6 Renaissance PDF
Document Details
Uploaded by SmartSugilite4181
Cotton University
Tags
Summary
This document provides an overview of the Renaissance, emphasizing its causes, key characteristics (humanism, classicism, vernacular languages) and notable contributions to literature. It details an important period in European history.
Full Transcript
# ಅಧ್ಯಾಯ 7 - ಆಧುನಿಕ ಯುಗದ ಆರಂಭ ## 7.2- ಪುನರುಜ್ಜಿವನ ಯೂರೋಪಿನ ಇತಿಹಾಸದಲ್ಲಿ 15 ರಿಂದ 16ನೇ ಶತಮಾನಗಳ ಅವಧಿಯನ್ನು 'ಪುನರುಜ್ಜಿವನ ಕಾಲ' ಎಂದು ಕರೆಯಲಾಗಿದೆ. ಪುನರುಜ್ಜಿವನದ ಇಂಗ್ಲೀಷ್ ಪದವಾದ ರೆನೈಸ್ಸಾನ್ಸ್ ಎಂಬುದು 'ರೆನಾಸರೀ' ಎಂಬ ಲ್ಯಾಟಿನ್ ಪದದಿಂದ ಬಂದಿದೆ. ಇದರ ಅರ್ಥ 'ಪುನರ್ಜನ್ಮ' ಅಥವಾ 'ಪುನರಾವಲೋಕನ' ಎಂಬುದಾಗಿದೆ. ಅಂದರೆ ಇದು ಪ್ರಾಚೀನ ಗ್ರೀಕ್...
# ಅಧ್ಯಾಯ 7 - ಆಧುನಿಕ ಯುಗದ ಆರಂಭ ## 7.2- ಪುನರುಜ್ಜಿವನ ಯೂರೋಪಿನ ಇತಿಹಾಸದಲ್ಲಿ 15 ರಿಂದ 16ನೇ ಶತಮಾನಗಳ ಅವಧಿಯನ್ನು 'ಪುನರುಜ್ಜಿವನ ಕಾಲ' ಎಂದು ಕರೆಯಲಾಗಿದೆ. ಪುನರುಜ್ಜಿವನದ ಇಂಗ್ಲೀಷ್ ಪದವಾದ ರೆನೈಸ್ಸಾನ್ಸ್ ಎಂಬುದು 'ರೆನಾಸರೀ' ಎಂಬ ಲ್ಯಾಟಿನ್ ಪದದಿಂದ ಬಂದಿದೆ. ಇದರ ಅರ್ಥ 'ಪುನರ್ಜನ್ಮ' ಅಥವಾ 'ಪುನರಾವಲೋಕನ' ಎಂಬುದಾಗಿದೆ. ಅಂದರೆ ಇದು ಪ್ರಾಚೀನ ಗ್ರೀಕ್ ಮತ್ತು ರೋಮ್‌ನ ಶ್ರೇಷ್ಠ ಸಂಸ್ಕೃತಿಗಳ ಪುನರ್ ಅಧ್ಯಯನ ಮಾಡುವುದಾಗಿದೆ. ಈ ಚಳುವಳಿಯು ತನ್ನ ಮತ್ತೆರಡು ಸಮಕಾಲೀನ ಘಟನಾವಳಿಗಳಾದ ಭೌಗೋಳಿಕ ಅನ್ವೇಷಣೆಗಳು ಹಾಗೂ ಧಾರ್ಮಿಕ ಸುಧಾರಣೆಗಳ ಮೇಲೆ ಪ್ರಭಾವ ಬೀರಿದೆ. ಇದು ಯೂರೋಪ್ ಜನತೆಯನ್ನು ಮಧ್ಯಯುಗದಿಂದ ಆಧುನಿಕ ಯುಗದತ್ತ ಕೊಂಡೊಯ್ದಿತು. ಆಟ್ಟೋಮನ್ ಟರ್ಕರಿಗೆ ಕಾನ್‌ಸ್ಟಾಂಟಿನೋಪಲ್ ವಶವಾದುದರಿಂದ ವಿದ್ವಾಂಸರು ಇಟಲಿಗೆ ಪಲಾಯನಗೈದರು. ಇಟಲಿಯ ವಿದ್ವಾಂಸರು, ಹೊಸ ವಿಚಾರಗಳು ಮತ್ತು ಜ್ಞಾನವನ್ನು ಸ್ವಾಗತಿಸಿದರು. ಇವು ಯೂರೋಪಿನ ಇತರೆ ರಾಷ್ಟ್ರಗಳಿಗೆ ಪಸರಿಸಿದವು. ಆದ್ದರಿಂದ ಇಟಲಿಯನ್ನು 'ಪುನರುಜ್ಜಿವನದ ಶಾಲೆ' ಅಥವಾ 'ಪುನರುಜ್ಜಿವನದ ತಾಲ್ನಾಡು' ಎಂದು ಕರೆಯಾಲಾಗಿದೆ. ### ಕಾರಣಗಳು: 1. **ಕಾನ್ ಸ್ಟಾಂಟಿನೋಪಲ್‌ನ ವಶ 1453:** ಆಟೋಮನ್ ಟರ್ಕರು ಕಾನ್ ಸ್ಟಾಂಟಿನೋಪಲ್ ಅನ್ನು ವಶಪಡಿಸಿಕೊಳ್ಳಲಾಗಿ, ಇಲ್ಲಿನ ವಿದ್ವಾಂಸರು ಇಟಲಿಗೆ ಪಲಾಯನ ಮಾಡಿದರು. ಇವರಿಗೆ ಇಟಲಿಯ ಪೋಪ್, ಪಾದ್ರಿಗಳು, ರಾಜಕುಮಾರರು ಹಾಗೂ ವ್ಯಾಪಾರಿಗಳು ಆಶ್ರಯ ನೀಡಿದರು. ಇದು ಪ್ರಾಚೀನ ಶ್ರೇಷ್ಠ ಸಾಹಿತ್ಯದ ಅಧ್ಯಯನಕ್ಕೆ ಪ್ರೋತ್ಸಾಹದಾಯಕ ವಾತಾವರಣ ನಿರ್ಮಿಸಿತು. ಆದ್ದರಿಂದ ಪುನರುಜ್ಜಿವನವು ಯೂರೋಪ್‌ನಲ್ಲಿ ಪ್ರಾರಂಭವಾಯಿತು. 2. **ಶಿಕ್ಷಣದ ಪ್ರಸಾರ:** ಯೂರೋಪ್‌ನ ವಿವಿಧ ಸ್ಥಳಗಳಲ್ಲಿ, ಅದರಲ್ಲೂ ಪ್ಯಾರಿಸ್, ಪಡುವಾ, ನೇಪಲ್ಸ್, ಆಕ್ಸ್‌ಫರ್ಡ್, ಬೋಲಾಗ್ನ ಮೊದಲಾದ ಕಡೆ ಕ್ಯಾಥೋಲಿಕರು ಸ್ಥಾಪಿಸಿದ ಮಿಷನರಿ ಶಾಲೆಗಳು ಹಾಗೂ ವಿಶ್ವವಿದ್ಯಾನಿಲಯಗಳು ಶಿಕ್ಷಣದ ಪ್ರಸಾರಕ್ಕೆ ಅವಕಾಶ ಮಾಡಿಕೊಟ್ಟವು. ಇವು ಹೊಸ ಚಿಂತನೆ ಹಾಗೂ ಕಲಿಕೆಗೆ ಮಹತ್ವ ನೀಡಿದವು. 14ನೇ ಶತಮಾನದಲ್ಲಿ ಪ್ರಾರಂಭವಾದ ಶಿಕ್ಷಣದ ಪ್ರಸಾರವು ಜನರ ದೃಷ್ಟಿಕೋನವನ್ನೇ ಬದಲಾಯಿಸಿತು. 3. **ಭೌಗೋಳಿಕ ಸಂಶೋಧನೆಗಳು:** 15 ಮತ್ತು 16ನೇ ಶತಮಾನಗಳಲ್ಲಿ ಯೂರೋಪಿಯನ್ನರು ಕಂಡುಹಿಡಿದ ಹೊಸ ಪ್ರದೇಶಗಳಿಂದಾಗಿ ಇವರಿಗೆ ಹೊಸ ಆದರ್ಶಗಳು, ವಿಚಾರಗಳು ಮತ್ತು ಜ್ಞಾನದ ಸಂಪರ್ಕ ದೊರೆಯಿತು. ಇದು ಚಿಂತನಾಕಾರರಿಗೆ ಕಾರಣ, ಅವಲೋಕನ ಮತ್ತು ಪ್ರಯೋಗಶೀಲತೆಗೆ ಮಹತ್ವ ನೀಡಲು ಪ್ರೋತ್ಸಾಹಿಸಿತು. ಇದು ಬೌದ್ಧಿಕ ದಿಗಂತವನ್ನು ವಿಸ್ತರಿಸಿತು. 4. **ಊಳಿಗಮಾನ್ಯ ಪದ್ಧತಿಯ ಅವನತಿ:** ಯೂರೋಪಿನಲ್ಲಿ ಅಧಿಕಾರಕ್ಕೆ ಬಂದ ಕೇಂದ್ರೀಕೃತ ರಾಜಪ್ರಭುತ್ವಗಳಿಂದ ಮಧ್ಯಯುಗದ ಅಂತ್ಯದಲ್ಲಿ ಊಳಿಗಮಾನ್ಯಪದ್ದತಿಯು ಅವನತಿಯಾಯಿತು. ರಾಜರುಗಳು ಪ್ರಜಾ ಕಲ್ಯಾಣ ಮತ್ತು ಶ್ರೇಷ್ಠ ಸಾಹಿತ್ಯವನ್ನು ಪ್ರೋತ್ಸಾಹಿಸಲು ಆಸಕ್ತಿ ತಳೆದಿದ್ದರು. ಆದ್ದರಿಂದ ಇವರು ಶಿಕ್ಷಣಕ್ಷೇತ್ರಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದರು. 5. **ಕಲೆ ಮತ್ತು ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹ:** ಯೂರೋಪಿನ ಜನತೆ ಪ್ರಾಚೀನ ಕಲೆ, ವಾಸ್ತುಶಿಲ್ಪ ಮತ್ತು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರಿದರು. ಇವರಿಗೆ ರಾಜರುಗಳು ಹಾಗೂ ಪಾದ್ರಿಗಳು ಹೆಚ್ಚು ಪ್ರೋತ್ಸಾಹ ನೀಡಿದರು. ಶ್ರೀಮಂತ ವರ್ತಕರು ಹಾಗೂ ಬ್ಯಾಂಕರ್‌ಗಳೂ ಪ್ರಮುಖ ಪಾತ್ರ ವಹಿಸಿದ್ದು ಪುನರುಜ್ಜಿವನಕ್ಕೆ ಒಂದು ಕಾರಣವಾಯಿತು. 6. **ಮುದ್ರಣ ಯಂತ್ರದ ಪಾತ್ರ:** ಹೊಸ ವಿಚಾರಗಳನ್ನು ಪ್ರಸಾರ ಮಾಡುವಲ್ಲಿ ಮುದ್ರಣಯಂತ್ರದ ಸಂಶೋಧನೆಯು ಪ್ರಮುಖ ಅಂಶವಾಗಿದೆ. ಅಪಾರ ಸಂಖ್ಯೆಯಲ್ಲಿ ಮುದ್ರಿತವಾದ ಪುಸ್ತಕಗಳು ಯೂರೋಪಿನ ಎಲ್ಲಾ ಮೂಲೆಗಳನ್ನು ತಲುಪಿದವು. ಉದಾಹರಣೆಗೆ ಎರಾಸ್ಮಸ್‌ನ ಕೃತಿಯಾದ 'ಪ್ರೆಸ್ ಅಂಡ್ ಫಾಲಿ'ಯ 24000 ಪ್ರತಿಗಳು ಒಂದೇ ವರ್ಷದಲ್ಲಿ ಮುದ್ರಿತವಾದವು. ಹೀಗೆ ಮುದ್ರಣ ಯಂತ್ರವು ಚಿಂತನೆಗಳನ್ನು ಪ್ರಸಾರ ಮಾಡುವಲ್ಲಿ ಎಷ್ಟು ಕ್ರಾಂತಿಕಾರಿಯಾಗಿದೆ ಎಂಬುದನ್ನು ತೋರಿಸುತ್ತದೆ. ### ಲಕ್ಷಣಗಳು: 1. **ಮಾನವತಾವಾದ:** ಇಟಲಿಯ ಬುದ್ದಿಜೀವಿಗಳ ಒಂದು ಗುಂಪು ಮಾನವತಾ ಚಳುವಳಿಯನ್ನು ಪ್ರಾರಂಭಿಸಿದರು. ಇವರು ಮಾನವನ ಬಗ್ಗೆ ಸಹಾನುಭೂತಿಯುಳ್ಳ ಅಧ್ಯಯನಕ್ಕೆ ಮುಂದಾಗುವುದರ ಮೂಲಕ ಮಾನವತಾವಾದವನ್ನು ಬೆಳೆಸಿದರು. ನಂತರದಲ್ಲಿ ಇದು ಯೂರೋಪ್‌ನಾದ್ಯಂತ ಹರಡಿತು. ಇವರು ವೈಚಾರಿಕ ಹಾಗೂ ಮಾನವಿಕ ಉದ್ದೇಶವುಳ್ಳವರಾಗಿದ್ದರು. ಮಾನವತಾವಾದಿಗಳು ಜನತೆಯಲ್ಲಿ ವಿಶಾಲ ಮತ್ತು ಮುಕ್ತ ಮನಸ್ಸು ಹಾಗೂ ವಿಮರ್ಶಾತ್ಮಕ ದೃಷ್ಟಿಕೋನಗಳನ್ನು ಬೆಳೆಸಿದರು. ಇವರು ಮೂಲತಃ ಶಾಸ್ತ್ರೀಯ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದರು. ಈ ಚಳುವಳಿಯು ಮಹಾನ್ ಮಾನವತಾವಾದಿ ಪೆಟ್ರಾರ್ಕ್ ನೇತೃತ್ವದಲ್ಲಿ ಪ್ರಾರಂಭವಾಯಿತು. ಈತನನ್ನು 'ಮಾನವತಾವಾದದ ಪಿತಾಮಹ' ಎಂದು ಕರೆಯಲಾಗಿದೆ ಹಾಗೂ 'ಪುನರುಜ್ಜಿವನದ ಪಿತಾಮಹ' ಎಂದೂ ಸಹ ಪರಿಗಣಿಸಲಾಗಿದೆ. ಡಾಂಟೆ, ಸಿಸಿರೋ, ಬೊಕಾಷಿಯೋ, ಸರ್ವಾಂಟ್ಸ್ ಮೊದಲಾದವರು ಇತರೆ ಪ್ರಮುಖ ಮಾನವತಾವಾದಿಗಳಾಗಿದ್ದಾರೆ. 2. **ಶಾಸ್ತ್ರೀಯ ಶೈಲಿಯ ಅನುಕರಣೆ [Classicism]:** ಯೂರೋಪಿನ ಪುನರುಜ್ಜಿವನ ಕಾಲದ ಮತ್ತೊಂದು ಪ್ರಮುಖ ಲಕ್ಷಣ ಎಂದರೆ ಶಾಸ್ತ್ರೀಯ ಶೈಲಿಯ ಅನುಕರಣೆ. ಈ ಚಳುವಳಿಯು ಪ್ರಾಚೀನ ಗ್ರೀಕ್ ಮತ್ತು ರೋಮನ್ ಶೈಲಿಗಳ ಬಗೆಗಿನ ಸ್ಫೂರ್ತಿಯನ್ನು ಹೆಚ್ಚಿಸಲು ಜನತೆಯಲ್ಲಿ ಆಸಕ್ತಿ ಮೂಡಿಸಿತು. ಇದು ಕಲೆ,ವಾಸ್ತುಶಿಲ್ಪ ಮತ್ತು ಸಾಹಿತ್ಯದಲ್ಲಿ ಹೊಸ ಶೈಲಿಯ ಭಾವನೆಗಳನ್ನು ವ್ಯಕ್ತಪಡಿಸಲು ಅನುಕೂಲವಾಯಿತು. ಒಟ್ಟಾರೆ ಇದು ಯೂರೋಪ್‌ನಲ್ಲಿ ಹೊಸ ಶೈಲಿಯ ಸಂಸ್ಕೃತಿಯ ಬೆಳವಣೆಗೆಗೆ ಪ್ರೋತ್ಸಾಹ ನೀಡಿತು. 3. **ಪ್ರಾದೇಶಿಕ ಭಾಷೆಗಳ ಬೆಳವಣೆಗೆ:** ಯೂರೋಪಿನಲ್ಲುಂಟಾದ ಪುನರುಜ್ಜಿವನದ ಪರಿಣಾಮವಾಗಿ ಪ್ರಾದೇಶಿಕ ಭಾಷೆಗಳಾದ, ಇಂಗ್ಲೀಷ್, ಜರ್ಮನ್, ಇಟಾಲಿಯನ್, ಸ್ಪ್ಯಾನಿಷ್ ಮೊದಲಾದವುಗಳು ಅಭಿವೃದ್ಧಿಗೊಂಡವು. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ಶ್ರೇಷ್ಠ ಸಾಹಿತ್ಯವು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರವಾಯಿತು ಅಥವಾ ಬರೆಯಲ್ಪಟ್ಟಿತು. ಈ ಪ್ರಯತ್ನಗಳಿಂದಾಗಿ ಶಾಸ್ತ್ರೀಯ ಸಾಹಿತ್ಯ ಜನಪ್ರಿಯವಾಯಿತಲ್ಲದೆ ಪ್ರಾದೇಶಿಕ ಭಾಷೆಗಳು ಅಭಿವೃದ್ಧಿಗೊಂಡವು. ### ಕೊಡುಗೆಗಳು: #### ಸಾಹಿತ್ಯ ಪುನರುಜ್ಜಿವನ ಚಳುವಳಿಯು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದೆ. ಮಾನವತಾವಾದ ಮತ್ತು ಶಾಸ್ತ್ರೀಯ ಶೈಲಿಗಳ ಅನುಸರಣೆ ಸಾಹಿತ್ಯದ ಪ್ರಮುಖ ಅಂಶವಾಗಿವೆ. ಇಟಲಿಯ ಬರಹಗಾರರು ಇಂಗ್ಲೀಷ್, ಸ್ಪಾನಿಷ್, ಡಚ್, ಫ್ರೆಂಚ್, ಮೊದಲಾದ ಬರಹಗಾರರಿಗೆ ಅಪಾರ ಸಾಹಿತ್ಯ ಸೃಷ್ಟಿಸಲು ಹೆಚ್ಚಿನ ಬೆಂಬಲ ಹಾಗೂ ಪ್ರೋತ್ಸಾಹ ನೀಡಿದರು. ಪೆಟ್ರಾರ್ಕ್‌ನು ಸುಮಾರು 200 ಲ್ಯಾಟಿನ್ ಮತ್ತು ಗ್ರೀಕ್ ಹಸ್ತ ಪ್ರತಿಗಳನ್ನು ಸಂಗ್ರಹಿಸಿದನು. ಇವನನ್ನು 'ಪುನರುಜ್ಜಿವನ ಚಳುವಳಿಯ ಉಷ: ತಾರೆ' ಎಂದು ಕರೆಯಲಾಗಿದೆ. | ಕ್ರ.ಸಂ | ಲೇಖಕ, | ರಾಷ್ಟ್ರ, | ಕೃತಿಗಳು | |---|---|---|---| | 1 | ಡಾಂಟೆ | 🇮🇹 | ಡಿವೈನ್ ಕಾಮಿಡಿ, ದಿ ಮೊನಾರ್ಕಿ | | 2 | ಪೆಟ್ರಾರ್ಕ್ | 🇮🇹 | ಲಾರಾ, ಆಫ್ರಿಕಾ | | 3 | ಮೆಕಿಯಾವೆಲ್ಲಿ | 🇮🇹 | ದಿ ಪ್ರಿನ್ಸ್, ದಿ ಹಿಸ್ಟರಿ ಆಫ್ ಫ್ಲಾರೆನ್ಸ್ | | 4 | ಬೊಕಾಷಿಯೋ | 🇮🇹 | ದಿ ಟೇಲ್ಸ್ ಆಫ್ ಡೆಕಾಮೆರಾನ್ ಹಾಗೂ ಲೈಫ್ ಆಫ್ ಡಾಂಟೆ | | 5 | ಸರ್ ಥಾಮಸ್ ಮೋರ್ | 🏴 | ಉಥೋಪಿಯಾ | | 6 | ಎಡ್ಕಂಡ್ ಸ್ಪೆನ್ಸರ್ | 🏴 | ಫೇರೀ ಕ್ಲೀನ್ | | 7 | ಜಾನ್ ಮಿಲ್ಟನ್ | 🏴 | ಪ್ಯಾರಡೈಸ್ ಲಾಸ್ಟ್, ಪ್ಯಾರಡೈಸ್ ರಿಗೇನ್ಸ್ | | 8 | ವಿಲಿಯಂ ಷೇಕ್‌ಸ್ಪಿಯರ್ | 🏴 | ವಿಲಿಯಂಷೇಕ್ ಸ್ಪಿಯರ್‌ನ ನಾಟಕಗಳು: ಜ್ಯೂಲಿಯಸ್ ಸೀಜರ್, ಹ್ಯಾಬ್ಲೆಟ್, ರೋಮಿಯೋ ಮತ್ತು ಜೂಲಿಯಟ್, ಒಥೆಲೋ, ಮ್ಯಾಕ್‌ಬೆತ್, ಕಿಂಗ್‌ಲಿಯರ್, ಕಾಮಿಡಿ ಆಫ್ ಎರರ್ಸ್ ಆಸ್ ಯು ಲೈಕ್ ಇಟ್, ದಿ ಟೆಂಪೆಸ್ಟ್, ದಿ ಟೈಲ್ಸ್ ನೈಟ್, ದಿ ವಿಂಟರ್ಸ್ ಟೇಲ್, ಮೊದಲಾದವು. | | 9 | ಮಿಗ್ಯುಯೆಲ್ ಸರ್ವಾಂಟ್ಸ್ | 🇪🇸 | ಡಾನ್ ಕಿಜೋಟ್ | | 10 | ಡೆಸಿಡೇರಿಯಸ್ ಎರಾಸ್ಮಸ್ | 🇳🇱 | ಪ್ರೈಸ್ ಅಂಡ್ ಫಾಲಿ, ಫೆಮಿಲಿಯರ್ ಕೊಲೊಕ್ಲೀಸ್ | | 11 | ಲಿಯೋನಾರ್ಡೊ ಬ್ರೂನಿ | 🇫🇷 | ಇಟಾಲಿಯನ್ ಭಾಷೆಗೆ ಅರಿಸ್ಟಾಟಲ್, ಪ್ಲೇಟೋ, ಸಾಕ್ರೆಟಿಸ್‌ರ ಕೃತಿಗಳ ಭಾಷಾಂತರ | #### ಕಲೆ ಮತ್ತು ವಾಸ್ತುಶಿಲ್ಪ: ಪುನರುಜ್ಜಿವನ ಕಾಲದ ಕಲೆ ಮತ್ತು ವಾಸ್ತುಶಿಲ್ಪವು ಸರಳ ಹಾಗೂ ನೈಜತೆಯಿಂದ ಕೂಡಿತ್ತು. ಇದು ನವ್ಯ ಮತ್ತು ಸ್ವತಂತ್ರ ದೃಷ್ಟಿಕೋನವನ್ನು ಹೊಂದಿದೆ. ಅಲ್ಲದೆ ಇದು ಚರ್ಚ್ ಹಿಡಿತದಿಂದ ಹೊರಬಂದು ಜಾತ್ಯಾತೀತವಾಯಿತು. ವಿಶೇಷವಾಗಿ ಕಲೆಯು ಮಾನವನಿಗೆ ಹತ್ತಿರವಾಯಿತು. ಪುನರುಜ್ಜಿವನ ಕಾಲದಲ್ಲಿ 'ಗೋಥಿಕ್ ವಾಸ್ತುಶಿಲ್ಪ' ಪದ್ಧತಿ ಬೆಳವಣೆಗೆಯಾಯಿತು. ಇದು ಗ್ರೀಕ್, ರೋಮನ್, ಡೋರಿಕ್, ಅಯೋನಿಕ್ ಮತ್ತು ಕೊರಿಂಥಿಯನ್ ಶೈಲಿಗಳ ಸಮ್ಮಿಶ್ರಣವಾಗಿತ್ತು. ಈ ಶೈಲಿಯು ಅಪಾರ ಪ್ರಮಾಣದ ಕಮಾನುಗಳು, ಗುಮ್ಮಟಗಳು, ಎತ್ತರವಾದ ಸ್ತಂಭಗಳು ಹಾಗೂ ಸುಂದರವಾದ ಅಲಂಕಾರಗಳನ್ನು ಒಳಗೊಂಡಿದೆ. ಈ ಕಾಲದ ವಾಸ್ತುಶಿಲ್ಪ ಕೃತಿಗಳು ಸಾಮಾನ್ಯವಾಗಿ ಕಲ್ಲಿನಿಂದ ನಿರ್ಮಾಣವಾಗಿವೆ. ಈ ಕಾಲದಲ್ಲಿ ದೊಡ್ಡ ಗಾತ್ರದ ಅರಮನೆಗಳು, ಚರ್ಚುಗಳು, ವಿಹಾರಗಳು ಮತ್ತು ಸಾರ್ವಜನಿಕ ಕಟ್ಟಡಗಳು ನಿರ್ಮಾಣವಾಗಿವೆ. ಆಲ್ಬರ್ಟಿ, ಮಾನೆಟ್ಟಿ, ಬೂಮ್‌ಲೆಶ್ಚಿ, ಬ್ರುಮಾಂಟೆ, ಮೈಕಲ್ ಏಂಜಲೋ ಮೊದಲಾದವರು ಈ ಕಾಲದ ಪ್ರಮುಖ ವಾಸ್ತುಶಿಲ್ಪಿಗಳಾಗಿದ್ದರು. | ಸ್ಥಳ | ವಾಸ್ತುಶಿಲ್ಪ ಹಾಗೂ ಕಲಾಕೃತಿಗಳು | |---|---| | ರೋಮ್ | ಮೆಡಿಸ್ಸಿ ಮತ್ತು ಫಾಸ್ ಅರಮನೆಗಳು, ಮೂರನೇ ಪೋಪ್ ಜೂಲಿಯಸ್‌ನ ಅರಮನೆ, ಸೇಂಟ್ ಪೀಟರ್‌ನ ಕೆಥಡ್ರಾಲ್ | | ಲಂಡನ್ | ಬ್ಯಾಂಕ್ವೆಟ್ ಹೌಸ್ (ವೈಟ್ ಹಾಲ್), ಸೇಂಟ್ ಪಾಲ್‌ನ ಕೆಥಡ್ರಾಲ್ | | ಫ್ಲಾರೆನ್ಸ್ | ಪಿಟ್ಟಿ ಅರಮನೆ | | ವೆನಿಸ್ | ಸೇಂಟ್ ಮಾರ್ಕ್ ಕೆಥಡ್ರಾಲ್, ಡೊಯಜ್ ಅರಮನೆ | | ಸ್ಪೇನ್ | ಪಿಕೊಲೊಮಿನಿ ಅರಮನೆ | | ವ್ಯಾಟಿಕ್‌ನ್ | ಸಿಸ್ಟನ್ ಚಾಪೆಲ್ | | ವೆನಿಸ್ | ಸೇಂಟ್ ಮಾರ್ಕ್ ಕೆಥಡ್ರಾಲ್ | ರೋಮ್ ಸೆಂಟ್ ಪೀಂಟರ್ಸ್ ಚರ್ಚ್ ಪುನರುಜ್ಜಿವನ ವಾಸ್ತುಶಿಲ್ಪದ ಪ್ರಮುಖ ಉದಾಹರಣೆಯಾಗಿದೆ. ಇದರ ನೆಲಹಾಸು ಯೋಜನೆಯು ಲ್ಯಾಟಿನ್ ಕ್ರಾಸ್ ಆಕಾರ ಹೊಂದಿದೆ. ಇದು ಬೃಹತ್ ಹಾಗೂ ಭವ್ಯವಾದ ಗುಮ್ಮಟಗಳನ್ನು ಒಳಗೊಂಡಿದೆ. ಈ ಚರ್ಚ್ ಮೈಕೇಲ್ ಏಂಜಲೋನ ಯೋಜನೆಯ ಪ್ರಕಾರ ನಿರ್ಮಾಣವಾಗಿದೆ. ಈ ಕಟ್ಟಡದ ಒಳಾಂಗಣವು ವರ್ಣರಂಜಿತ ಅಮೃತಶಿಲೆ ಹಾಗೂ ನಯವಾದ ಗಾರೆಗಳಿಂದ ಅಲಂಕೃತಗೊಂಡಿದೆ. ಈ ಕಟ್ಟಡದ ಉದ್ದ 600 ಅಡಿಗಳು, ಅಗಲ 450 ಅಡಿಗಳು, ಇದರ ಬೃಹತ್ ಗುಮ್ಮಟದ ವ್ಯಾಸವು 137 ಅಡಿಗಳಾಗಿದ್ದು, ಇದು ನೆಲಮಟ್ಟದಿಂದ 450 ಅಡಿಗಳಷ್ಟು ಎತ್ತರದಲ್ಲಿದೆ. #### ಶಿಲ್ಪಕಲೆ: ಪುನರುಜ್ಜಿವನ ಕಾಲದಲ್ಲಿ ಶಿಲ್ಪಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಲೊರೆಂಜೋ ಗಿಲ್ಬರ್ಟಿ, ಡೊನಾಟೆಲ್ಲೊ, ಮೈಕೇಲ್ ಏಂಜಲೋ ಮತ್ತು ಆಲ್‌ಬ್ರೆಕ್ಟ್ ಡ್ಯೂರರ್ ಪುನರುಜ್ಜಿವನ ಕಾಲದ ಪ್ರಮುಖ ಶಿಲ್ಪಕಾರರಾಗಿದ್ದಾರೆ. ಈ ಕಾಲದಲ್ಲಿ ರಚನೆಯಾದ ಪ್ರಮುಖ ಶಿಲ್ಪಕಲಾ ಕೃತಿಗಳು ಈ ಕೆಳಗಿನಂತಿವೆ. | ಶಿಲ್ಪಕಾರರು | ಶಿಲ್ಪಕೃತಿಗಳು | |---|---| | ಲೊರೆಂಜೋ ಗಿಲ್ಬರ್ಟಿ | ಫ್ಲಾರೆನ್ಸ್‌ನ ಬ್ಯಾಪ್ಟಿಸ್ಟ್ರಿ ಕಟ್ಟಡದ ಬಾಗಿಲುಗಳ ಕೆತ್ತನೆ | | ಡೊನಾಟೆಲ್ಲೋ | ಫ್ಲಾರೆನ್ಸ್‌ನ ಸೇಂಟ್ ಜಾರ್ಜ್‌ನ ಮೂರ್ತಿ, ವೆನಿಸ್‌ನ ಸೇಂಟ್ ಮಾರ್ಕ್‌ನ ಮೂರ್ತಿ. | | ಮೈಕೇಲ್ ಏಂಜಲೋ | ಫ್ಲಾರೆನ್ಸ್‌ನ ಸಿಸ್ಟಿನ್ ಚಾಪೆಲ್‌ನ ಒಳಮೇಲ್ಬಾವಣೆ, ಡೇವಿಡ್, ಮೋಸಸ್, ಪೀಟಾ ಮತ್ತು ದಿ ಬೌಂಡೆಡ್ ಪ್ಲೇವ್‌ನ ಮೂರ್ತಿಗಳು, ರೋಮ್ ಸೆಂಟ್ ಪೀಟರ್ಸ್ ಚರ್ಚ್‌ನ ಗುಮ್ಮಟ. | | ಆಲ್ಬರ್ಟ ಡ್ಯೂರರ್ | 'ದಿ ನೈಟ್ ಅಂಡ್ ಡೆತ್' ಮತ್ತು 'ಸೇಂಟ್ ಜೆರೋಮ್ ಇನ್ ಹಿಸ್ ಸ್ಟಡಿ' ಮೂರ್ತಿಗಳ ಕೆತ್ತನೆ. | #### ಚಿತ್ರಕಲೆ: ಪುನರುಜ್ಜಿವನ ಕಾಲದ ಪ್ರಮುಖ ಭವ್ಯತೆ ಎಂದರೆ ಚಿತ್ರಕಲೆ. ಈ ಕಾಲದ ಚಿತ್ರಕಲೆಯು ದಪ್ಪನಾದ ಬಟ್ಟೆ, ಗಾಜು, ಮರ ಹಾಗೂ ಇನ್ನಿತರ ಸಾಮಗ್ರಿಗಳ ಮೇಲೆ ಮೂಡಿಬಂದಿದೆ. ಇಲ್ಲಿ ತೈಲವರ್ಣಗಳ ತಂತ್ರಜ್ಞಾನದ ಮೇಲೆ ಪ್ರಭುತ್ವ ಸ್ಥಾಪಿಸಲಾಯಿತು ಚಿತ್ರಗಳಲ್ಲಿ ಗಾಢವಾದ ಬಣ್ಣಗಳ ಬಳಕೆಗೆ ಟಿಟಿಯಾನ್ ಪ್ರಖ್ಯಾತಿಯಾಗಿದ್ದನು. ಪೋಪ್‌ರು, ರಾಜರು, ವರ್ತಕರು ಚಿತ್ರಕಲೆಗೆ ಹೆಚ್ಚು ಪ್ರೋತ್ಸಾಹ ನೀಡಿದರು. ಫ್ಲಾರೆನ್ಸ್ ಶಾಲೆಯು ಪ್ರಮುಖ ಚಿತ್ರಕಾರರಾದ ಲಿಯೋನಾರ್ಡೊ ಡಾ ವಿಂಚಿ, ಮೈಕಲ್ ಏಂಜಲೋ, ರಾಫೆಲ್ ಮೊದಲಾದವರನ್ನು ಚಿತ್ರಕಲಾ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದೆ. ಇವರು ತಮ್ಮ ಅಸಾಧಾರಣ ಬುದ್ಧಿಶಕ್ತಿಯಿಂದ ಚರ್ಚ್‌ನ ಕಠಿಣ ನಿಯಮಗಳ ನಿರ್ಬಂಧ ಅಥವಾ ನಿಯಂತ್ರಣಗಳಿಂದ ಚಿತ್ರಕಲೆಯನ್ನು ಮುಕ್ತಗೊಳಿಸಿ ಅಭಿವೃದ್ದಿ ಪಡಿಸಿದರು. ಮಾನವೀಯ ಹಾಗೂ ಜಾತ್ಯಾತೀತ ದೃಷ್ಟಿಕೋನ ಹೊಂದಿದ್ದ ಇವರು ಹೆಚ್ಚು ಕಲಾತ್ಮಕ ಹಾಗೂ ಜೀವಂತ ಚಿತ್ರಗಳನ್ನು ರಚಿಸಿದರು. ಪುನರುಜ್ಜಿವನ ಕಾಲದ ಪ್ರಮುಖ ಚಿತ್ರಕಾರರು ಹಾಗೂ ಅವರ ಚಿತ್ರಕೃತಿಗಳನ್ನು ಈ ಕೆಳಗೆ ನೀಡಲಾಗಿದೆ. | ಚಿತ್ರಕಾರರು | ಚಿತ್ರಕೃತಿಗಳು | |---|---| | ಲಿಯೋನಾರ್ಡೊ ಡಾವಿಂಚಿ | ದಿ ಲಾಸ್ಟ್ ಸಪ್ಪರ್, ದಿ ಮೊನಾಲಿಸಾ, ವರ್ಜಿನ್ ಆಫ್ ದಿ ರಾಕ್ಸ್, ದಿ ವರ್ಜಿನ್ ಅಂಡ್ ಚೈಲ್ಡ್, ಹೆಡ್ ಆಫ್ ಎ ವುಮೆನ್, ಮಡೊನ್ನಾ ಲಿಟ್ಟಾ ಇತ್ಯಾದಿ. | | ಮೈಕೇಲ್ ಏಂಜಲೋ | ದಿ ಲಾಸ್ಟ್ ಜಡ್ಜ್‌ಮೆಂಟ್, ದಿ ಕ್ರಿಯೇಷನ್ ಆಫ್ ಆಡಮ್, ಡೇ ಅಂಡ್ ನೈಟ್, ಡಾನ್ ಅಂಡ ಸನ್ ಸೆಟ್, ಇತ್ಯಾದಿ. | | ಸ್ಯಾಂಜಿಯೋ ರಾಫೆಲ್ | ಸಿಸ್ಟಿನ್ ಮಡೋನ್ನಾ | | ಟಿಟಿಯಾನ್ | ದಿ ಅಸುಮ್‌ಪ್ಪನ್ ಆಫ್ ದಿ ವರ್ಜಿನ್ | #### ವಿಜ್ಞಾನ: ಪುನರುಜ್ಜಿವನವು ವೈಜ್ಞಾನಿಕ ಕ್ಷೇತ್ರಕ್ಕೆ ಮಹತ್ವಪೂರಿತ ಪ್ರೋತ್ಸಾಹ ನೀಡಿದೆ. ವಿಶೇಷವಾಗಿ ವಿಜ್ಞಾನದಲ್ಲಿ ಪರಿಶೀಲನೆ ಹಾಗೂ ಪ್ರಯೋಗಶೀಲ ತತ್ವಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಕಾಲದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಅದರಲ್ಲೂ ಭೌತಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ರಸಾಯನಶಾಸ್ತ್ರಗಳಲ್ಲಿ ಗಣನೀಯ ಪ್ರಗತಿಯುಂಟಾಯಿತು. 1500ರಲ್ಲಿ ಜಾಕೊಟ್ ನ್ಯೂಫರ್ (ಸಿಡ್ವರ್‌ಲ್ಯಾಂಡ್) ಎಂಬುವನು ಮಹಿಳೆಯೊಬ್ಬರಿಗೆ ಮೊದಲ ಬಾರಿಗೆ ಯಶಸ್ವಿ 'ಸಿಜೇರಿಯನ್ ಶಸ್ತ್ರಚಿಕಿತ್ಸೆ' ನಡೆಸಿದನು. ರೋಜರ್ ಬೇಕನ್ ಎಂಬುವನು ಮದ್ದಿನ ಪುಡಿಯ ಉಪಯೋಗ ಹಾಗೂ ಭೂತಗನ್ನಡಿಯನ್ನು ಅಭಿವೃದ್ಧಿಪಡಿಸಿದನು. ಲಿಯೋನಾರ್ಡೊ ಡಾ ವಿಂಚಿಯು 1480ರಲ್ಲಿ 'ಪ್ಯಾರಾಚೂಟ್' ಕಂಡುಹಿಡಿದನು. 'ಹಾರುವ ಯಂತ್ರದ ನಕಾಶೆ'ಯನ್ನು ತಯಾರಿಸಿದನು. ಇದು ಮುಂದೆ ವಿಮಾನಗಳನ್ನು ಕಂಡುಹಿಡಿಯಲು ಸ್ಪೂರ್ತಿಯಾಯಿತು. ನಿಕೋಲಾಸ್ ಕೊಪರ್‌ಕಸ್ (ಪೋಲೆಂಡ್)ನು ಖಗೋಳಶಾಸ್ತ್ರದ ಅಧ್ಯಯನದಲ್ಲಿ ಅಪಾರ ಸಾಧನೆ ಮಾಡಿದ್ದಾನೆ. ಈತನು ಪ್ರತಿಪಾದಿಸಿದ 'ಸೌರಕೇಂದ್ರಿತ ಸಿದ್ಧಾಂತ'ವು ಯೂರೋಪಿಯನ್ನರು ನಂಬಿದ್ದ 'ಭೂಕೇಂದ್ರಿತ ಸಿದ್ಧಾಂತ'ವನ್ನು ವಿರೋಧಿಸಿತು. ಈತನು “ಸೂರ್ಯನು ವಿಶ್ವದ ಕೇಂದ್ರಬಿಂದುವೆಂದೂ, ಭೂಮಿ ಹಾಗೂ ಇತರ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆ”. ಎಂದು ತಿಳಿಸಿದನು. ಜಾನ್‌ಕೆಪ್ಲರ್ (ಜರ್ಮನಿ)ನು ಕೋಪರ್‌ನಿಕಸ್‌ನ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದನು. ಈತನು “ಭೂಮಿ ಸೇರಿದಂತೆ ಇತರೆ ಗ್ರಹಗಳು ಸೂರ್ಯನ ಸುತ್ತ ಅಂಡಾಕಾರದಲ್ಲಿ (Elliptical)ದಲ್ಲಿ ಸುತ್ತುತ್ತವೆಂದು, ಕೋಪರ್‌ನಿಕನು ಪ್ರತಿಪಾದಿಸಿದಂತೆ ಇವು ದುಂಡಾಗಿ ಸುತ್ತುವುದಿಲ್ಲವೆಂದು ಪ್ರತಿಪಾದಿಸಿದನು. ಜರ್ಮನಿಯ ಹಾನ್ಸ್ ಲಿಪ್ಪರಿ ಎಂಬುವನು 1608ರಲ್ಲಿ 'ದೂರದರ್ಶಕ ಯಂತ್ರ'ವನ್ನು ಕಂಡು ಹಿಡಿದನು. ಇಟಲಿಯ ಗೆಲಿಲಿಯೋ ಎಂಬುವನು ದೂರದರ್ಶಕವನ್ನು ಅಭಿವೃದ್ದಿಪಡಿಸಿ, ಇದರ ಮೂಲಕ ಚಂದ್ರನ ಮೇಲಿನ ಪರ್ವತಗಳು ಹಾಗೂ ಶನಿಗ್ರಹವನ್ನು ಸುತ್ತುವರಿದಿರುವ ಬಳೆಯನ್ನು ವೀಕ್ಷಿಸಿದನು. ಸೌರವ್ಯೂಹವನ್ನು ಅಧ್ಯಯನ ಮಾಡಿದ ಈತನು ಕೋಪರ್‌ನಿಕಸ್ ಸಿದ್ದಾಂತವನ್ನು ವಿವರಿಸಿದನು. ದೂರದರ್ಶಕ ಯಂತ್ರದ ಮೂಲಕ ಪ್ರಪಂಚವು ನೈಸರ್ಗಿಕ ನಿಯಮಗಳ ನಿಯಂತ್ರಣಕ್ಕೆ ಒಳಪಟ್ಟಿದೆ ಎಂಬುದನ್ನು ದೃಢಪಡಿಸಿದನು. ಈತನು 'ಉಷ್ಣಮಾಪಕ' 'ವಾಯುಭಾರಮಾಪಕ' ಹಾಗೂ 'ಗಡಿಯಾರದ ಲೋಲಕ'(ಲಂಬಕ)ವನ್ನು ಕಂಡು ಹಿಡಿದನು. ಸರ್ ಐಸಾಕ್ ನ್ಯೂಟನ್ (ಇಂಗ್ಲೆಂಡ್) ನು 'ಗುರುತ್ವಾಕರ್ಷಣ ನಿಯಮಗಳನ್ನು ಪ್ರತಿಪಾದಿಸಿದನು. ಈತನು ಸೌರವ್ಯೂಹದ ಗ್ರಹಗಳು ಸೂರ್ಯನ ಸುತ್ತ ಹಾಗೂ ಚಂದ್ರನು ಭೂಮಿಯ ಸುತ್ತ ಗುರುತ್ವಾಕರ್ಷಣ ಶಕ್ತಿಯ ಆಧಾರದ ಮೇಲೆ ನಿರ್ದಿಷ್ಟ ಪಥದಲ್ಲಿ ಚಲಿಸುತ್ತವೆ ಎಂದು ತಿಳಿಸಿದನು. ವಿಲಿಯಂ ಹಾರ್ವೆ(ಇಂಗ್ಲೆಂಡ್)ಯು 'ರಕ್ತದ ಪರಿಚಲನೆ'ಯನ್ನು ವಿವರಿಸಿದನು. ಈತನು ರಕ್ತವು ಹೃದಯದಿಂದ ರಕ್ತನಾಳಗಳ ಮೂಲಕ ದೇಹದ ವಿವಿಧ ಅಂಗಗಳಿಗೆ ಹೇಗೆ ಹರಿದು ಬರುತ್ತದೆ ಹಾಗೂ ಹೇಗೆ ಪುನಃ ನರಗಳ ಮೂಲಕ ಹೃದಯ ತಲುಪುತ್ತದೆಂದು ತಿಳಿಸಿದನು. ಜಾನ್ ಗುಟನ್ ಬರ್ಗ್(ಜರ್ಮನಿ) ಎಂಬುವನು 1454 ಸಾ.ಶ. ರಲ್ಲಿ ಮೊದಲ ಬಾರಿಗೆ 'ಮುದ್ರಣ ಯಂತ್ರ'ವನ್ನು ಕಂಡು ಹಿಡಿದನು, | ವಿಜ್ಞಾನಿಗಳು | ವಿವರಣೆ | |---|---| | ಗೆಲಿಲಿಯೋ | | | ನಿಕೋಲಾಸ್ ಕೋಪರ್‌ಕಸ್ | | | ಸರ್ ಐಸಾಕ್ ನ್ಯೂಟನ್ | | ### ಲಿಯೋನಾರ್ಡೊ-ಡ-ವಿಂಚಿ(1452-1519): ಈತನು ಫ್ಲಾರೆನ್ಸ್‌ನ ಪ್ರಮುಖ ಚಿತ್ರಕಾರನಾಗಿದ್ದು, ಸಸ್ಯಶಾಸ್ತ್ರ, ಅಂಗಶೋಧನಾಶಾಸ್ತ್ರ ಹಾಗೂ ಗಣಿತ, ಕಲೆ ಮುಂತಾದ ಅನೇಕ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದನು. ಈತನು ಮೊನಾಲಿಸಾ ಹಾಗೂ ದಿ ಲಾಸ್ಟ್ ಸಪ್ಪರ್ ಎಂಬ ಚಿತ್ರಗಳನ್ನು ರಚಿಸಿದ್ದಾನೆ. ಈತನು ಆಕಾಶದಲ್ಲಿ ಹಾರುವ ಕನಸನ್ನು ಕಂಡಿದ್ದನು. ಬಹಳಷ್ಟು ವರ್ಷಗಳ ಕಾಲ ಈತನು ಪಕ್ಷಿಗಳ ಹಾರಾಟವನ್ನು ವೀಕ್ಷಿಸಿದನು. ಇದನ್ನು ವೀಕ್ಷಿಸಿದ ಈತನು ಹಾರಾಡುವ ಯಂತ್ರದ ರೂಪರೇಷೆಯನ್ನು ತಯಾರಿಸಿದನು. ಈತನು 'ಲಿಯೋನಾರ್ಡೊ-ಡ-ವಿಂಚಿ, ಪ್ರಯೋಗಗಳ ಶಿಷ್ಯ' ಎಂದು ಸಹಿ ಮಾಡುತ್ತಿದ್ದನು. ಈತನು ಹಲವಾರು ಚಿತ್ರಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಮೊನಾಲಿಸಾ, ದಿ ಲಾಸ್ಟ್‌ಸಪ್ಪರ್, ವರ್ಜಿನ್ ಆಫ್ ದಿ ರಾಕ್ಸ್, ದಿ ಬ್ಯಾಟಲ್ ಆಫ್ ಅಂಭೈರಿ, ಲೇಡಿ ವಿತ್ ಆನ್ ಎರನ್, ದಿ ವರ್ಜಿನ್ ಅಂಡ್ ಚೈಲ್ಡ್, ಮಡೊನ್ನಾ ಲಿಟ್ಟಾ, ಅಡೋರೇಷನ್ ಆಫ್ ದಿ ಮಾಗಿ, ಹೆಡ್ ಆಫ್ ಎ ವುಮನ್, ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್, ದಿ ಬೆನೋಯಾಸ್ ಮಡೋನ್ನಾ, ಸಾಲ್ವಿಟರ್ ಮುಂಡಿ ಪ್ರಮುಖವಾದವು. ### ಮೊನಾಲಿಸಾ: ಇದು ಲಿಯೋನಾರ್ಡೊ ಡಾ ವಿಂಚಿಯ ಒಂದು ಪ್ರಮುಖ ಚಿತ್ರಕೃತಿ ಹಾಗೂ ಪ್ರಪಂಚದ ಪ್ರಮುಖ ಚಿತ್ರಕೃತಿಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಡಾ ವಿಂಚಿಯು ಇದನ್ನು ರಚಿಸಲು 4 ವರ್ಷಗಳನ್ನು (1500-1504) ತೆಗೆದುಕೊಂಡನು. ಮೊನಲಿಸಾಳ ಭಾವಚಿತ್ರವನ್ನು ಫ್ರಾನ್ಸೆಸ್ಕೊ ಡೆಲ್ ಜಿಯೊಕೊಂಡೊನಿಗಾಗಿ ಚಿತ್ರಿಸಿದನು. ಮೊನಾಲಿಸಾ ಟಸ್ಕನಿ ಹಾಗೂ ಫ್ಲಾರೆನ್ಸ್