ ಮಾಡಿ ಮನವೊಲಿಸಿ ಆಕೆಯನ್ನು ನನ್ನ ಪಟ್ಟದ ರಾಣಿಯನ್ನಾಗಿ ಮಾಡಿಕೊಳ್ಳುತ್ತೇನೆ. ರಾಮ ಲಕ್ಷ್ಮಣರಿಗೆ ಶರಣಾಗಿ ನನ್ನ ರಾಜ್ಯವನ್ನು ಅವರಿಗೆ ನೀಡಿ ಸನ್ಯಾಸತ್ವ ಸ್ವೀಕರಿಸುತ್ತೇನೆ. ಮುಂದೆ ನಡೆಯಲಿರುವ ಯುದ್ಧದಲ್ಲಿ ಎರಡು ಕಡೆಯ ಸೈನ್ಯದವರು ನನ್ನ ಬಾಹುಬಲದ ಪರಾಕ್ರಮವನ್ನು ಹೊಗಳುವಂತೆ ಯುದ್ಧ ಮಾಡಿ, ರಾಮ ಮತ್ತು ಲಕ್ಷ್ಮಣರನ್ನು ಯುದ್ಧದಲ್ಲಿ ರಥ ಹೀನರನ್ನಾಗಿ ಮಾಡಿ ಅಂದರೆ ಅವರನ್ನು ಸೋಲಿಸಿ ನಂತರ ಸೀತೆಯನ್ನು ರಾಮನಿಗೆ ಒಪ್ಪಿಸಬೇಕು. 10. ಉಳಿದ ನಾಲ್ವರು ಪಾಂಡವರ ಭಿನ್ನ ಸ್ವಭಾವಗಳ ಬಗ್ಗೆ ದ್ರೌಪದಿಯ ಅಭಿಪ್ರಾಯವೇನು? 1 point ಭೀಮನನ್ನು ಬಿಟ್ಟು ಉಳಿದ ನಾಲ್ವರು ಪಾಂಡವರು ಒಂದು ಗಳಿಗೆಯೂ ನನ್ನನ್ನು ಬಿಟ್ಟು ಇರುವವರಲ್ಲ. ಭೀಮನನ್ನು ಬಿಟ್ಟು ಉಳಿದ ನಾಲ್ವರು ಪಾಂಡವರು ನನ್ನನ್ನು ಕೀಚಕನಿಂದ ಕಾಪಾಡುತ್ತಾರೆ. ಉಳಿದ ನಾಲ್ವರು ರಮಣರು ನನ್ನನ್ನು ರಮಿಸುವವರು ಆದರೆ ನನ್ನ ಅಥವಾ ನನಗೆ ಮಾನಾರ್ಥದ ವಿಷಯ ಬಂದಾಗ ಅಲ್ಲಿಂದ ನಿರ್ಗಮಿಸುವರು. 11. ಕೊನೆಯಲ್ಲಿ ಬಸಲಿಂಗನಿಗೆ ಏನೆಂದು ನಿಶ್ಚಿತವಾಗತೊಡಗಿತ್ತು? 1 point ನನ್ನ ಜಾತಿ ಕೆಡಿಸಿದ ಡಾಕ್ಟರ್ ತಿಮ್ಮಪ್ಪನಿಗೆ ಒಂದು ಗತಿ ಕಾಣಿಸುವುದು. ನನ್ನ ಜಾತಿ, ನನ್ನ ಉಡಾಫೆ ಮಾತುಗಳು, ನನ್ನ ಸುಳ್ಳುಗಳು ನನ್ನ ಬಲಗಣ್ಣನ್ನು ಉಳಿಸುತ್ತವೆ. ತನ್ನ ಹೆಂಡತಿ ಸಿದ್ಲಿಂಗಿಯ ರಾದ್ಧಾಂತ ದಿಂದಲೇ ನನ್ನನ್ನು ನಮ್ಮೂರಿನವರು ಊರಿನಿಂದ ಬಹಿಷ್ಕಾರ ಮಾಡುತ್ತಾರೆ ಎಂಬುದು. ತನ್ನ ಜಾತಿ, ತನ್ನ ಉಡಾಫೆ ಮಾತುಗಳು, ತನ್ನ ಸುಳ್ಳುಗಳು ಹಾಗೂ ಮಠದ ಗುರುಗಳು ಯಾರೂ ಕೂಡ ತನ್ನ ಕಣ್ಣನ್ನು ಉಳಿಸುವುದಿಲ್ಲ. 12. ಕರ್ನಾಟಕದಲ್ಲಿ ಕನ್ನಡಕ್ಕೆ ಯಾವ ಸ್ಥಾನ ಇರಬೇಕೆಂದು ಹಾ.ಮಾ.ನಾಯಕ ಅಪೇಕ್ಷಿಸಿದ್ದಾರೆ? 1 point ತ್ರಿಭಾಷಾ ಸೂತ್ರದ ಬಳಕೆಯಲ್ಲಿ ಕನ್ನಡಕ್ಕೆ ಮೂರನೇ ಸ್ಥಾನ ಇರಬೇಕೆಂದು ಕನ್ನಡಕ್ಕೆ ಆಡಂಬರದ, ತೋರಿಕೆಯ, ನಾಟಕೀಯ ಸ್ಥಾನಮಾನ ಇರಬೇಕೆಂದು. ಕರ್ನಾಟಕದಲ್ಲಿ ಕನ್ನಡವೇ ಪ್ರಥಮ, ಪ್ರಧಾನ, ರಾಜ, ರಾಣಿ, ರಾಜಕುಮಾರ ಎಲ್ಲ. ಮಿಕ್ಕ ಯಾವ ಭಾಷೆಯಾದರೂ ಇಲ್ಲಿ ಸೇವಕರ ಸ್ಥಾನದಲ್ಲಿರಬೇಕು. 13. ಮಠದವರಿಗೆ ಆನೆಗಿಂತ ವೇಲಾಯುಧನನ್ನು ಸಾಕಲು ತ್ರಾಸಾದುದೇಕೆ? 1 point ಅವನು ದಿನದ 24 ಗಂಟೆಯೂ ನಮಾಜ್ ಮಾಡುತ್ತಿದ್ದನು. ಅವನು ಮಠದ ಆನೆಗೆ ಕಿರುಕುಳ, ದೌರ್ಜನ್ಯ ಕೊಡುತ್ತಿದ್ದನು. ಆನೆಯ ಮಾವುತ ವೇಲಾಯುಧನು ದಿನದ ಇಪ್ಪತ್ತನಾಲ್ಕು ಗಂಟೆಯೂ ಕುಡಿದೆ ಇರುತ್ತಿದ್ದನು. ಅವನು ತನ್ನ ದುರ್ನಡತೆಯಿಂದಾಗಿ ಮಠದ ಸಾತ್ವಿಕ ವಾತಾವರಣಕ್ಕೆ ದೊಡ್ಡ ತೆಲೆನೋವಾಗಿದ್ದನು. 14. ಫಾರೆಸ್ಟ್ ಡಿಪಾರ್ಟ್ಮೆಂಟಿನ ನಂಬರ್ ಒನ್ ಎನಿಮಿಗಳು ಯಾರು ಯಾರು? 1 point ಪೋಸ್ಟ್ ಆಫೀಸ್, ವೆಟರ್ನರಿ ಆಸ್ಪತ್ರೆ ಫಾರೆಸ್ಟ್ ಡಿಪಾರ್ಟ್ಮೆಂಟ್, ಅರಣ್ಯ ಇಲಾಖೆ ಕೇವಲ ಟೆಲಿಫೋನ್ ಮತ್ತು ಪಿಡಬ್ಲ್ಯೂಡಿ ಡಿಪಾರ್ಟ್ಮೆಂಟ್ ಟೆಲಿಫೋನ್, ಕರೆಂಟ್, ಪಿಡಬ್ಲ್ಯೂಡಿ ಡಿಪಾರ್ಟ್ಮೆಂಟ್ ಗಳು 15. ದುರ್ಗಪ್ಪ ತನ್ನ ಕೆಲಸ ಅತ್ಯಂತ ಅಪಾಯಕಾರಿ ಎಂದು ಹೇಗೆ ವಿವರಿಸುತ್ತಾನೆ? 1 point ದಿನದ 24 ಗಂಟೆಯೂ ನಮ್ಮ ಇಲಾಖೆಯವರು ಕಂಬ ಹತ್ತಲು ಹೇಳುತ್ತಿದ್ದರು ಮತ್ತು ಬಹಳ ಕಿರುಕುಳ ಕೊಡುತ್ತಿದ್ದರು. ಕರೆಂಟ್ ಲೈನ್ ಮನ್ ಕೆಲಸಕ್ಕೆ ಸೇರಿದ ಮೇಲೆ ಪ್ರಾಣದ ಆಸೆ ಇಟ್ಕೊಂಡ್ರೆ ಆಗುತ್ತಾ? ನಮ್ಮ ಡಿಪಾರ್ಟ್ಮೆಂಟಿನ ಲೈನ್ ಮನ್ ಗಳ್ಯಾರು ಇಲ್ಲಿಯವರೆಗೆ ಸರ್ವಿಸ್ ಮುಗಿಸಿ ರಿಟೈರ್ಡ್ ಆಗಿರುವವರನ್ನು ನೋಡಿದ್ದೀರಾ? ಕರೆಂಟಿನ ಜೊತೆ ಕೆಲಸ ಅದು, ಒಂದಲ್ಲ ಒಂದು ದಿನ ಎಚ್ಚರ ತಪ್ಪಿದ್ರೆ ಅಲ್ಲಿಗೆ ನಮ್ಮ ಜೀವನದ ಸರ್ವಿಸ್ ಮುಗಿದಂಗೆ. 16. ಸೀತೆಯ ತಲ್ಲಣಕ್ಕೆ ಕಾರಣವೇನು? 1 point ಯುದ್ಧದಲ್ಲಿ ರಾಮ ಲಕ್ಷ್ಮಣರು ಸೋತು ರಾವಣನ ಎದುರು ಅವಮಾನಕ್ಕೆ ಒಳಗಾಗುತ್ತಾರೆ ಎಂದು ತಿಳಿದುಕೊಂಡು. ಪ್ರಮದವನದಲ್ಲಿ ಅನೇಕ ಕ್ರೂರ ಪ್ರಾಣಿಗಳು ನನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಕೊಂಡು ತಲ್ಲಣಗೊಂಡಳು. ಬಹುರೂಪಿಣಿ ವಿದ್ಯೆಯನ್ನು ಸಾಧಿಸಿ ರಾವಣನು ತನ್ನತ್ತ ಬರುವುದನ್ನು ಕಂಡ ಸೀತಾದೇವಿಯು ಇನ್ನು ರಾಮ ಲಕ್ಷ್ಮಣರ ಬಗ್ಗೆ ರಾವಣನಿಂದ ಯಾವ ಕೆಟ್ಟ ಸುದ್ದಿಯನ್ನು ಕೇಳುತ್ತೇನೆಯೋ? ಎಂದು, 17. ಗಂಡರೈವರು ಮೂರುಲೋಕದ ಗಂಡರಾರು? ಹೆಸರಿಸಿ. 1 point ಭೀಮ ಮತ್ತು ಅರ್ಜುನ ಮಾತ್ರ ಬ್ರಹ್ಮ ವಿಷ್ಣು ಮಹೇಶ್ವರರು ನಕುಲ ಮತ್ತು ಸಹದೇವರು ಮಾತ್ರ ಧರ್ಮರಾಯ, ಭೀಮ, ಅರ್ಜುನ, ನಕುಲ ಮತ್ತು ಸಹದೇವ 18. ಹಡೆದವ್ವನನ್ನು ಯಾವಾಗ ನೆನೆಯಬೇಕು? 1 point ಹುಟ್ಟುಹಬ್ಬ ಮತ್ತು ಮದುವೆ ದಿನದಂದು ನಮಗೆ ಕಷ್ಟಕಾಲ, ಆಪತ್ಕಾಲ, ಗಂಡಾಂತರ ಬಂದಾಗ ಮಾತ್ರ ನೆನಯಬೇಕು. ಹಡೆದವನನ್ನು ಎಲ್ಲಿಯಾದರೂ ಯಾವ ಸಮಯದಲ್ಲಾದರೂ ನೆನೆಯಬಹುದು. ಆದರೆ ಜನಪದ ರ ಪ್ರಕಾರ ರಾತ್ರಿ ಜನರೆಲ್ಲ ಉಂಡು ಮಲಗಿದಾಗ, ಬೆಳಗಿನ ಬೆಳ್ಳಿಚುಕ್ಕಿ ಮೂಡಿದಾಗ ನೆನೆಯಬೇಕೆಂದಿದ್ದಾರೆ. 19. ಸಿದ್ಲಿಂಗಿ ಏಕೆ ರಾದ್ಧಾಂತ ಮಾಡಿದಳು? 1 point ಎರಡು ಎತ್ತುಗಳನ್ನು ಸಾಟಿ ಮಾಡಲೇಬೇಕು ಮತ್ತು ನನಗೆ ಬಂಗಾರವನ್ನು ಕೊಡಿಸಲೇಬೇಕೆಂದು ರಾದ್ಧಾಂತ ಮಾಡಿದಳು. ಮಗುವಿನ ಮೈಯಲ್ಲಿ ಸರಿಯಲ್ಲ, ಕೆಮ್ಮು ನಿಲ್ಲುತ್ತಿಲ್ಲ, ಶಿವನೂರು ಸ್ವಾಮಿಗಳಿಗೆ ತೋರಿಸಬೇಕೆಂದು ರಾದ್ಧಾಂತ ಮಾಡಿದಳು ಅದು ಹೇಗೋ ಬಸಲಿಂಗನಿಗೆ ಕಣ್ಣಿನ ಚಿಕಿತ್ಸೆ ಮಾಡಿದ ಡಾ. ತಿಮ್ಮಪ್ಪನವರು ಹೊಲೆಯ ಜಾತಿಗೆ ಸೇರಿದವರೆಂಬುದು ಸಿದ್ಲಿಂಗಿಗೆ ಗೊತ್ತಾಗಿ, ತಮ್ಮ ಜಾತಿ ಕೆಡಿಸಿದ ತನ್ನ ಗಂಡನ ಮೇಲೆ ಹಾಗೂ ಡಾ‌ತಿಮ್ಮಪ್ಪನವರ ಮೇಲೆ ಕೋಪಿಸಿಕೊಂಡು ರಾದ್ಧಾಂತ ಮಾಡಿದಳು. 20. ಕನ್ನಡದ ಸಮಸ್ಯೆಗಳು ಎಲ್ಲಿಯವರೆಗೆ ಇದ್ದೇ ಇರುತ್ತವೆ? 1 point ಪ್ರತಿಯೊಂದು ಊರಿನಲ್ಲಿ ಕನ್ನಡಪರ ಸಂಘಟನೆಗಳು ಹುಟ್ಟಿಕೊಳ್ಳುವವರೆಗೂ ಎಲ್ಲಿಯವರೆಗೆ ಕನ್ನಡಿಗರು ಪ್ರತಿ ವರ್ಷ ತಪ್ಪದೇ ನವೆಂಬರ್ ೦೧ ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದಿಲ್ಲವೋ ಎಲ್ಲಿಯವರೆಗೆ ಕನ್ನಡ ಭಾಷೆ ನಮ್ಮ ಆಡಳಿತದಲ್ಲಿ ಮತ್ತು ಶಿಕ್ಷಣದಲ್ಲಿ ಪ್ರಥಮವೂ ಪ್ರಧಾನವೂ ಆಗಿರುವುದಿಲ್ಲವೋ, ಎಲ್ಲಿಯವರೆಗೆ ಕನ್ನಡ ಜನ ಜೀವನವನ್ನು ತುಂಬಿಕೊಳ್ಳುವುದಿಲ್ಲವೋ, ಎಲ್ಲಿಯವರೆಗೆ ಕನ್ನಡಿಗರು ಸ್ವಾಭಿಮಾನಿಗಳಾಗುವುದಿಲ್ಲವೋ ಅಲ್ಲಿಯವರೆಗೂ 21. ಕೃಷ್ಣೇಗೌಡರ ಆನೆ ಹುಟ್ಟಿ ಬೆಳೆದ ಬಗೆ ಹೇಗೆ? 1 point ಕೃಷ್ಣೇಗೌಡರ ಆನೆ ಕಾಡಿನ ಒಂದು ಹೆಣ್ಣಾನೆ ಹಾಕಿದ ಮರಿಯಾಗಿದೆ, ಅದು ಕಾಡಿನಲ್ಲಿ ಎಲ್ಲಾ ಆನೆಗಳೊಂದಿಗೆ ಓಡಾಡಿಕೊಂಡು ಬೆಳೆದಿದೆ. ಕೃಷ್ಣೇಗೌಡನ ಆನೆ ಕಾಡಿನಿಂದ ಹಿಡಿದು ತಂದು ಪಳಗಿಸಿದ ಆನೆಯಲ್ಲ,ಮೂಡಿಗೆರೆಯ ಘಟ್ಟದ ಕೆಳಗಿದ್ದ ಗೂಳೂರು ಮಠದ ಹೆಣ್ಣಾನೆ ಹಾಕಿದ ಮರಿಯೇ ಈ ಕೃಷ್ಣೇಗೌಡರ ಆನೆ, ಇದು ಹುಟ್ಟಿ ಬೆಳೆದಿದ್ದು ಪೇಟೆ ಬೀದಿಯಲ್ಲಿ, ಎಲ್ಲಾ ಊರಿನ ಜನರ ನಡುವೆ. ಈ ಆನೆಗೆ ಕಾಡಿನ ಬಗ್ಗೆ ಆಗಲಿ, ಕಾಡಾನೆಗಳ ಬಗ್ಗೆ ಆಗಲಿ ಯಾವುದೇ ತಿಳುವಳಿಕೆ ಇರಲಿಲ್ಲ. 22. ಸೊರಗಿದ್ದ ಆನೆಯನ್ನು ಕೃಷ್ಣೇಗೌಡ ಹೇಗೆ ಸಾಕಿದ? 1 point ಕೃಷ್ಣೇಗೌಡ ಆನೆಗೆ ದಿನಕ್ಕೆ ಎರಡು ಲೀಟರ್ ಷರಾಬು ಕೊಡುತ್ತಿದ್ದನು. ಮತ್ತು ದಿನಕ್ಕೆ ಎರಡು ಬಾರಿ ಸ್ನಾನ ಮಾಡಿಸಿ, ಕಾಡಿನ ಹಣ್ಣು ಹಂಪಲಗಳನ್ನು ಕೊಟ್ಟು ಸಾಕಿದನು. ಗೂಳೂರು ಮಠದಲ್ಲಿ ಕೇವಲ ಒಣಹುಲ್ಲು, ಮೊಸರನ್ನ ತಿಂದು ಸೊರಗಿದ್ದ ಆನೆಗೆ ಕೃಷ್ಣೇಗೌಡರು ಬಯನೆ ಸೊಪ್ಪು, ಹಸಿಹುಲ್ಲು, ಹಿಂಡಿ, ಬೆಲ್ಲ, ಗೆಣಸು ಎಲ್ಲವನ್ನು ತಿನ್ನಿಸಿ ಪಗಡುದಸ್ತಾಗಿ ಬೆಳೆಸಿದರು. 23. ಹುಚ್ಚು ನಾಯಿಗಳು ಆಸ್ಪತ್ರೆಯಲ್ಲಿ ಹೇಗೆ ವರ್ತಿಸುತ್ತವೆ ಎಂದು ಪುಟ್ಟಯ್ಯ ಹೇಳಿದ? 1 point ಹುಚ್ಚು ನಾಯಿಗಳು ಆಸ್ಪತ್ರೆಯಲ್ಲಿ ನರ್ತನ ಮಾಡುತ್ತಿದ್ದವು ಮತ್ತು ಗೊರಕೆ ಹೊಡೆಯುತ್ತಾ ಮಲಗಿಕೊಂಡಿರುತ್ತಿದ್ದವು. ಹುಚ್ಚು ನಾಯಿಗಳಲ್ಲಿ ಧೈರ್ಯದ ಪ್ರಶ್ನೆನೇ ಬರಲ್ಲ, ಅವಕ್ಕೆ ತಲೆಕೆಟ್ಟು ಕಂಡಕಂಡಿದ್ದಕ್ಕೆಲ್ಲ ಕಚ್ಚುತ್ತವೆ, ಮೊನ್ನೆ ಆ ಹುಚ್ಚು ನಾಯಿಗಳು ಆಸ್ಪತ್ರೆಯ ಮೇಜು ಕುರ್ಚಿಯ ಕಾಲುಗಳಿಗೆಲ್ಲ ಕಚ್ಚಿವೆ. 24. ಬಹುರೂಪಿಣಿ ವಿದ್ಯೆಯು ರಾವಣನಿಗೆ ಏನೆಂದು ಆಶ್ವಾಸನೆಯಿತ್ತಿತು? 1 point ಯುದ್ಧದಲ್ಲಿ ನಿನ್ನ ಇತರೆ ವೈರಿಗಳನ್ನು ಬಿಟ್ಟು, ರಾಮ ಲಕ್ಷ್ಮಣರನ್ನು ಖಂಡಿತ ಉಳಿಸುವುದಿಲ್ಲ. ಸೀತೆ ಮತ್ತು ನಿನ್ನನ್ನು ಕೂಡುವಂತೆ ಮಾಡಿ ಇಬ್ಬರನ್ನು ಲಂಕೆಗೆ ರಾಜರಾಣಿಯರನ್ನಾಗಿ ಮಾಡುತ್ತೇನೆ. ಯುದ್ಧದಲ್ಲಿ ರಾಮ ಮತ್ತು ಲಕ್ಷ್ಮಣರನ್ನು ಬಿಟ್ಟು, ಉಳಿದರೆಲ್ಲರನ್ನು ನಾಶಗೊಳಿಸುತ್ತೇನೆ ,ಉಳಿಸುವುದಿಲ್ಲ. 25. ಹಿತ್ತಾಳೆಗಿಂತ ಬಲುಹೀನ ಯಾವುದು? 1 point ತಾಳೆಗಿಂತ ಬಲುಹೀನ ಕಬ್ಬಿಣ, ಪ್ಲಾಸ್ಟಿಕ್ ಮತ್ತು ಮನೆಯ ಉಪಕರಣಗಳು. ಸಜ್ಜನರ ಸಂಗ ಹಿತ್ತಾಳೆಗಿಂತ ಬಲುಹೀನ. ಜನಪದರ ಪ್ರಕಾರ ಉತ್ತಮರ ಗೆಳೆತನ ಪುತ್ಥಳಿ ಬಂಗಾರದಂತೆ, ಆದರೆ,ಬುದ್ಧಿಗೇಡಿಗಳ/ಮತಿಹೀನರ ಗೆಳೆತನ ಹಿತ್ತಾಳೆಗಿಂತ ಬಲುಹೀನ. 26. ಡಾ. ಚಂದ್ರಪ್ಪನವರು ಬಸಲಿಂಗನಿಗೆ ಡಾ. ತಿಮ್ಮಪ್ಪನ ಬಗ್ಗೆ ಕೊಟ್ಟ ಅಭಿಪ್ರಾಯವೇನು? 1 point ಡಾಕ್ಟರ್ ತಿಮ್ಮಪ್ಪನವರು ವೈದ್ಯಲೋಕ ಕಂಡ ಅತ್ಯಂತ ದುರ್ಬಲ ವ್ಯಕ್ತಿಯಾಗಿದ್ದಾರೆ. ಡಾಕ್ಟರ್ ತಿಮ್ಮಪ್ಪನವರಿಗೆ ಯಾವುದೇ ಶಾಸ್ತ್ರ ಚಿಕಿತ್ಸೆಯ ವಿಧಾನಗಳು ಸರಿಯಾಗಿ ಗೊತ್ತಿಲ್ಲ. ಡಾ.ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ. ಅವರು ನಮ್ಮ ವೈದ್ಯಲೋಕ ಬಲ್ಲ ಅತ್ಯಂತ ಪ್ರಾಮಾಣಿಕ ಮತ್ತು ಪ್ರತಿಭಾವಂತರು. ಈ ನಿನ್ನ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು, ನೀನು ಅವರನ್ನು ಕಂಡರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ. 27. ಮಾರ್ಷ್ ನನ್ನು ಕಂಡು ಆದಿವಾಸಿಗಳು ಹೇಗೆ ಪ್ರತಿಕ್ರಿಯಿಸಿದರು? 1 point ಆದಿವಾಸಿಗಳು ಮಾರ್ಷ್ ನ ಹತ್ತಿರ ಹೋಗಿ ಅವನಿಗೆ ಬೆದರಿಸಿ ಕಾಡಿನಿಂದ ಓಡಿಸುತ್ತಾರೆ. ಆದಿವಾಸಿಗಳು ಮಾರ್ಷ್ ನ ಕುದುರೆಯನ್ನು ಅಪಹರಿಸಿಕೊಂಡು ಆ ಕಾಡಿನಿಂದ ಮಾಯವಾಗುತ್ತಾರೆ. ಮಾರ್ಷ್ ನ ಕುದುರೆಯ ಖುರಪುಟದ ಸದ್ದಿಗೆ ಆದಿವಾಸಿಗಳು ದಿಗಿಲುಗೊಂಡರು, ಟೋಪಿ ಧರಿಸಿದ ನಾಜೂಕು ಪೋಷಾಕಿನ ಮಾರ್ಷ್ ಮತ್ತು ಆವರಿಗೂ ನೋಡಿರದ ಕುದುರೆ ಈ ಎರಡು ವಿಚಿತ್ರಗಳನ್ನು ಒಮ್ಮೆಲೇ ಕಂಡು ಅವರು ಹೆದರಿಕೊಂಡು ಮಕ್ಕಳನ್ನು ಎಳೆದುಕೊಂಡು ದಟ್ಟವಾದ ಅಡವಿಯಲ್ಲಿ ಮಿಂಚಿನಂತೆ ಮಾಯವಾದರು. 28. ನಾಯಿಯನ್ನು ಕೊಲ್ಲದೆ ನೌಕರರು ಸುಳ್ಳು ಹೇಳಿರುವರೆಂದು ನಿರೂಪಕರು ಯಾವ ಸಲಹೆ 1 point ನೀಡಿದರು? ನಾಯಿಯನ್ನು ಕೊಂದು ನಂತರ ಅದನ್ನು ತುಂಡು ತುಂಡಾಗಿ ಕತ್ತರಿಸಿ ತೋರಿಸಬೇಕು ಪ್ರತಿಯೊಂದು ಬೀದಿಯಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಲೇಬೇಕು. ನೋಡ್ರೀ ಖಾನ್ ಸಾಹೇಬ್ರೆ ನಿಮ್ಮ ನೌಕರರು ನಾಯಿಯನ್ನು ಕೊಲ್ಲದೆ ಸುಳ್ಳು ಲೆಕ್ಕ ಕೊಟ್ಟಿದ್ದಾರೆ, ನೀವೊಂದು ಕೆಲಸ ಮಾಡಿ ಇನ್ನು ಮೇಲೆ ನಾಯಿಗಳನ್ನು ಕೊಂದರೆ ಆ ನಾಯಿಯ ಬಾಲ ತೆಗೆದುಕೊಂಡು ಬರಬೇಕು ಎಂದು ಹೇಳಿ, ಆವಾಗ ಅವರ ಲೆಕ್ಕ ಸುಳ್ಳೋ ನಿಜವೋ ತಿಳಿಯುತ್ತೆ. 29. ರಾವಣ ತನ್ನ ಅಂತಃಪುರದ ಸ್ತ್ರೀಯರನ್ನು ಹೇಗೆ ಸಂತೈಸಿದನು? 1 point ದಯವಿಟ್ಟು ಯಾರೂ ಚಿಂತಿಸಬೇಡಿ ನಿಮಗೆಲ್ಲರಿಗೂ ನಿಮ್ಮ ಇಚ್ಛೆಯಂತೆ ಆಭರಣಗಳನ್ನು ಕೊಡುತ್ತೇನೆ. ಯಾರೂ ಕೂಡ ಯೋಚಿಸಬೇಡಿ ನಿಮ್ಮ ಆಸೆಯಂತೆ ನಿಮಗೆ ತಕ್ಕ ವರವನ್ನು ಹುಡುಕಿ ಮದುವೆ ಮಾಡುತ್ತೇನೆ. ನಿಮಗೆ ಇಷ್ಟೊಂದು ತೊಂದರೆಯನ್ನು ನೀಡಿದ ಆ ಅಂಗದಾದಿಗಳನ್ನು ಕ್ಷಣಮಾತ್ರದಲ್ಲೇ ಸೆರೆ ಹಿಡಿದು ತಂದು, ನಿಮ್ಮ ಮುಂದೆ ನಾನಾ ಪ್ರಕಾರವಾಗಿ ಅವರಿಗೆ ಅವಮಾನಿಸುತ್ತೇನೆ. 30. ಬಡತನ ಹೇಗೆ ಬಯಲಾಯಿತು? 1 point ಶ್ರೀಮಂತರು, ಉಳ್ಳವರು ನೀಡುವ ಭಿಕ್ಷೆಯಿಂದಾಗಿ ಬಡವರ ಬಡತನ ಬಯಲಾಗುತ್ತದೆ ಬಡತನದಿಂದ ಬಳಲುವವರು ಶ್ರೀಮಂತರ ಮನೆ ಹೊಕ್ಕು ದೋಚಿಕೊಂಡು ಬಂದಾಗ ಬಡತನ ಮಾಯವಾಗುತ್ತದೆ ಮಕ್ಕಳಿಗೆ ಬಡತನದ ನೋವನ್ನು ಮರೆಸುವ ಶಕ್ತಿ ಇರುತ್ತದೆ. ಬಡತನದ ಚಿಂತೆಯಲ್ಲಿರಬೇಕಾದರೆ ಮಕ್ಕಳು ಹಾಡುತ್ತಾ ಬಂದು ತೊಡೆಯ ಮೇಲೆ ಕುಳಿತು ಆಡಿದರೆ ಬಡತನ ಮಾಯವಾಗುತ್ತದೆ. 31. ಬಸಲಿಂಗನಿಗೆ ಅದು ಪುರುಸೊತ್ತಿಲ್ಲದ ಕಾಲ ಏಕೆ? 1 point ಏಕೆಂದರೆ ಆ ಊರಿನಲ್ಲಿ ನಡೆಯುವ ಜಾತ್ರೆಯಲ್ಲಿ ತನ್ನ ಎತ್ತುಗಳನ್ನು ಪ್ರದರ್ಶನ ಮಾಡಬೇಕಾಗಿತ್ತು. ಬಸಲಿಂಗನ ಎರಡು ಎತ್ತುಗಳು ಕಾಣೆಯಾಗಿದ್ದರಿಂದ ಜಾತ್ರೆಯಲ್ಲಿ ಅವುಗಳನ್ನು ಹುಡುಕಿಕೊಂಡು ಹೋಗಬೇಕಾಯಿತು. ಏಕೆಂದರೆ ದುಡಿಯುವುದನ್ನು ಅಥವಾ ಉಳಿಮೆ ಮಾಡುವುದನ್ನು ನಾಲ್ಕು ದಿನ ತಡ ಮಾಡಿದರೆ ನೇಗಿಲನ ಕುಳ ನೆಲದಲ್ಲಿ ನಾಟುವುದಿಲ್ಲ. ಇದಲ್ಲದೆ ಆತನ ಎರಡು ಎತ್ತುಗಳಲ್ಲಿ ಒಂದು ಬಹಳ ಸೋಮಾರಿಯಾಗಿತ್ತು. 32. ಕೈಗಾರಿಕೋದ್ಯಮಿಗಳಿಂದ ಕಾಡು ನಾಶವಾದುದು ಹೇಗೆ? 1 point ಕೈಗಾರಿಕೋದ್ಯಮಗಳ ಘರ್ಷಣೆಯಿಂದ ಹಾಗೂ ಭಯೋತ್ಪಾದಕರ ಬಾಂಬ್ ಸ್ಪೋಟದಿಂದಾಗಿ ಕಾಡು ನಾಶವಾಯಿತು ಕಾಡಿನ ಗರ್ಭಪಾತ ಶುರುವಾಯಿತು, ಗಗನಚುಂಬಿ ಮರಗಳು ನೆಲಕ್ಕೆ ಉರುಳಿದವು. ಮರದ ದಿಮ್ಮಿಗಳನ್ನು ಕೊಳ್ಳಲು ಕಂಟ್ರಾಕ್ಟರ್ ಗಳು ಆಗಮಿಸಿದರು, ಫಲವತ್ತಾದ ಭೂಮಿಯಲ್ಲಿ ರಸ್ತೆ ನಿರ್ಮಾಣವಾಯಿತು. ಲಾರಿ, ಟ್ರ್ಯಾಕ್ಟರ್ ಗಳಿಂದ ಕಾಡಿನ ನೀರವತೆ/ನಿಶಬ್ದ ನಾಶವಾಗಿ, ಚಹಾ ತೋಟಗಳು ಏಕಸ್ವಾಮ್ಯತೆ ಪಡೆದುಕೊಂಡವು. 33. ನಮ್ಮ ಕಡೆ ಕೆಮ್ಮು ಕಾಲಿಂಗ್ ಬೆಲ್ ಇದ್ದಹಾಗೆ ಎಂದು ನಿರೂಪಕರು ಹೇಳುವುದೇಕೆ? 1 point ಕಾಡಾನೆಗಳು ಊರಿನ ಮನೆಗಳಿಗೆ ದಾಳಿ ಮಾಡಿದಾಗ ಜನರು ಅದರಿಂದ ಪಾರಾಗಲು ಕೆಮ್ಮಿ ಕ್ಯಾಕರಿಸಿ ಗಲಾಟೆ ಮಾಡುತ್ತಾರೆ. ಮೂಡಿಗೆರೆಯಲ್ಲಿ ಪ್ರತಿಯೊಂದು ಮನೆಯ ಕಾಲಿಂಗ್ ಬೆಲ್ ಕೆಮ್ಮಿ ಕ್ಯಾಕರಿಸಿ ಉಗುಳುವ ಶಬ್ದವನ್ನು ಮಾಡುವುದರಿಂದ ಮನೆಯ ಬಳಿಗೆ ಬಂದವರು ಕಣ್ಣಿಗೆ ಯಾರೂ ಬೀಳದಿದ್ದರೆ ಅವರ ಗಮನ ಸೆಳೆಯಲು ಕೆಮ್ಮುವುದು ಮತ್ತು ಕ್ಯಾಕರಿಸಿ ಗಲಾಟೆ ಮಾಡುತ್ತಾರೆ. ಸ್ವಾಮಿ ಎನ್ನಬೇಕೊ, ಏಕವಚನ ಉಪಯೋಗಿಸಬೇಕೊ, ಇಲ್ಲವೇ ಬಹುವಚನ ಉಪಯೋಗಿಸಬೇಕೊ, ಬಹುಷಃ ಭಾಷೆ ಉಪಯೋಗಿಸಿ ಕರೆಯಬೇಕೆಂದರೆ ಹಲವಾರು ತೊಂದರೆಗಳು ಎದುರಾಗಬಹುದು. 34. "ಜ್ಯೋತಿ ನಿನ್ನ್ಯಾರ ಹೋಲರ"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಜನಪದರು ಗ್ರಾಮೀಣ ದೇವಸ್ಥಾನದ ಜ್ಯೋತಿಯನ್ನು ಕುರಿತು ವರ್ಣಿಸುವಾಗ ಈ ಮಾತನ್ನು ಹೇಳಿದ್ದಾರೆ. ಜನಪದ--ಗರತಿಯಹಾಡು-- ಹಬ್ಬಲಿ ಅವರ ರಸಬಳ್ಳಿ (ಪದ್ಯ ಪಾಠ) ಜನಪದರು ತಾಯಿಯ ಶ್ರೇಷ್ಠತೆಯನ್ನು ಕುರಿತು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ. ತಾಯಿಗಿಂತ ಬಂಧುವಿಲ್ಲ, ದೇವರಿಲ್ಲ ಎಂಬುದೇ (ತಾಯಿಯ ಶ್ರೇಷ್ಠತೆ ಮತ್ತು ಮಹತ್ವವನ್ನು ಸಾದರಪಡಿಸುವುದು) ಇಲ್ಲಿನ ಸ್ವಾರಸ್ಯ. 35. "ಹಾಡುವುದು ಅವುಗಳಿಗೆ ಅನಿವಾರ್ಯ, ಅವುಗಳ ಕರ್ಮ"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಬಸವಣ್ಣನವರು ತಮ್ಮ ವಚನದಲ್ಲಿ ಸಂಗೀತಗಾರನ ಹಾಡಿನ ಮಹತ್ವವನ್ನು ಕುರಿತು ಹೇಳುವಾಗ ಈ ಮಾತನ್ನು ಹೇಳಿದ್ದಾರೆ. ಕೆ ಪುಟ್ಟಸ್ವಾಮಿ, ಕೃಪಾಕರ ಮತ್ತು ಸೇನಾನಿ-- ಜೀವಜಾಲ-- ವಾಲ್ಪರೈ ಅಭಿವೃದ್ಧಿ ತಂದ ದುರಂತ (ಗದ್ಯಪಾಠ) ವಾಲ್ಪರೈ ಕಾಡಿನಲ್ಲಿರುವ ವಿಷಲಿಂಗ್ ಥ್ರಷ್ ಗಳ ಹೀನಾಯ ಸ್ಥಿತಿಯನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ. ಜೀವಿಗಳ ಹುಟ್ಟುಗುಣ ಹಾಗೂ ಹಾಡುವ ಹಕ್ಕಿಗಳ ಹೀನಾಯ ಸ್ಥಿತಿ ಇಲ್ಲಿನ ಸ್ವಾರಸ್ಯ. 36. "ಈ ಅದೃಷ್ಟ ನಿನಗೂ ಇತ್ತಲ್ಲೇ" (ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಸೀತಾಳ ತಂದೆ ಸೀತಾಳ ಜೀವನವನ್ನು ಕುರಿತು ಹೇಳುವಾಗ ಲೇಖಕಿ ನೇಮಿಚಂದ್ರರಿಗೆ ಈ ಮಾತನ್ನು ಹೇಳುತ್ತಾರೆ ನೇಮಿಚಂದ್ರ-- ಬದುಕು ಬದಲಿಸಬಹುದು-- ಆಯ್ಕೆಯಿದೆ ನಮ್ಮ ಕೈಯಲ್ಲಿ (ಗದ್ಯಪಾಠ) ಲೇಖಕಿ ನೇಮಿಚಂದ್ರರು ತನ್ನ ಗೆಳತಿ ಸೀತಾಳ ಬಯಕೆ ಮತ್ತು ನಂಬಿಕೆಗಳು ಹೇಗಿದ್ದವು ಎಂಬುದನ್ನು ಕುರಿತು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ವ್ಯಕ್ತಿಗಳ ಜೀವನದಲ್ಲಿ ಬರುವ ಅದೃಷ್ಟ- ದುರಾದೃಷ್ಟ ಗಳು ಇಲ್ಲಿನ ಸ್ವಾರಸ್ಯವಾಗಿದೆ. 37. "ಹೊರಗಡೆಯಿಂದ ಎಕ್ಸ್ಪೋರ್ಟ್ ಆದವು"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಕೃಪಾಕರ ಸೇನಾನಿ, ಕೆ. ಪುಟ್ಟಸ್ವಾಮಿ--ಜೀವಜಾಲ---ವಾಲ್ಪರೈ ಅಭಿವೃದ್ಧಿ ತಂದ ದುರಂತ (ಗದ್ಯಪಾಠ) ಕೆಪಿ ಪೂರ್ಣಚಂದ್ರ ತೇಜಸ್ವಿ-- ಕಿರಗೂರಿನ ಗಯ್ಯಾಳಿಗಳು-- ಕೃಷ್ಣೇಗೌಡನ ಆನೆ (ದೀರ್ಘ ಗದ್ಯ) ಮುನಿಸಿಪಾಲಿಟಿ ಪ್ರೆಸಿಡೆಂಟ್ ಖಾನ್ ಸಾಹೇಬರು ತಮ್ಮ ನಾಯಿ ನಿರ್ಮೂಲನ ಯೋಜನೆಯನ್ನು ಕುರಿತು ನಿರೂಪಕರ ಜೊತೆ ಚರ್ಚಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ಮೂಡಿಗೆರೆಯಲ್ಲಿ ಬೀದಿ/ಕಂತ್ರಿ ನಾಯಿಗಳ ಹೆಚ್ಚಳಕ್ಕೆ ಖಾನ್ ಸಾಹೇಬರು ಕೊಡುವ ಕಾರಣವೇ ಇಲ್ಲಿನ ಸ್ವಾರಸ್ಯವಾಗಿದೆ. 38. "ಕೆಲವಂ ಬಲ್ಲವರಿಂದ ಕಲ್ತು"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಪುರಂದರದಾಸರು--- ದಾಸ ಸಾಹಿತ್ಯ ಸಂಪುಟ--- ಜಾಲಿಯ ಮರದಂತೆ (ಪದ್ಯಪಾಠ) ಪುಲಿಗೆರೆ ಸೋಮನಾಥ-- ಸೋಮೇಶ್ವರ ಶತಕ--ಪಗೆಯಂ ಬಾಲಕನೆಂಬರೇ (ಪದ್ಯಪಾಠ) ಜ್ಞಾನವನ್ನು ಹೊಂದುವ ಮಾರ್ಗ ಯಾವುದು ಎಂಬುದನ್ನು ಕುರಿತು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ. ಒಬ್ಬ ಮನುಷ್ಯನು ಸರ್ವಜ್ಞನಾಗುವ ರೀತಿ,ಬಗೆಯೇ ಇಲ್ಲಿನ ಸ್ವಾರಸ್ಯವಾಗಿದೆ. 39. "ಹಬ್ಬಲಿ ಅವರ ರಸಬಳ್ಳಿ"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಕುಮಾರವ್ಯಾಸ--ಕರ್ಣಾಟ ಭಾರತ ಕಥಾಮಂಜರಿ--ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಜನಪದ-- ಗರತಿಯಹಾಡು--ಹಬ್ಬಲಿ ಅವರ ರಸಬಳ್ಳಿ (ಪದ್ಯಪಾಠ) ಓರ್ವ ಹೆಣ್ಣುಮಗಳು ತನ್ನ ತವರಿಗೆ ಶುಭ ಹಾರೈಸುವ ಸಂದರ್ಭವನ್ನು ಕುರಿತು ಹೇಳುವಾಗ ಜನಪದರು ಈ ಮಾತನ್ನು ಹೇಳಿದ್ದಾರೆ. ಹೆಣ್ಣು ಮಗಳು ತನ್ನ ತವರಿನ ಬಗ್ಗೆ ಇಟ್ಟುಕೊಂಡಿರುವ ಅಭಿಮಾನ, ಪ್ರೀತಿ ಹಾಗೂ ಆರೈಕೆಯ ಗುಣಸ್ವಭಾವ ಇಲ್ಲಿನ ಸ್ವಾರಸ್ಯವಾಗಿದೆ. 40. "ಅದು ಅವರು ಆವರೆಗೂ ನೋಡಿರದ ಪ್ರಾಣಿ"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಕಾರ್ವೆರ್ ಮಾರ್ಷ್ ವಾಲ್ಪರೈ ಅರಣ್ಯವನ್ನು ಪ್ರವೇಶಿಸಿದಾಗ ಅವರಿಗೆ ಒಂದು ವಿಚಿತ್ರ ಕಾಡುಪ್ರಾಣಿ ಕಣ್ಣಿಗೆ ಬಿದ್ದಾಗ ಈ ಮೇಲಿನಂತೆ ಹೇಳುತ್ತಾರೆ. ಕೆ. ಪುಟ್ಟಸ್ವಾಮಿ, ಕೃಪಾಕರ ಮತ್ತು ಸೇನಾನಿ--ಜೀವಜಾಲ--ವಾಲ್ಪರೈ ಅಭಿವೃದ್ಧಿ ತಂದ ದುರಂತ (ಗದ್ಯಪಾಠ) ವಾಲ್ ಪರೈ ಅರಣ್ಯಕ್ಕೆ ಕಾರ್ವೆರ್ ಮಾರ್ಷ್ ಪ್ರವೇಶಿಸಿದಾಗ ಆದಿವಾಸಿಗಳ ಪ್ರತಿಕ್ರಿಯೆಯನ್ನು ಕುರಿತು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳುತ್ತಾರೆ. ಕಾಡಿನ ಆದಿವಾಸಿಗಳು ತಾವು ಕಂಡಿರದ ವಿಚಿತ್ರ ಪ್ರಾಣಿ ಕುದುರೆಯನ್ನು ಕಂಡು ದಿಗ್ಭ್ರಮೆಗೊಳ್ಳುವುದು ಇಲ್ಲಿನ ಸ್ವಾರಸ್ಯವಾಗಿದೆ. 41. "ನೋಡು ನಿನ್ನ ಎದುರು ಎರಡು ಆಯ್ಕೆಗಳಿವೆ"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಹಾ.ಮಾ.ನಾಯಕ--ಕನ್ನಡವನ್ನು ಕಟ್ಟುವ ಕೆಲಸ-- ಗದ್ಯಪಾಠ ನೇಮಿಚಂದ್ರ-- ಬದುಕು ಬದಲಿಸಬಹುದು-- ಆಯ್ಕೆಯಿದೆ ನಮ್ಮ ಕೈಯಲ್ಲಿ (ಗದ್ಯಪಾಠ) ಲೇಖಕಿ ನೇಮಿಚಂದ್ರರು ತನ್ನ ಗಂಡ ಕೀರ್ತಿಗೆ ಕಿಡ್ನಿ ಸ್ಟೋನ್ ತೊಂದರೆ ಆದಾಗ ಅದನ್ನು ಪರಿಹರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ ಮನುಷ್ಯರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಜೀವನದ ಯಶಸ್ಸಿಗೆ ಆಯ್ಕೆಗಳು ಮುಖ್ಯ ಎಂಬುದು ಇಲ್ಲಿನ ಸ್ವಾರಸ್ಯ. 42. "ಆನೆ ಸಾಕುವುದು ಎಲೆಕ್ಷನ್ಗೆ ನಿಂತ ಹಾಗೆ"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ರಾಜಕಾರಣಿಗಳು ಎಲೆಕ್ಷನ್ಗೆ ನಿಂತಾಗ ಆನೆಯನ್ನು ಕರೆದುಕೊಂಡು ಬಂದು ಪ್ರಚಾರ ಮಾಡುತ್ತಿರುವ ಸ್ವಾರಸ್ಯ. ಕೆಪಿ ಪೂರ್ಣಚಂದ್ರ ತೇಜಸ್ವಿ-- ಕಿರಗೂರಿನ ಗಯ್ಯಾಳಿಗಳು-- ಕೃಷ್ಣೇಗೌಡನ ಆನೆ (ದೀರ್ಘ ಗದ್ಯ) ಎಲ್ಲಾ ತರಹದ ವ್ಯವಹಾರಗಳಲ್ಲಿ ಸೋತ ಕೃಷ್ಣೇಗೌಡರು ಕೊನೆಗೆ ಆನೆಯನ್ನು ಖರೀದಿಸಿದ ಸಂದರ್ಭದಲ್ಲಿ ಮೂಡಿಗೆರೆಯ ಜನರು ಈ ಮೇಲಿನಂತೆ ಹೇಳುತ್ತಾರೆ. ಕೃಷ್ಣೇಗೌಡನು ಕಠಿಣ ವ್ಯವಹಾರಕ್ಕೆ ಕೈ ಹಾಕಿದ್ದು ಮತ್ತು ಆತನು ಆ ವ್ಯವಹಾರದಲ್ಲಿ ಯಶಸ್ವಿಯಾಗಿದ್ದು ಇಲ್ಲಿನ ಸ್ವಾರಸ್ಯ. 43. "ನಂಗೇನು ಈ ನಾಯಿಗಳನ್ನು ಕಂಡರೆ ಪ್ರೀತಿನಾ ಸ್ವಾಮಿ"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಜಬ್ಬಾರನಿಗೆ ನಾಯಿ ಕಚ್ಚಿದ್ದರ ಕುರಿತು ವೆಟರ್ನರಿ ಸ್ಟಾಕ್ ಮನ್ ಪುಟ್ಟಯ್ಯನು ನಿರೂಪಕರಿಗೆ ಈ ಮಾತನ್ನು ಹೇಳುತ್ತಾನೆ. ಕೆಪಿ ಪೂರ್ಣಚಂದ್ರ ತೇಜಸ್ವಿ-- ಕಿರಗೂರಿನ ಗಯ್ಯಾಳಿಗಳು-- ಕೃಷ್ಣೇಗೌಡನ ಆನೆ (ದೀರ್ಘ ಗದ್ಯ) ನಿರೂಪಕರು ಬೀದಿ/ಕಂತ್ರಿ ನಾಯಿಗಳ ಕುರಿತು ಮುನ್ಸಿಪಾಲಿಟಿ ಅಧ್ಯಕ್ಷ ಖಾನ್ ಸಾಹೇಬರ ಹತ್ತಿರ ಚರ್ಚಿಸುವ ಸಂದರ್ಭದಲ್ಲಿ ಖಾನ್ ಸಾಹೇಬರು ನಿರೂಪಕರಿಗೆ ಈ ಮಾತನ್ನು ಹೇಳುತ್ತಾರೆ. ಇಸ್ಲಾಂ ಧರ್ಮಕ್ಕೆ ತನ್ನದೇ ಆದ ವಿಶಿಷ್ಟವಾದ ಕಟ್ಟಳೆಗಳು ಇರುವುದು ಇಲ್ಲಿನ ಸ್ವಾರಸ್ಯ. 44. "ತೃಣವೇ ಪರ್ವತವಲ್ಲವೇ"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ದ್ರೌಪದಿ ತನಗೆ ಒದಗಿದ ಸಂಕಟವನ್ನು ಭೀಮನಲ್ಲಿ ಹೇಳಿಕೊಳ್ಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾಳೆ. ಪುಲಿಗೆರೆ ಸೋಮನಾಥ--- ಸೋಮೇಶ್ವರ ಶತಕ----ಪಗೆಯಂ ಬಾಲಕನೆಂಬರೇ (ಪದ್ಯಪಾಠ) ಸಕಾಲಕ್ಕೆ ಒದಗುವ ಸಹಾಯವೇ ಶ್ರೇಷ್ಠ ಎಂಬುವುದನ್ನು ಕುರಿತು ಹೇಳುವ ಸಂದರ್ಭದಲ್ಲಿ ಕವಿ ಈ ಮೇಲಿನಂತೆ ಹೇಳಿದ್ದಾರೆ. ಕಷ್ಟಕಾಲದಲ್ಲಿನ ಒಂದು ಚಿಕ್ಕ ಸಹಾಯವೇ ಶ್ರೇಷ್ಠವಾದದ್ದು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ. 45. "ನೀರುಬಿದ್ದರೆ ಕಣ್ಣು ಹೋಗುವ ಅಪಾಯವಿದೆ"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಲೇಖಕಿ ನೇಮಿಚಂದ್ರ ತನ್ನ ಗಂಡ ಕೀರ್ತಿಗೆ ಕಿಡ್ನಿ ಸ್ಟೋನ್ ಬಂದ ಸಂದರ್ಭದಲ್ಲಿ ಹೇಳುವ ಮಾತು ಪಿ.ಲಂಕೇಶ---ಸಮಗ್ರ ಕಥೆಗಳು--- ಮುಟ್ಟಿಸಿಕೊಂಡವನು (ಗದ್ಯಪಾಠ) ಡಾ.ತಿಮ್ಮಪ್ಪನವರು ಬಸಲಿಂಗನ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿ ವೈದ್ಯಕೀಯ ಸಲಹೆ ಸೂಚನೆಗಳನ್ನು ಕೊಡುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ವೈದ್ಯರು ರೋಗಿಗಳ ಬಗ್ಗೆ ತೋರಿಸುವ ವಿಶೇಷ ಪ್ರೀತಿ, ಕಾಳಜಿ, ಮುತುವರ್ಜಿ ಮತ್ತು ಎಚ್ಚರಿಕೆ ನೀಡುವುದು ಇಲ್ಲಿನ ಸ್ವಾರಸ್ಯವಾಗಿದೆ. 46. "ದುರಂತದ ಮೂಲ ಬೀಜಗಳು ಚಹಾ ಗಿಡದ ರೂಪದಲ್ಲಿ ಬಂದವು"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಚಹಾ ಗಿಡದ ತೋಟದ ಮಾಲೀಕರು ನಷ್ಟವನ್ನು ಅನುಭವಿಸಿದ ಸಂದರ್ಭವನ್ನು ವಿವರಿಸುವಾಗ ಈ ಮಾತು ಬಂದಿದೆ. ಕೆ.ಪುಟ್ಟಸ್ವಾಮಿ,ಕೃಪಾಕರ ಮತ್ತು ಸೇನಾನಿ----ಜೀವಜಾಲ----ವಾಲ್ಪರೈ ಅಭಿವೃದ್ಧಿ ತಂದ ದುರಂತ (ಗದ್ಯಪಾಠ) ಕಾರ್ವೇರ್ ಮಾರ್ಷನ ಚಹಾ ತೋಟಗಳ ಬಿತ್ತನೆಯನ್ನು ವಿಡಂಬಿಸುತ್ತಾ ಲೇಖಕರು ಈ ಮೇಲಿನ ಮಾತನ್ನು ಹೇಳಿದ್ದಾರೆ ಮನುಷ್ಯನ ಸ್ವಾರ್ಥ ಮೂಲ ಅಭಿವೃದ್ಧಿ ಕಾರ್ಯಗಳು ಮುಂದಿನ ದುರಂತಕ್ಕೆ ಕಾರಣ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ. 47. "ಆನೆಗೂ ಮಾನ ಮರ್ಯಾದೆ ಇರುತ್ತೆ ತಿಳಕೊ"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಈ ಮಾತನ್ನು ಆನೆಯ ಮಾವುತ ವೇಲಾಯುಧ ಲಾರಿಯ ಕ್ಲೀನರ್ ಗೆ ಮರದ ದಿಮ್ಮಿಗಳನ್ನು ಅನ್ ಲೋಡ್ ಮಾಡುವಾಗ ಹೇಳುತ್ತಾನೆ. ಕೆಪಿ ಪೂರ್ಣಚಂದ್ರ ತೇಜಸ್ವಿ--- ಕಿರಗೂರಿನ ಗಯ್ಯಾಳಿಗಳು---- ಕೃಷ್ಣೇಗೌಡನ ಆನೆ (ದೀರ್ಘಗದ್ಯ) ಕೃಷ್ಣೇಗೌಡನ ಆನೆ ರೆಹಮಾನನ ಪೆಟ್ಟಿಗೆ ಅಂಗಡಿಯನ್ನು ದೂಡಿ ಬೀಳಿಸಿದ ಗಲಾಟೆಯಲ್ಲಿ ಮೂಡಿಗೆರೆಯ ಜನರು ರೆಹಮಾನನಿಗೆ ಹೇಳುವ ಮಾತು ಇದಾಗಿದೆ. ಮನುಷ್ಯರಂತೆ ಪ್ರಾಣಿಗಳಿಗೂ ಕೂಡ ವ್ಯಕ್ತಿತ್ವ ಹಾಗೂ ಭಾವನೆಗಳು ಇರುತ್ತವೆ ಎಂಬುದು ಇಲ್ಲಿನ ಸ್ವಾರಸ್ಯ. 48. "ನಮ್ಮ ಭಾಷೆಯಲ್ಲಿ ಓದಿದ್ದೆ ಮೈಗೆ ಹತ್ತುವುದು"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ನೇಮಿಚಂದ್ರ--- ಬದುಕು ಬದಲಿಸಬಹುದು--- ಆಯ್ಕೆಯಿದೆ ನಮ್ಮ ಕೈಯಲ್ಲಿ--ಗದ್ಯಪಾಠ ಹಾ.ಮಾ.ನಾಯಕ---- ಕನ್ನಡವನ್ನು ಕಟ್ಟುವ ಕೆಲಸ (ಗದ್ಯಪಾಠ) ಶಿಕ್ಷಣ ಮಾಧ್ಯಮದ ಬಗ್ಗೆ ಲೇಖಕರು ಚರ್ಚಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ಮಾತೃಭಾಷೆಯಲ್ಲಿನ ಕಲಿಕೆಯು ಅರ್ಥಪೂರ್ಣವಾದದ್ದು ಮತ್ತು ಸುಲಭವಾದುದು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ. 49. "ನಮ್ಮ ಕಡೆ ಕೆಮ್ಮು ಕಾಲಿಂಗ್ ಬೆಲ್ ಇದ್ದಹಾಗೆ"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಈ ಮೇಲಿನ ಮಾತನ್ನು ದುರ್ಗಪ್ಪನು ಫಾರೆಸ್ಟರ್ ನಾಗರಾಜನಿಗೆ ಕೊಡಲಿ ವಿಚಾರವಾಗಿ ಹೇಳುತ್ತಾನೆ. ಕೆಪಿ ಪೂರ್ಣಚಂದ್ರ ತೇಜಸ್ವಿ---ಕಿರಗೂರಿನ ಗಯ್ಯಾಳಿಗಳು---ಕೃಷ್ಣೇಗೌಡನ ಆನೆ ದೀರ್ಘಗದ್ಯ ಜೀಪಿನ ಗೇರ್ ಬಾಕ್ಸ್ ರಿಪೇರಿ ಮಾಡುತ್ತಿದ್ದ ಲೇಖಕರ ಬಳಿ ಬಂದು ಲೈನ್ ಮನ್ ದುರ್ಗಪ್ಪ ಕೆಮ್ಮಿದ ಸಂದರ್ಭದಲ್ಲಿ ನಿರೂಪಕರು ಈ ಮಾತನ್ನು ಹೇಳಿಕೊಳ್ಳುತ್ತಾರೆ. ಭಾಷಾ ಗೊಂದಲಗಳನ್ನು ನಿವಾರಿಸಿಕೊಳ್ಳಲು ಕೆಮ್ಮಿ ಕ್ಯಾಕರಿಸಿ ಗಲಾಟೆ ಮಾಡುವುದು ಇಲ್ಲಿನ ಸ್ವಾರಸ್ಯವಾಗಿದೆ. 50. "ಅದೃಷ್ಟವನ್ನೇ ಅವಲಂಬಿಸಿ ಬದುಕಲು ಸಾಧ್ಯವೇ"(ಆಯ್ಕೆ/ ಸಂದರ್ಭ/ ಸ್ವಾರಸ್ಯ) 1 point ಹಾ.ಮಾ.ನಾಯಕ-- ಕನ್ನಡವನ್ನು ಕಟ್ಟುವ ಕೆಲಸ-- ಗದ್ಯಪಾಠ ನೇಮಿಚಂದ್ರ--ಬದುಕು ಬದಲಿಸಬಹುದು-- ಆಯ್ಕೆಯಿದೆ ನಮ್ಮ ಕೈಯಲ್ಲಿ(ಗದ್ಯ ಪಾಠ) ಬದುಕಿನಲ್ಲಿ ಅದೃಷ್ಟಕ್ಕಿಂತ ಪ್ರಯತ್ನ ಮುಖ್ಯ ಎಂದು ಹೇಳುವ ಸಂದರ್ಭದಲ್ಲಿ ಲೇಖಕಿ ಈ ಮಾತನ್ನು ಆಡಿದ್ದಾರೆ. ಜೀವನದಲ್ಲಿ ಅದೃಷ್ಟಕ್ಕಿಂತ ಮನುಷ್ಯನ ಪ್ರಯತ್ನ ಅತಿ ಮುಖ್ಯವಾದದ್ದು ಎಂಬುದೇ ಇಲ್ಲಿನ ಸ್ವಾರಸ್ಯವಾಗಿದೆ.

Use Quizgecko on...
Browser
Browser