ಕಿತ್ತರೋ ಕಲ್ಪದ್ರುಮವ PDF
Document Details
Uploaded by Deleted User
ಕುಮಾರವ್ಯಾಸ
Tags
Summary
This text details the work of Kannada poet Kumaravyasa, focusing on the character of Karna from the Mahabharata.
Full Transcript
## ೨. ಕಿತ್ತರೋ ಕಲ್ಪದ್ರುಮವ.......ಎತ್ತಣದು ಭಾರತದ ರಣ : - ಕುಮಾರವ್ಯಾಸ *ಕವಿ ಮತ್ತು ಕಾವ್ಯ ಪರಿಚಯ- ಕುಮಾರವ್ಯಾಸ* : ಕುಮಾರವಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು' ಎಂದು ಹೇಳಿರುವ ಕುವೆಂಪು ಅವರ ಮಾತುಗಳು ಕವಿಯ ಕಾವ್ಯ ಸತ್ವವನ್ನು ಧ್ವನಿಸುವುದರಲ್ಲಿ ಆಶ್ಚರ್ಯವಿಲ್ಲ. ನಡುಗನ್ನಡ ಕವಿಗಳಲ್ಲಿ ಮೇರು ಶಿಖರದಂತಿರುವ ಕುಮಾರವ್...
## ೨. ಕಿತ್ತರೋ ಕಲ್ಪದ್ರುಮವ.......ಎತ್ತಣದು ಭಾರತದ ರಣ : - ಕುಮಾರವ್ಯಾಸ *ಕವಿ ಮತ್ತು ಕಾವ್ಯ ಪರಿಚಯ- ಕುಮಾರವ್ಯಾಸ* : ಕುಮಾರವಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು' ಎಂದು ಹೇಳಿರುವ ಕುವೆಂಪು ಅವರ ಮಾತುಗಳು ಕವಿಯ ಕಾವ್ಯ ಸತ್ವವನ್ನು ಧ್ವನಿಸುವುದರಲ್ಲಿ ಆಶ್ಚರ್ಯವಿಲ್ಲ. ನಡುಗನ್ನಡ ಕವಿಗಳಲ್ಲಿ ಮೇರು ಶಿಖರದಂತಿರುವ ಕುಮಾರವ್ಯಾಸನು ಗದಗ ಪ್ರಾಂತ್ಯದ ಕೋಳಿವಾಡದಲ್ಲಿದ್ದನೆಂದು ತಿಳಿದು ಬರುತ್ತದೆ. ಆತನ ನಿಜನಾಮ ನಾರಣಪ್ಪ ಕುಮಾರವ್ಯಾಸಯೋಗಿಂದ್ರ, ಕುಮಾರವ್ಯಾಸಮುನಿ, ಶಕರೂಪ ಎಂದು ಕರೆಸಿಕೊಂದಿದ್ದನು 'ವೀರನಾರಾಯಣ ಕವಿ ಲಿಪಿಕಾರ ಕುವರವ್ಯಾಸ'ನೆಂದು ವಿನಯ ಭಾವವನ್ನು ಮೆರೆದಿದ್ದಾನೆ 'ಕರ್ಣಾಟ ಭಾರತ ಕಥಾ ಮಂಜರಿ' ಎಂಬ ಕಾವ್ಯ ರಚಿಸಿ ಅದನ್ನು ಕನ್ನಡ ಭಾರತವಾಗಿಸಿದ ಕೀರ್ತಿ ಆತನದು “ತಿಳಿಯ ಹೇಳುವೆ ಕೃಷ್ಣಕತೆಯನು ಇಳೆಯ ಜಾಣರ ನೆಲೆಗೆ ಪಂಚಮ ಶ್ರುತಿಯ ಸೆರೆವೆನು ಕೃಷ್ಣ ಮೆಚ್ಚಲಿಕೆ” ಎಂದು ತನ್ನ ಕಾವ್ಯದ ಹರಿಭಕ್ತಿಯನ್ನು ತಿಳಿಸಿರುವನು. ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂಬ ಬಿರುದಿನ ಮೂಲಕ ಕನ್ನಡಿಗರ ಮನಗೆದ್ದಕವಿ ಕುಮಾರವ್ಯಾಸ ಪಂಪನ ನಂತರ ಸಮಗ್ರ ಭಾರತವನ್ನು ಕನ್ನಡೀಕರಿಸಿ 'ಕಲಿಯದವರ ಕಾಮಧೇನು'ವಾಗಿ ಅದಕ್ಕೆ ಮಹತ್ವವನ್ನು ನೀಡಿದನು ಪ್ರಸ್ತುತ ಕಾವ್ಯಭಾಗ ಕರ್ಣ ಪರ್ವದಲ್ಲಿ ಕೊನೆಯದಾಗಿದ್ದು, ಇಪ್ಪತ್ತೇಳನೇಯ ಸಂಧಿಯ ಕರ್ಣಾವಸಾನ, ಕೌರವನ ಪ್ರಲಾಪದ ಅಂಶಗಳಿಂದ ಕೂಡಿದೆ. ಪಂಪಕವಿ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಅರ್ಜುನನ್ನು ವೈಭವೀಕರಿಸಲು ಹೋಗಿ ಸಾಧ್ಯವಾಗದೆ "ಕರ್ಣ ರಸಾಯನಮಲ್ಲೇ ಭಾರತಂ” ಎಂದು ಬಿಡುತ್ತಾನೆ. ಕರ್ಣನ ತ್ಯಾಗ, ಕರ್ಣನ ನನ್ನಿ, ಅದಟುಗಳು (ಪರಾಕ್ರಮ) ಪ್ರಪಂಚಕ್ಕೆ ಮಾದರಿ ಎಂಬುದನ್ನು ಆತ ಚಿತ್ರಿಸುತ್ತಾನೆ. ಕುಮಾರವ್ಯಾಸನಲ್ಲಿಯೂ ಅದು ದೂರವಾಗಿಲ್ಲ. ಹರಿಯ ಭಕ್ತಿಯನ್ನು ಹೇಳುವುದಕ್ಕಾಗಿ, ಮಹಾಭಾರತವನ್ನು ಶ್ರೀಕೃಷ್ಣಕಥೆಯಾಗಿ ರಚಿಸಿದನಾದರೂ, ಅದರಲ್ಲಿ ದೈವ ಭಕ್ತಿಯು ಮನಸೆಳೆದರೂ, ಕರ್ಣನ ವ್ಯಕ್ತಿತ್ವದ ## ೪೨ | ನಡುಗನ್ನಡ ಕಾವ್ಯ ಸಂಚಯ ಮುಂದೆ ಅದು ಮಸುಕಾಗುವುದನ್ನು ಕವಿಯ ನಿರೂಪಣೆಯಲ್ಲಿ ಕಾಣುತ್ತೇವೆ. ಕರ್ಣ ದೈವ ಶಕ್ತಿಯಿಂದ ಕ್ಷತ್ರಿಯನಾಗಿ ಹುಟ್ಟಿದರೂ ಜಾತಿಯಲ್ಲಿ ಕೀಳು ಭಾವನೆಯನ್ನು ಸಾಯುವವರೆಗೂ ಎದುರಿಸುತ್ತಾನೆ. ಹೆತ್ತ ತಾಯಿಯ ಸ್ವಾರ್ಥ, ಭೂದೇವಿಯ ಶಾಪ, ಗುರುಗಳ ನಿಂದೆ, ಶಾಪ ಮತ್ತು ತಾನು ದೈವವೆಂದು ನಂಬುವ, ಗೆಳಯನಾಗಿ ಗೌರವಿಸುವ ಶ್ರೀಕೃಷ್ಣ, ಧರ್ಮದ ಹೆಸರಿನಲ್ಲಿ ಅಧರ್ಮದಲ್ಲಿ ಸಾಯಿಸುವ ವಿಕಾರತೆಗಳು. ಅದರ ಮಧ್ಯಯೂ ಅನ್ನಹಾಕಿದ ಸ್ವಾಮಿಯ ಋಣಭಾರ ಹೊರುವ ಸೇವಾಗುಣ, ತ್ಯಾಗ, ಸತ್ಯಗಳನ್ನು ಕಾಪಾಡಿಕೊಂಡು ಶೂದ್ರ ಜೀವನದ ನರಕಯಾತನೆಯನ್ನು ಅಣುಅಣುವೂ ಪರಿಚಯಿಸುತ್ತಾನೆ. ವಂಚನೆ, ತಂತ್ರಗಳಿಗೆ ಗುರಿಯಾಗಿ ಮಾನವತ್ವಕ್ಕೇ ಶಿಖರನಾಗಿ ಆದರ್ಶಪುರುಷನಾದ ಕರ್ಣನನ್ನು ಮೆಚ್ಚದವರಾರು? ಅವನ ಕಥೆಯನ್ನು ಕೇಳಿ ಕಣ್ಣೀರು ಸುರಿಸದವರಾರು? ಅಂತಹ ವ್ಯಕ್ತಿತ್ವದ ಪರಿಚಯ ಕುಮಾರವ್ಯಾಸ ಕವಿಯ ಕಾವ್ಯದ ಮೂಲಕ ಪಡೆಯುವುದು. ಅದನ್ನು ಕವಿ ನಿರ್ವಹಿಸಿದ ಕ್ರಮದ ಶ್ರೇಷ್ಠತೆಯನ್ನು ಅನುಭವಿಸುವುದು ಮಹತ್ವವೇ ಆಗುತ್ತದೆ. ಮಹಾಭಾರತ ಯುದ್ಧದಲ್ಲಿ ಅರ್ಜುನ ಮತ್ತು ಕರ್ಣರ ಮಧ್ಯ ಸಮರ ನಡೆಯುತ್ತದೆ, ದುರ್ಯೋಧನನ ಗೆಳೆಯನಾಗಿ, ಪಾಂಡವ ವಿರೋಧಿಯಾಗಿ, ಕೌರವ ಸೈನ್ಯದ ಸರ್ವಶಕ್ತಿಯಾಗಿ, ವೀರಾವೇಶದಿಂದ ಯುದ್ಧ ಎದುರಿಸಿ, ತನ್ನ ಒಡೆಯನಾದ ಸುಯೋಧನನ ಗೆಲುವಿಗೆ ಕಾರಣನಾಗಬೇಕೆಂದು ಸಕಲ ಸಿದ್ಧತೆಗಳನ್ನು ಕರ್ಣ ಮಾಡಿಕೊಂಡಿದ್ದನು. ಆದರೆ ಕೃಷ್ಣನ ಕುತಂತ್ರದಿಂದ ತನ್ನ ಸೋದರರು ಪಾಂಡವರೆಂದು ತಿಳಿಯುತ್ತದೆ. ಅದನ್ನು ದೃಢೀಕರಿಸಲೋ ಎನ್ನುವಂತೆ ತನ್ನನ್ನು ಹೆತ್ತು ಲೋಕಾಪವಾದಕ್ಕೆ ಎದರಿ ನೀರಿಗೆಸದ ತಾಯಿ ಎದುರಿಗೆ ಬಂದು ಪಾಂಡವರ ರಕ್ಷಣೆಯ ವರ ಬೇಡುತ್ತಾಳೆ. ಅವೂ ಸಾಲದೆಂಂತೆ ಭೂದೇವಿಯ ಶಾಪ, ತನ್ನ ಗುರು ಪರಶುರಾಮನ ಆಗ್ರಹಗಳ ಶಾಪದ ಫಲ ಒಗ್ಗೂಡಿ ಮರಣ ಹಣಕಿಸುವ ಸ್ಥಿತಿಗೆ ಬರುತ್ತಾನೆ. ಇಂತಹ ಸಂದಿಗ್ಧದ ಚಿಂತೆ ಕರ್ಣನನ್ನು ಕಾಡುತ್ತದೆ. *ಪದ್ಯಸಾರ:* 1. ಕುರುರಾಯನು ದ್ರೋಣ ಭೀಷ್ಮರನ್ನು ನೆಚ್ಚಿದರೆ ಅವರು ಮುಂಗಾಣಿಕೆಯಲ್ಲೇ ಮಡಿದರು. ನನ್ನ ಮೊದಲಿನ ಕುಲವನ್ನು ತಿಳಿಯಹೇಳಿ ಕೃಷ್ಣ ನನ್ನ ಕೊರಳು ಕೊಯ್ದಿಟ್ಟನು. 'ಪಾಂಡವರು ತನ್ನ ಪ್ರಾಣ' ಎಂಬ ನುಡಿಯನ್ನು ಹರಿ ಬಹು ಜಾಣತನದಿಂದ ಸಾಧಿಸಿಬಿಟ್ಟ. ನನ್ನೊಡೆಯನಿಗೆ(ಸುಯೋಧನ) ಆಪ್ತರನು ಕಾಣೆನಲ್ಲ. ಎಂದು ಕಲಿಕರ್ಣ ಮರುಗಿದನು. 2. ಕುಲದಲ್ಲಿ ಕೀಳು ಇವನೆಂದು ಕಡೆಗಣಿಸಿ ಕಂಡರೆ ಆ ಬಹು ಬಂಧುವರ್ಗವನೆಲ್ಲ ಬಿಟ್ಟು ನನ್ನನ್ನು ಕೈ ಹಿಡಿದು ಸಿಂಹಾಸನದ ಮೇಲೆ ಕೂರಿಸಿ ನನಗೆ ಅಭಿಷೇಕ ಮಾಡಿ ಕುಲದ ಮಲಿನತೆಯನ್ನು ತೊಳೆದು ಹಾಕಿದನು; ಕೌರವ ಕುಲದೊಡನೆ ಬೆಸುಗೆ ಹಾಕಿ ## ಕವಿ ಮತ್ತು ಕಾವ್ಯ ಪರಿಚಯ / ೪೩ ಸೇರಿಸಿಕೊಂಡನು. ಇಂಥ ಭೂಒಡೆಯ ಕುರುಪತಿಗೆ ಆಪ್ತರಿಲ್ಲವಲ್ಲ. ಎಂದು ಅತಿಯಾಗಿ ಅಳಲಿದನು ಕರ್ಣ. 3. ಆಹಾ ಕುರುರಾಯ ನನಗೆ ಏನೇನು ಮಾಡಿದೆ. ನನ್ನ ನೋಡಿ ದಣಿಯನಾತ, ನಿತ್ಯನಿತ್ಯವೂ ನಾನಾಬಗೆಯಲ್ಲಿ ಒಳ್ಳಯ ಉಡುಗೊರೆಗಳನ್ನು ಕೊಟ್ಟು ಕೊಟ್ಟು ದಣಿಯನು! ಕ್ರೀಡಾಕೂಟದಲ್ಲಿ ನನ್ನೊಡನೆ ಆಡಿ ದಣಿಯನು! ಶಿವಶಿವಾ ಕುರುರಾಯನಿಗೆ ನನ್ನಲ್ಲಿ ಅಷ್ಟೊಂದು ಪ್ರೀತಿ! ರಣದಲ್ಲಿ ಒಡಲರಿಯದೆ ಹಿಮ್ಮೆಟ್ಟದೆ ಕಾದಿ ದ್ರೋಣ ಭೀಷ್ಮರೊಡನೆ ಕೂಡಿ ಎಲ್ಲರೂ ಸ್ವಾಮಿಗಾಗಿ ತಲೆಕೊಟ್ಟರು. ಆದರೆ ಹೀಗೆ ತಲೆ ಕೊಟ್ಟದ್ದರಿಂದಲೇ ನಾವು ಅರಸನಿಗೆ ಏನು ಮಾಡಿದಂತಾಯಿತು? 4. ಮೊದಲಲ್ಲಿತನ್ನ ಮಕ್ಕಳ ಅಳಿವನ್ನು ಕಂಡು ಒಡಹುಟ್ಟಿದವರನ್ನು ನೋಡಿ ಆ ದುಃಖವನ್ನು ಮರೆತನು.ಒಡಹುಟ್ಟಿದವರು ನೂರು ಮಂದಿಯೂ ಮಡಿಯಲು ನನ್ನ ಸುಳಿವಿನಲ್ಲಿ ಅದನ್ನೂ ಮರೆತನು. ನನ್ನ ಓಡಾಟವನ್ನೂ ಕದನ ಒಳಗೊಂಡಿತು. ಕುರುಪತಿಗೆ ಪ್ರೀತಿಯಾಸ್ಪಂದಕರನ್ನು ಇನ್ನು ಕಾಣೆ ಶವಶಿವಶ! ಎಂದು ಕರ್ಣ ದುಃಖಿಸಿದನು. 5. ಇಷ್ಟಾದರೂ ನಾನು ಧನ್ಯನೇ ಸರಿ! ಸಲಹಿದ ಒಡೆಯನ ಅನ್ನದ ಋಣಕ್ಕಾಗಿ ತಲೆಯೊಪ್ಪಿಸುವುದು ಎಷ್ಟೊಂದು ಪುಣ್ಯಫಲ. ಎರಡನೆಯದಾಗಿ ಮರಣಕಾಲದಲಿ ಕೃಷ್ಣನನ್ನು ಕಾಣುವ ಅದೊಂದು ಸುಕೃತ ಫಲ. ಈ ಭೂಮಿಯ ಮೇಲೆ ನನಗಲ್ಲದೆ ಯಾರಿಗೆ ಫಲಿಸುತ್ತದೆ? ನಾನು ಧನ್ಯನಾದೆ ! ಎಂದು ಭಾವಿಸಿಕೊಂಡು ಆ ಕಲಿ ಕರ್ಣನು ರೆಪ್ಪೆಯಾಡಿಸದೆ ಕೃಷ್ಣನನ್ನು ನೋಡುತ್ತಿದ್ದನು. 6. ಅವನು ಹಾಗೆ ಧ್ಯಾನಾಸಕ್ತನಾಗಿ ಒಳಗೆ ತನ್ನ ಹೃದಯ ಕಮಲದ ಮಧ್ಯಸ್ಥಳದಲ್ಲಿ ಮುರವೈರಿಯಾದ ಕೃಷ್ಣನನ್ನೂ, ಹೊರವಲಯದಲ್ಲಿ ಅರ್ಜುನನ ಮಣಿರಥದ ಮುಂದೆ ಹೊಳೆಯುವ ಆ ಹರಿಯನ್ನೂ ಕಂಡನು. ಅದರಿಂದ ಒಳಹೊರಗೆ ಎಲ್ಲೆಲ್ಲೂ ಹರಿಯೇ ಹರಯೇ ತಾನು ಎಂಬ ಅಭೇದವನ್ನು ತಿಳಿದು ನಿಜದೆತ್ತರದ ಸಮಾಧಿಯಲ್ಲಿ ಕರ್ಣನು ಮುಳುಗಿದ್ದನು. 7. ಅರಸಾ ಕೇಳು ವಿರೋಧ ಪಕ್ಷದಲಿ ಮುರಹರನೇ ಅಯ್ಯಾ ನಿಮ್ಮ ವಂಶವನ್ನು ಸಂಹರಿಸಿದಾತನು; ಭೀಮಸೇನನೋ ಅಥವಾ ಅರ್ಜುನನೋ ಅಲ್ಲ. ಕರ್ಣನು ಧ್ಯಾನದಲ್ಲಿ ಮುಳುಗಿರುವಾಗ ಕೃಷ್ಣನು ಅರ್ಜುನನನ್ನು ಕುರಿತು ಬಾನವನ್ನು ಬಿಡು, ಬಿಡು ಪಾರ್ಥಾ ಕರ್ಣನ ಶಿರವನ್ನು ಇಳಿಸಯ್ಯಾ! ಹಾರೈಸಬೇಡ; ಎದೆಗುಂದಬೇಡ, ದಿವ್ಯಶರವನು ತೆಗೆ! ಬೇಗ ಯುದ್ಧ ಮಾಡು ಎಂದನು. ## ೪೪ | ನಡುಗನ್ನಡ ಕಾವ್ಯ ಸಂಚಯ 8. ಕರುಣೆಯಿಂದ ನಿನ್ನ ಮನಸು ಕರಗುವ ಹಾಗಿದ್ದರೆ, ನೀನು ಹೋಗು; ಭೀಮನನ್ನು ಕರೆದು ಕೊಲ್ಲಿಸುತ್ತೇನೆ. ಈತನು ಏನುನಿಷ್ಠುರನಯ್ಯ ಎನ್ನಬೇಡ. ತೆಗೆ ನಿನ್ನಿಂದ ತನ್ನಿಂದ ಹಗೆ ಹರಿಯದಿದ್ದರೆ ಆಗ ನಮ್ಮ ಚಕ್ರದಲ್ಲಿ ಶತೃಭಟನಾದ ಕರ್ಣನನ್ನು ಮುರಿಯುತ್ತೇನೆ. ಯುಧಿಷ್ಠರನ ಅರಸುತನದ ನೆಲೆ ನಿಲ್ಲಲಿ. ನೀನು ಅಂಜುವಹಾಗಿದ್ದರೆ, ನಡೆ ಆಚೆ ಎಂದನು. 9. ಕರ್ಣನ ಮೇಲೆ ಇವನಿಗೆ ಇಷ್ಟೊಂದು ದ್ವೇಷವೇಕೋ? ಎಂದು ಅರ್ಜುನ ಬೆರಗಾದನು.ಕರುಣ ಕೋಧಗಳ ಸಂಧಿಗ್ಧದಲ್ಲಿ ಸಿಕ್ಕಿ ಪಾರ್ಥ ಮನಸ್ಸಿನಲ್ಲಿ ಬಹಳ ಘಾಸಿಯಾದನು. ಕಡೆಗೆ “ಇನ್ನು ಆಸೆಯೇಕೆ?” ಎಂದು ಮನಸ್ಸು ಗಟ್ಟಿ ಮಾಡಿಕೊಂಡು ದಿವ್ಯಾಸ್ತ್ರವನ್ನು ಸೆಳೆದುಕೊಂಡು ಕಿಡಿಗಳನ್ನು ಹೊರಸೂಸುವ, ಹೊಗೆಯ ಹೊದರುಗಳನ್ನು ಚೆಲ್ಲುವ ಭಯಂಕರವಾದ ಸುಭದ್ರವಾಗಿ ಕಾಯ್ದಿಟ್ಟ, ಯಾರೂ ಎದುರಿಸಲು ಆಗದ ಅಂಜಳಿಕಾಸ್ತ್ರವನ್ನು ಸೆಳೆದುಕೊಂಡನು. 10. ಉರಿಯನ್ನು ಉಗುಳುವ ಬಾಣದಲ್ಲಿ ಕತ್ತರಿಸುವಂತೆ ಕರ್ಣನ ಮೇಲೇ ಬಿಟ್ಟನು. ಆ ಬಾಣ ಸಮರಭೂಮಿಯಲ್ಲಿ ಕರ್ಣನ ಎದೆಯನ್ನು ಸೀಳಿತು. ಬಾಣದ ಕೊನೆಯಭಾಗದ ಗರಿಯವರೆಗೂ ಆಳವಾಗಿ ಕರ್ಣನೆದೆಯಲ್ಲಿ ನೆಟ್ಟಿತು. ಆದರೂ ಕರ್ಣನ ಪ್ರಾಣ ಹೋಗದ ಮರ್ಮವನ್ನು ಕೃಷ್ಣ ಅರಿತುಕೊಂಡನು. ಒಡನೆಯೇ ಕುದುರೆಗಳ ಹಗ್ಗಗಳನ್ನು ಕೇಳಗಿಳಿಸಿ,ರಥದಿಂದಿಳಿದು ಬ್ರಾಹ್ಮಣವೇಷದಲ್ಲಿ ಕರ್ಣನ ಬಳಿಗೆ ಬಂದನು. 11. ಜಗತ್ತಿನೊಳಗೆ ತ್ಯಾಗಿಯೆಂಬ ಕೀರ್ತಿಯನ್ನು ಪಡೆದಿರುವೆಯೆಂದು ಲೋಕದ ಜನರಿಂದ ತಿಳಿದುಬಂದಿರುವೆನು.ಅದರ ಮೇಲೆ ಅತಿಶಯ ಪದವಿಯನ್ನು ಪಡೆಯುವ ಬಯಕೆ ನಿನ್ನದಾದರೆ, ನನ್ನ ಮನಸ್ಸಿನ ಆಸೆಯನ್ನು ಈಡೇರಿಸು ನಿನ್ನ ಇಷ್ಟಾರ್ಥ ಸಿದ್ಧಿಸಲಿ ಎಂದು ಹರಸಿದ ಕೃಷ್ಣನ ನಿಜರೂಪವನ್ನು ಗುರುತಿಸಿ ಮನಸಿನಲ್ಲಿಯೇ ನಸುನಗುತ್ತಿದ್ದನು ಕರ್ಣ. 12. ತ್ಯಾಗಿ ಸಿಂಹಾಸನದ ಮೇಲೆ ರಾಜನಾಗಿದ್ದಾಗ ಬೇಡಿದ್ದನ್ನು ಕೊಡಬಹುದು? ಈಗ ಕೊಡುವುದೇನಿದೆ? ಕೇಳಿ? ಎಂದನು ಕರ್ಣ.ಅದಕ್ಕೆ ಆ ಬ್ರಾಹ್ಮಣನು ನಗುತ್ತ ನಿನ್ನ ಕಿವಿಯಲ್ಲಿ ತೂಗುತ್ತಿರುವ ಈ ಕರ್ಣಕುಂಡಲವನ್ನು ಕೊಡು ಎಂದನು ಕರ್ಣ ಕೊಡುವುದಕ್ಕೆ ಸಿದ್ಧನಾಗಿ, ಧಾರೆಯೆರೆಯಲು ನೀರನ್ನು ಹುಡುಕಿ, ಕಾಣದೆ ಸುತ್ತಲೂ ನೋಡಿದನು. 13. ಉದಕವನ್ನು ಹೊರಗಡೆ ಹುಡುಕುತ್ತಿರಲು ಆ ಪದ್ಮನಾಭನು ನಗುತ್ತ ಹೇಳಿದನು. ನಿನ್ನ ಹೃದಯದಲ್ಲಿರುವ ನಿರ್ಮಲ ಗಂಗಾಜಲವನ್ನು ತೆಗೆದು ನೆಮ್ಮದಿಯಿಂದ ## ಕವಿ ಮತ್ತು ಕಾವ್ಯ ಪರಿಚಯ / ೪೫ ನನಗೆ ಧಾರೆಯೆರೆದು ಕೊಡು, ಸಂಪತ್ತಿನ ಮುಕ್ತಿಪದವಿಯನ್ನು ಪ್ರೀತಿಸುವೆಯಾದರೆ, ಇದು ಶುಭೋದಯವಾದದು ಎಂದು ಮಾಯಾ ಬ್ರಾಹ್ಮಣನು ತಿಳಿಸಿದನು. 14. ಆ ಮಾತು ಕೇಳಿ ಒಡನೆಯೇ ಕರ್ಣನು ಬಾಣವನ್ನು ತೆಗೆದನು ಅದರಿಂದ ಘರಿಘರಿಲು ಘರಿಲೆನ್ನುವಂತೆ ತನ್ನ ಎದೆಯನ್ನು ಬಗಿದನು. ಅಲ್ಲಿನ ನಿರ್ಮಲೋದಕವನ್ನು ತೆಗೆದನು. ಬಳಿಕ ಬಹಳ ಸಂತೋಷದಿಂದ ಧಾರೆಯೆರೆದು ಕುಂಡಲವನ್ನು ಕೊಟ್ಟನು. ಆಗ ದೇವಗಣಗಳೆಲ್ಲ ಜಯಕಾರ ಹಾಕುತ್ತಿರುವಾಗಲೇ ಕೃಷ್ಣ ಕರ್ಣ ಕೊಟ್ಟ ದಾನವನ್ನು ಸ್ವೀಕರಿಸಿದನು. 15. ಪರಮ ಕರುಣಾಸಿಂದು ಕರ್ಣನಿಗೆ ತನ್ನ ನಿಜರೂಪವನ್ನು ತೋರಿಸಿದನು ಅಪಾರವಾದ ಪ್ರೇಮವನ್ನು ಸೂಸಿ ಕರ್ಣನಿಗೆ ಮುಕ್ತಿ ಪದವಿಯನ್ನು ಕರುಣಿಸಿದನು. ಕರ್ಣನಿಂದ ದಾನ ಪಡೆದ ನಂತರ ಅರ್ಜುನನನ್ನು ಎಚ್ಚರಿಸಿದನು. ಕೃಷ್ಣ ಕರುಣಿಯಾದ ಕರ್ಣನಿಗೆ ಕರುಣದ ಅನುಸಂಧಾನ ಕೊಡುವುದಲ್ಲ ಅದು ಕೊನೆಗೊಳ್ಳುವುದಿಲ್ಲ. ಅಚ್ಚರಿ! ಅಚ್ಚರಿ! ಎಂದು ದೇವಗಣ ಬೆರಗಿನಲ್ಲಿದ್ದರು. 16. ಹಿಂದೆ ಪಾಶುಪತಾಸ್ತ್ರಕ್ಕೆ ಬಳುವಳಿಯಾಗಿ ಬಂದ ಅಂಜನಾಸ್ತ್ರ ಪಾರ್ಥನ ಮೂಡಿಗೆಯಲ್ಲತ್ತು. ಅದನ್ನು ಈಗ ಅವನು ಕೈಗೆತ್ತಿಕೊಂಡನು ಗಿರಿಜೆಯ ಪಾದಗಳನ್ನು ನೆನೆದು ಅಭಿಮಂತ್ರಿಸಿ ಈ ಅಂಬನ್ನು ಇಂದ್ರನ ಮಗ ಅರ್ಜುನ ಸೂರ್ಯನ ಮಗ ಕರ್ಣನ ಕೊರಳಿಗೆ ಗುರಿಯಿಟ್ಟು ಹೊಡೆದನು. ಮಂದರಾ ಪರ್ವತ ನಡುಗುವಂತೆ ಕಿಡಿಗಳ ಸಮೂಹವನ್ನು ಸುರಿಸುತ್ತ ಆ ಮಹಾಸ್ತ್ರ ಮುನ್ನುಗ್ಗಿ ಹೊಡೆಯಿತು. 17 ಆ ಕ್ಷಣ ಅರಸಾ ಕೇಳು ಕರ್ಣನ ಒಡಲಲ್ಲಿ ಪರಮತೇಜೋ ಪುಂಜವೊಂದು ಹೊರಹೊಮ್ಮಿ ಎದ್ದು ಮೇಲೆ ಹಾರಿ ಗಗನಮಾರ್ಗದಲ್ಲಿ ನಡೆದು ಸೂರ ಮಂಡಲದ ಮಧ್ಯವನ್ನು ಸೇರಿ ಹೊಳೆಯಿತು. ಅರರೇ! ಭಾಪುರೇ, ಕರ್ಣಾ ಮಝ! ಭಾಪುರೇ, ಭಟಾಗ್ರಣೀ! ನಿನ್ನ ಸರಿ ಸಮಾನರಾದವರನ್ನು ಎರಡು ಯುಗಗಳಲ್ಲಿಯೂ ಕಾಣೆ! ಎಂದು ಹನುಂತಂನು ದುಃಖಿಸಿದನು. 18. ಕೊಟ್ಟ ಭಾಷೆಗೆ ಬದ್ಧನಾಗಿ, ಮರಳಿಬಾನವನ್ನು ತೊಟ್ಟನೇ? ತಾನು ರಾಜ್ಯದ ನಿಜವಾದ ಒಡೆಯನೆಂದರೆ ಕಳುಹಿಸಿದನೆ, ಪಾಂಡವರಲ್ಲಿ ಅನುಸಂಧಾನವನ್ನು ಬಿಟ್ಟು ಕಡೆಗೆ ಅಳುಕಿದನೆ, ಕೌರವ ಕೆಟ್ಟನು! ಅಕಟಕಟಾ! ಎಂದು ಒಡೆಯನಿಗಾಗಿಯೇ ಮರುಗುತ್ತ ದೇಹವನ್ನು ಬಿಟ್ಟ ಈ ಕರ್ಣನಿಗೆ ಯಾರು ಸರಿ? ಎಂದು ದೇವಗಣ ಕೊಂಡಾಡಿತು. 19 ಬಲಿಷ್ಠವಾಗಿ ಹಿಡಿದ ಧನುಸ್ಸು ಎಡಭಾಗದಲ್ಲಿ ಬೆರಳಿನಲ್ಲಿ ಬಾಣ ## ೪೬ | ನಡುಗನ್ನಡ ಕಾವ್ಯ ಸಂಚಯ ಬಿಡುವ ಹಿಡಿಯ ತಿರುವು, ನೇರವಾದ ತೋಳ ಬಲಭಾಗದಲ್ಲಿದ್ದು, ಬಲಿಷ್ಠ ಮಂಡಿಯೂರಿದ, ಬಾಗಿದಶರೀರ, ಕಾಂತಿಯಿಂದ ಹೊಳೆಯುವ ಶರೀರದ ಕರ್ಣಭೂಪಾಲನು ರಥದ ಮಧ್ಯದಲ್ಲಿ ಪ್ರಕಾಶಿಸತೊಡಗಿದ್ದನು. 20. ಥಳಥಳಿಸುವ ನಗುಒಗದಿಂದಲೂ, ಗಂಟಿಕ್ಕಿ ಬಲಿತ ಹುಬ್ಬಿನಿಂದಲೂ, ಬಿಟ್ಟಕಣ್ಣುಗಳಿಂದಲೂ, ಹೊಳೆಹೊಳೆವ ಹಲ್ಲಗಳಿಂದಲೂ, ರಂಜಿಸುವ ಕರ್ಣನ ಶಿರಸ್ಸು, ದುರ್ಯೋಧನನ ಬೆಳ್ಕೊಡೆ ಕಳಚಿ ನೆಲಕ್ಕೆ ಬೀಳುವ ಹಾಗೆಯೂ, ಕೌರವ ಕುಲದ ಸಮಸ್ತ ಐಶ್ವರ್ಯವೂ ಬಾಗಿ ನೆಲಕ್ಕೆ ಉರುಳುವಂತೆಯೂ ಭೂಮಿಯ ಮೇಲೆ ಆ ಕ್ಷಣ ಬಿದ್ದಿತು. 21 ಆ ಒಡನೆಯೇ ಕರ್ಣಾ ಹಾ, ಹಾ! ಸೂತಸುತಾ, ಹಾ ಕರ್ಣಾ, ಹಾ ರಾಧಾತನುಜಾ, ಹಾ! ಕರ್ಣಾ,ಹಾ! ನನ್ನ ಆನೆಯೇ, ಹಾ ನನ್ನ ಬಹಿರಂಗ ಜೀವನವೇ ಹಾ! ನಿರ್ಣಯವಾಯಿತು. ಕುರುಕುಲಕ್ಕೆ ಹಾ ಕರ್ಣಾ. ಮಡಿದೆಯಾ, ತಂದೆ? ಎನ್ನುತ್ತ ನಿನ್ನ ಮಗ... ರಥದಿಂದ ಉರುಳಿ ದೊಪ್ಪನೆ ನೆಲದ ಮೇಲೆ ಬಿದ್ದು ಬಿಟ್ಟನು. ದುರ್ಯೋಧನ ರಾಯ ಹಲುಬಿದನು ಹಾ.ರಾಧೇಯ! ಹಾ! ರಾಧೇಯ! ಹಾ! ರಾಧೇಯ! ನನ್ನಾನೆ, ಬಾರಯ್ಯ! ನಿನ್ನನ್ನು ಕಾಣಿಸಯ್ಯ ನನಗೆ ಎಂದು ಹಂಬಲಿಸಿದನು. ಪರಿವಾರವೆಲ್ಲ ಬಾಯಿಬಿಟ್ಟತು! ಕೈಯಲ್ಲಿನ ಆಯುಧಗಳನ್ನು ಕೆಳಕ್ಕೆ ಹಾಕಿತು! ಕಂಬನಿಯ ಕಡಲಿನಲ್ಲಿ ಇಡೀ ಪರಿವಾರದ ಜನ ಹೊರಳುತ್ತಿತ್ತು. 22. ಕಿತ್ತರೋ ಕಲ್ಪದ್ರುಮವನ್ನು! ಬೀಳಿಸುತ್ತಿದ್ದರೋ ಸುರಧೇನುವನ್ನು ಕಳೆದು ಬಿಟ್ಟರೋ ಪರುಷಮಣಿಯನ್ನು ಹಾ ಸಮುದ್ರ ಮಧ್ಯದಲ್ಲಿ, ಎತ್ತಣದು ಈ ಭಾರತದ ರಣ? ನಮಗೆ ಎಲ್ಲಿಂದ ಹುಡುಕಿಕೊಂಡು ಬಂತೋ? ಈ ಮೃತ್ಯು ಅಕಟಾ! ಎಂದು ಎರಡೂ ಕಡೆಯ ಸೈನ್ಯದಲ್ಲಿ ಜನ ಕೂಗಾಡಿದರು. *ಕಾವ್ಯದ ಪದಾರ್ಥಕೋಶ:* ಗೋಣ~ ಕತ್ತು, ಎಚ್ಚರಿಸಿ-ತಿಳಿಸಿ, ಬಲಿದ- ಬಲಿಷ್ಠ, ಟಕ್ಕರಿಗಳೆ-ಕಡೆಗಣಿಸು ಬೆಚ್ಚ-ಸೇರಿಸು,ನಿಚ್ಚಲು- ನಿತ್ಯವು, ಉಚಿತವ- ಒಳ್ಳೆಯದು, ಖೇಳ- ಕ್ರೀಡೆ, ಐಸರಲಿ - ಕಳೆದರು, ಜೋಳವಾಳಿ- ಅನ್ನದ ಋಣ, ಪಾರ್ಥ ಅಥವಾ ಧನಂಜಯ- ಅರ್ಜುನ, ಈಸು-ಇಷ್ಟು,ಘಾಸಿ- ನೊಂದುಕೊಳ್ಳು, ಹೊದರು- ಸಮೂಹ, ವಾಫೆ-ಕುದುರೆ ಲಗಾಮು, ಉದಕ-ನೀರು, ಹರಣ-ಪ್ರಾಣ. *ಮಾದರಿ ಪದ್ಯ* ಕುಲಕೆ ಕೀಳಿವನೆಂದು ಟಕ್ಕರಿ ಗಳೆದಡಾ ಬಹುಬಂಧುವರ್ಗವ ## ೨. ಕಿತ್ತರೋ ಕಲ್ಪದ್ರುಮವ......ಎತ್ತಣದು ಭಾರತದ ರಣ -ಕುಮಾರವ್ಯಾಸ ದ್ರೋಣ ಭೀಷ್ಮರ ನಚ್ಚಿದರೆ ಮುಂ ಗಾಣಿಕೆಯಲೇ ಮಡಿದರೆನ್ನಯ ಗೋಣ ಕೊಯ್ದನು ಕೃಷ್ಣ ಮುನ್ನಿನ ಕುಲವನೆಚ್ಚರಿಸಿ ಪ್ರಾಣ ಪಾಂಡವರೆಂಬ ನುಡಿಯನು ಜಾಣಿನಲಿ ಹರಿ ಬಲಿದನೊಡೆಯಗೆ ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ ಕುಲಕೆ ಕೀಳಿವನೆಂದು ಟಕ್ಕರಿ ಗಳೆದಡಾ ಬಹುಬಂಧುವರ್ಗವ ನುಳಿದು ಸಿಂಹಾಸನದಲೆನಗಭಿಷೇಕವನು ಮಾಡಿ ಕುಲದ ಮಲಿನವ ತೊಳೆದುಕೌರವ ಕುಲದೊಳೊಡಬೆಚ್ಚವನಿಪಾಲಕ ತಿಲಕ ಕುರುಪತಿಗಾಪ್ತರಿಲ್ಲೆಂದಳಲಿದನು ಕರ್ಣ ನೋಡಿ ದಣಿಯನು ನಿಚ್ಚಲುಚಿತವ ಮಾಡಿ ದಣಿಯನು ಖೇಳ ಮೇಳದ ಲಾಡಿ ದಣಿಯನು ಶಿವಶಿವಾ ತನ್ನೊಡನೆ ಕುರುರಾಯ ಓಡಲರಿಯದೆ ದ್ರೋಣ ಭೀಷ್ಮರು ಗೂಡ ತಲೆಗೊಟ್ಟೆಸರಲಿ ತಾ ಮಾಡಿತೇನರಸಂಗೆನುತ ಮರುಗಿದನು ಕಲಿಕರ್ಣ ಮೊದಲಲಾತ್ಮಜರಳಿವನೊಡವು ಟ್ಟಿದರ ಮೆಯ್ಯಲಿ ಮರೆದನೊಡವು ಟ್ಟಿದರು ನೂರ್ವರು ಮಡಿಯೆ ಮರೆದನು ತನ್ನ ಸುಳಿವಿನಲಿ ## ೮ / ನಡುಗನ್ನಡ ಕಾವ್ಯ ಸಂಚಯ ಕದನವೆನ್ನಯ ಸುಳಿವನೊಳಕೊಂ ಡುದು ಸುಯೋಧನನೃಪತಿಗಿನ್ನಾ ಸ್ಪದರ ಕಾಣೆನು ಶಿವಶಿವಾ ಎಂದುಳಲಿದನು ಕರ್ಣ ಸಲಹಿದೊಡೆಯನ ಜೋಳವಾಳಿಗೆ ತಲೆಯ ಮಾರುವುದೊಂದು ಪುಣ್ಯದ ಫಲವು ಮರಣದ ಹೊತ್ತು ಕೃಷ್ಣನ ಕಾಬ ಸುಕೃತಫಲ ಇಳೆಯ ಮೇಲೆನಗಲ್ಲದಾರಿಗೆ ಫಲಿಸುವುದು ತಾ ಧನ್ಯನೆನುತೆವೆ ಹಳಚದಸುರಾಂತಕನನೀಕ್ಷಿಸುತಿರ್ದನಾ ಕರ್ಣ ಒಳಗೆ ಹೃಯಾಂಬುಜದ ಮಧ್ಯ ಸ್ಥಳದೊಳಗೆ ಮುರವೈರಿಯನು ಹೊರ ವಳಯದಲಿ ಫಲುಗುಣನ ಮಣಿರಥದಗ್ರಭಾಗದಲಿ ಹೊಳೆವ ಹರಿಯನು ಕಂಡನಿದು ಹೊರ ಗೊಳಗೆ ಹರಿ ತಾನೆಂಬುಭೇದವ ತಿಳಿದು ನಿಜದೆಚ್ಚರ ಸಮಾಧಿಯೊಳಿರ್ದನಾ ಕರ್ಣ ಅರಸ ಚಿತ್ತೈಸಾಚೆಯಲಿ ಮುರ ಹರನಲೇ ನಿಮ್ಮನ್ವಯವ ಸಂ ಹರಿಸಿದಾತನು ಭೀಮಸೇನನೊ ಮೇಣ್ ಧನಂಜಯನೊ ಸರಳ ತೊಡು ತೊಡು ಪಾರ್ಥ ಕರ್ಣನ ಶಿರವನಿಳುಹಾ ಹಾರದಿರು ಹೇ ವರಿಸದಿರು ತೆಗೆ ದಿವ್ಯಶರವನು ಬೇಗಮಾಡೆಂದ ಕರುಗವರೆ ನೀ ಸಾರು ಭೀಮನ ಕರೆದು ಕೊಲಿಸುವೆನೀತನನು ನಿ ## ಕಿತ್ತರೋ ಕಲ್ಪದ್ರುಮವ... ಎತ್ತಣದು ಭಾರತದ ರಣ / ೯ ಈಸು ಕರ್ಣನ ಮೇಲೆ ಬಹಳ ದ್ವೇಷವೇನೋ ಎನುತ ಮನದಲಿ ಘಾಸಿಯಾದನು ಪಾರ್ಥ ಕರುಣಕ್ರೋಧದುಪಟಳಕೆ ಆಸೆಯಿನ್ನೇಕೆನುತ ಸೆಳೆದನು ಸೂಸುಗಿಡಿಗಳ ಹೊಗೆಯ ಹೊದರಿನ ಮೀಸಲಳಿದಾರೆಂಜಲಿಸದಂಜಳಿಕ ಮಾರ್ಗಣವ ಉರಿಯನುಗುಳುವ ಬಾಣದಲಿ ಕ ತರಿಸಿ ಕರ್ಣನನೆಸಲು ಸಮರದ ಲುರವ ಕೀಲಿಸಿತಂಬು ಗರಿಗಡಿಯಾಗಿ ಗಾಢದಲಿ ಹರಣ ತೊಲಗದ ಮರ್ಮವನು ಮುರ ಹರನು ಕಂಡನು ರಥದ ವಾಧೇಯ ನಿರಿಸಿ ಕರ್ಣನ ಹೊರೆಗೆ ಬಂದನು ವಿಪ್ರವೇಷದಲಿ ತ್ಯಾಗಿ ಜಗದೊಳಗೆಂಬ ಕೀರ್ತಿಯ ಲೋಗರಿಂದವೆ ಕೇಳು ಬಂದೆನು ಮೇಗಳತಿಶಯ ಪದವನೊಲುವಡೆ ಮನದ ಬಯಕೆಗಳ ಈಗಳೀವುದು ನಮ್ಮಭೀಷ ಶ್ರೀಗೆ ಮಂಗಳವೆಂದು ಹರಸಿದ ಡಾಗಳರಿದಾ ಕರ್ಣನಸುನಗುತಿರ್ದ ಮನದೊಳಗೆ ತ್ಯಾಗಿ ಸಿಂಹಾಸನದ ಮೇಲಿ ದ್ದಾಗ ಬೇಡಿತನೀಯಬೇಹುದು ಈಗಳೀವುದ ಬೆಸಸಿಯೆನೆ ನಗುತೆಂದನಾ ವಿಪ್ರ ತೂಗುವೀ ಕುಂಡಲವನೀವುದು ಬೇಗ ಧಾರೆಯನೆರೆದು ಕೊಡಿಯೆನ ಲಾಗಳುದಕವನರಸಿ ಕಾಣದೆ ನೋಡಿದನು ಕೆಲನ ಉದಕವನು ಹೊಗರಸುತಿರಲಾ ಪದುಮನಾಭನು ನಗುತ ನಿನ್ನಯ ಹೃದಯದೊಳಗಿರ್ದಮಲಗಂಗಾಜಲವ ತೆಗೆದೆನಗೆ ## ೧೦ / ನಡುಗನ್ನಡ ಕಾವ್ಯ ಸಂಚಯ ಹದುಳದಿಂದೆರೆ ಧಾರೆಯನು ಸಂ ಪದದ ಮುಕುತಿಯ ಪದವನೊಲುವಡೆ ಇದು ಶುಭೋದಯವೆಂದು ಮಾಯಾವಿಪ್ರನರುಹಿದನು ಸರಳ ತೆಗೆದನು ಸರಸಿಜಪ್ರಿಯ ವರಸುತನು ತನ್ನುರವ ಬಗಿದನು ಘರಿಘರಿಲು ಘರಿಲೆನಲು ತೆಗೆದನು ನಿರ್ಮಲೋದಕವ ಪರಮ ಸಂತೋಷದಲಿ ಧಾರೆಯ ನೆರೆದು ಕುಂಡಲವೀಯೆ ಮಿಗೆ ಪು ಷ್ಕರದ ಜನ ಜಯಯೆನಲು ಮುರರಿಪುವೊಲಿದು ಕೈಕೊಂಡ ಪರಮ ಕರುಣಾಸಿಂಧು ಕರ್ಣ ಗಿರದೆ ನಿಜಮೂರ್ತಿಯನು ತೋರಿದ ನುರುತರ ಪ್ರೇಮದಲಿ ಮುಕುತಿಯ ಪದವ ನೇಮಿಸಿದ ನರನನೆಚ್ಚರಿಸಿದನು ಕರುಣಿಗೆ ಕರುಣದನುಸಂಧಾನ ಮಾಣದು ಧರೆಯೊಳಚ್ಚರಿಯೆನುತ ಬೆರಗಿನೊಳಿದ್ದುದಮರಗಣ ಹಿಂದೆ ಪಾಶುಪತಕ್ಕೆ ಬಳುವಳಿ ಬಂದುದಂಜನ ಬಾಣವದರೆಣೆ ಯಿಂದತೆಗೆದನು ಗಿರಿಜೆಂಪ್ರಿಯ ನೆನೆದು ಮಂತ್ರಿಸುತ ಮಂದರಾಚಲ ನಡುಗೆ ಕಿಡಿಗಳ ಸಂದಣಿಯ ಸುರಿವಂಬನಾ ರವಿ ನಂದನನ ಕೊರಳೆಡೆಯೊಳೆಚ್ಚನು ವಾಸವನ ಸೂನು ಅರಸ ಕೇಳೋ ಕರ್ಣನೊಡಲಲಿ ಪರಮತೇಜಃಪುಂಜವೊದೆದುಪ್ಪರಿಸಿ ಹಾಯ್ದುದು ಹೊಳೆದುದಿನಮಂಡಲದ ಮಧ್ಯದಲಿ ಅರೆರೆ ಭಾಪುರೆ ಕರ್ಣ ಮಝ ಭಾ ಪುರೆ ಭಟಾಗ್ರಣಿ ನಿನ್ನ ಸರಿದೊರೆ ಯೆರಡು ಯುಗದಲಿ ಕಾಣೆ