I SEM BCA Ramayana PDF

Document Details

Uploaded by Deleted User

Bangalore University

Dr. S. N. Pranesha and Dr. Srihari Arshi

Tags

Ramayana Sanskrit textbook Indian Literature

Summary

This is a Sanskrit textbook for a first-semester undergraduate BCA program. It contains the first canto of the Ramayana, including translations and notes in both Kannada and English, plus an introduction. The text is published by Bangalore City University.

Full Transcript

वाल्मीिकमहर्षिविरिचते श्रीमद्‌रामायणे बालकाण्डे प्रथमः सर्गः- सङ्क्षिप्तरामायणम् ವಾಲ್ಮೀಕಿಮಹರ್ಷಿ ವಿರಚಿತ ಶ್ರೀಮದ್ರಾಮಾಯಣದ ಬಾಲಕಾಂಡದ ಮೊದಲ ಸರ್ಗ- ಸಂಕ್ಷಿಪ್ತರಾಮಾಯಣಮ್ (ಪ್ರಥಮ ಸೆಮಿಸ್ಟರ್‌ ಬಿ.ಸಿ.ಎ. ಇತ್ಯಾದಿ ಪದವಿ ತರಗತಿಯ ಸಂಸ್ಕೃತ ಪಠ್ಯ ) - ಸಂಪಾದ...

वाल्मीिकमहर्षिविरिचते श्रीमद्‌रामायणे बालकाण्डे प्रथमः सर्गः- सङ्क्षिप्तरामायणम् ವಾಲ್ಮೀಕಿಮಹರ್ಷಿ ವಿರಚಿತ ಶ್ರೀಮದ್ರಾಮಾಯಣದ ಬಾಲಕಾಂಡದ ಮೊದಲ ಸರ್ಗ- ಸಂಕ್ಷಿಪ್ತರಾಮಾಯಣಮ್ (ಪ್ರಥಮ ಸೆಮಿಸ್ಟರ್‌ ಬಿ.ಸಿ.ಎ. ಇತ್ಯಾದಿ ಪದವಿ ತರಗತಿಯ ಸಂಸ್ಕೃತ ಪಠ್ಯ ) - ಸಂಪಾದಕರು ಡಾ. ಎಸ್. ಎನ್. ಪ್ರಾಣೇಶ ಡಾ. ಶ್ರೀಹರಿ ಆರ್ಷಿ ಪ್ರಸಾರಾಂಗ ಬೆಂಗಳೂರು ನಗರ ವಿಶ್ವವಿದ್ಯಾಲಯ ಬೆಂಗಳೂರು – 560001 VALMIKI RAMAYANAM- BALAKANDA- SARGA-1- SAMKSHIPTA RAMAYANAM A prescribed Text book in Sanskrit for First Semester B.C.A. course. Edited and Translated by: Dr. S. N. Pranesha, Jain College, VV puram, Bengaluru-560004. and Dr. Srihari Arshiೆ, BNM Degree college, BSK II Stage, Bengaluru-560070. Published by: Prasaranga, Bangalore City University, Bangalore © ಬೆಂಗಳೂರು ನಗರ ವಿಶ್ವವಿದ್ಯಾಲಯ ಪ್ರಧಾನ ಸಂಪಾದಕರು: ಡಾ. ಪದ್ಮಜಾ ಎಂ. ಆರ್. ಪ್ರಕಟಣೆ ನಿರ್ವಹಣೆ : ಬೆಲೆ : ಪ್ರಕಾಶಕರು : ನಿರ್ದೇಶಕರು, ಪ್ರಸಾರಾಂಗ ಮತ್ತು ಮುದ್ರಣಾಲಯ ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಂಗಳೂರು - 560001 ಪ್ರಧಾನ ಸಂಪಾದಕರ ನುಡಿ ಸಂಸ್ಕೃತ ಸಾಹಿತ್ಯ ಪ್ರಪಂಚದಲ್ಲಿ ಪ್ರಮುಖವಾದ ಕೃತಿ ವಾಲ್ಮೀಕಿಮುನಿ ವಿರಚಿತ ರಾಮಾಯಣ. ಕೇವಲ ಸಂಸ್ಕೃತಕ್ಕೆ ಅಷ್ಟೇ ಅಲ್ಲ ಇಡೀ ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ವೈಶಿಷ್ಟ್ಯತೆಯಿಂದ ಅಪಾರ ಕೊಡುಗೆ ನೀಡುತ್ತಾ ಬಂದಿದೆ. ಇದರ ಪರಿಚಯವೂ ವಿದ್ಯಾರ್ಥಿಗಳಿಗೆ ಬಹು ಅವಶ್ಯಕವಾದದ್ದು. ಈ ಮಹಾಕಾವ್ಯದಲ್ಲಿನ ಬಾಲಕಾಂಡದ, ಮೊದಲ ಸರ್ಗವನ್ನು 2021-22ನೇ ಸಾಲಿನ ಪ್ರಥಮ ಸೆಮಿಸ್ಟರ್‌ ಬಿ.ಸಿ.ಎ ಪದವಿ ತರಗತಿಯ ಸಂಸ್ಕೃತ ವಿದ್ಯಾರ್ಥಿಗಳಗೆ ಪಠ್ಯವನ್ನಾಗಿ ಇಡಲು ಸಂಸ್ಕೃತ ಅಧ್ಯಯನ ಮಂಡಳಿಯು ನಿರ್ಧರಿಸಿರುವುದು ನಿಜಕ್ಕೂ ಶ್ಲಾಘನೀಯ. ಅಧ್ಯಯನ ಮಂಡಳಿಯ ಅಪೇಕ್ಷೆಯಂತೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಸೂಕ್ತ ಕನ್ನಡ ಆಂಗ್ಲ ಭಾಷೆಗಳಲ್ಲಿ ಪಠ್ಯಕ್ಕೆ ಅನುವಾದ ಹಾಗೂ ಟಿಪ್ಪಣಿಗಳೊಂದಿಗೆ ಈ ಪಠ್ಯಭಾಗವನ್ನು ಸಂಪಾದಿಸಿ ಕೊಡುವ ಜವಾಬ್ದಾರಿಯನ್ನು ಡಾ. ಎಸ್. ಎನ್. ಪ್ರಾಣೇಶ ಹಾಗೂ ಡಾ. ಶ್ರೀಹರಿ ಆರ್ಷಿ ಅವರುಗಳಿಗೆ ವಹಿಸಲಾಗಿತ್ತು , ಅವರು ತಮಗೆ ವಹಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರಿಗೆ ನನ್ನ ಹೃತೂರ್ವಕ ಧನ್ಯವಾದಗಳು. ಸಂಸ್ಕೃತ ಅಧ್ಯಯನ ಮಂಡಳಿಯ ಎಲ್ಲಾ ತೀರ್ಮಾನಗಳನ್ನು ಬೆಂಬಲಿಸಿ ಪ್ರೋತ್ಸಾಹಿಸುತ್ತಿರುವ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಲಿಂಗರಾಜ ಗಾಂಧಿ ಅವರಿಗೆ ನನ್ನ ವಂದನೆಗಳು. ಈ ಪಠ್ಯಪುಸ್ತಕವನ್ನು ಸಕಾಲದಲ್ಲಿ ಸುಂದರವಾಗಿ ಮುದ್ರಿಸಿ ಪಕಟಿಸುತ್ತಿರುವ ಪ್ರಸಾರಾಂಗದ ನಿರ್ದೇಶಕರಿಗೆ ಹಾಗೂ ಮುದ್ರಣಾಲಯದ ಎಲ್ಲಾ ಸಿಬ್ಬಂದಿ ವರ್ಗದವರಿಗೂ ನನ್ನ ಧನ್ಯವಾದಗಳು. ಡಾ.ಪದ್ಮಜಾ ಎಂ. ಆರ್. ಅಧ್ಯಕರ ್ಷ ು, ಸಂಸ್ಕೃತ ಅಧ್ಯಯನ ಮಂಡಳಿ ಬೆಂಗಳೂರು ವಿಶ್ವವಿದ್ಯಾಲಯ ವಿಷಯಾನುಕ್ರಮಣಿಕೆ ವಿಷಯ ಪುಟಸಂಖ್ಯೆ 1. ಮುನ್ನುಡಿ V 2. ಪೀಠಿಕೆ VII 3. Introduction XVI 4. श्रीवाल्मीिकमहर्षिविरिचते श्रीमद्‌रामायणे बालकाण्डे प्रथमः सर्गः 1 5. ಶ್ರೀವಾಲ್ಮೀಕಿರಾಮಾಯಣ-ಬಾಲಕಾಂಡ-ಪ್ರಥಮಸರ್ಗ: 11 6. VALMIKI RAMAYANAM- BALAKANDA - SARGA-1 40 ಮುನ್ನುಡಿ ಶ್ರೀಮದ್ವಾಲ್ಮೀಕಿರಾಮಾಯಣವು ಸಮಗ್ರ ಪ್ರಪಂಚದ ಪ್ರಾಚೀನ ಇತಿಹಾಸದ ದಾಖಲೆಯಾಗಿದೆ. ಆದಿಕಾವ್ಯವಾಗಿದೆ. ಮಾನವನ ಜೀವನಕ್ಕೆ ಮಾರ್ಗದರ್ಶಿಯಾಗಿದೆ. ಶ್ರೀ ವಾಲ್ಮೀಕಿ ಮುನಿಗಳು ಸ್ವತಃ ತಾವು ಕಂಡಿದ್ದನ್ನು, ಅನುಭವಿಸಿದ್ದನ್ನು, ತಾವೇ ಒಬ್ಬ ಪಾತ್ರ ಧಾರಿಯೂ ಆಗಿರುವ ಇತಿಹಾಸವನ್ನು ಗ್ರಂಥದ ಮೂಲಕ ದಾಖಲಿಸಿದ್ದಾರೆ. ಇಂತಹ ಇತಿಹಾಸ ಗ್ರಂಥ ಬೇರೊಂದಿಲ್ಲ. ‘ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್’ (ಇತಿಹಾಸ ಮತ್ತು ಪುರಾಣಗಳ ಮೂಲಕ ವೇದದ ಅರ್ಥವನ್ನು ವಿಸ್ತರಿಸಬೇಕು) ಎಂಬ ಈ ಮಾತು ನಮ್ಮ ದೇಶದ ಇತಿಹಾಸ ಗ್ರಂಥಗಳಾದ ರಾಮಾಯಣಮಹಾಭಾರತಗಳನ್ನೇ ಸ್ಪಷ ್ಟವಾಗಿ ಹೇಳುತ್ತಿದೆ. ಆದರೆ ಬ್ರಿಟೀಷರ ಆಳ್ವಿಕೆಗೆ ಒಳಗಾದ ನಂತರ ಭಾರತವು ನಾನಾ ವಿಭಿನ್ನ ಚಿಂತನೆಗಳಿಂದ ಕೂಡಿದೆ. ಇದರಿಂದಾಗಿ ನಮ್ಮ ಪರಂಪರೆಯಲ್ಲಿ ಇತಿಹಾಸವೆಂದು ಪ್ರಸಿದ್ಧವಾಗಿದ್ದ ರಾಮಾಯಣ ಮಹಾಭಾರತಗಳನ್ನು ಕೇವಲ ಕಾಲ್ಪನಿಕ ಕಥಾಗ್ರಂಥಗಳೆಂದು ಪ್ರಚಾರ ಮಾಡಿದ ಬ್ರಿಟೀಷರ ನಿಲುವನ್ನೇ ಅಳವಡಿಸಿಕೊಂಡು ಬೌದ್ಧಿಕವಾಗಿಯೂ ಆಂಗ್ಲರ ದಾಸರಾಗಿರುವವರ ಗುಂಪು ಬೆಳೆಯುತ್ತಲೇ ಇದೆ. ಇಂತಹವರಿಗೆ ನಮ್ಮ ದೇಶದ ಶ್ರೇಷ್ಠತೆಗೆ ನಾವೇ ಧಕ್ಕೆಯುಂಟು ಮಾಡುತ್ತಿದ್ದೇವೆಂಬ ಸಾಮಾನ್ಯ ಪರಿಜ್ ಞಾ ನವೂ ಇಲ್ಲವಾಗಿದೆ. ನಮ್ಮ ಪರಂಪರೆಯಲ್ಲಿ ಬಂದಿರುವ ಆಸ್ತಿಕಚಿಂತನೆ, ಗುರುಹಿರಿಯರಲ್ಲಿ ವಿನಯ, ಶ್ರದ್ಧೆ ಮೊದಲಾದ ಮೌಲ್ಯಗಳ ಕುರಿತ ಚಿಂತನೆ ದುರ್ಬಲವಾಗುತ್ತಿದೆ. ಇವೆಲ್ಲಕ್ಕೂ ವಿರುದ್ಧವಾಗಿರುವ ನಡೆ ಪ್ರಗತಿಪರ ನಡೆ ಎಂದು ಚಿಂತಿಸುವ ಪ್ರಮಾದಿಗಳ ಸಮೂಹ ದೇಶದ ಪ್ರಗತಿಗೆ ಮಾರಕವೂ ಆಗಿದೆ. ಈ ಎಲ್ಲ ವಿಭಿನ್ನ ಚಿಂತನೆಗಳ ನಡುವೆ ನಾವು ರಾಮಾಯಣ, ಮಹಾಭಾರತ ಮೊದಲಾದ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಜಟಿಲವಾದ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ನಮ್ಮ ದೇಶದ ಜನಮಾನಸದಲ್ಲಿರುವ ವಿನಯ, ಶ್ರದ್ಧೆ , ಭಕ್ತಿ ಮೊದಲಾದ ಗುಣಗಳನ್ನು ಬೆಳೆಸಬೇಕಾಗಿದೆ. ಈ ಕಾರಣದಿಂದ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಸೆಮಿಸ್ಟರ್ ಬಿ.ಎ./ಬಿಮ್ಯೂಸಿಕ್/ ಬಿ.ಎಫ್.ಎ/ಬಿ.ಪಿಎ/ಬಿ.ಎ./ಬಿ.ಎಸ್.ಡಬ್ಲ್ಯೂ /ಬಿ.ವಿ.ಎ ಪದವಿ ತರಗತಿಗಳ ಸಂಸ್ಕೃತ ವಿದ್ಯಾರ್ಥಿಗಳಿಗೆ ಪಾಠ್ಯಭಾಗವನ್ನಾಗಿ ಶ್ರೀಮದ್ವಾಲ್ಮೀಕಿ ರಾಮಾಯಣದ ಬಾಲಕಾಂಡದ ಪ್ರಥಮ ಸರ್ಗದ ಕಥಾಭಾಗವನ್ನು ಆರಿಸಲಾಗಿದೆ. ಈ ಭಾಗದಲ್ಲಿ ರಾಮಾಯಣ ಕಥೆಯು ಸಂಕ್ಷಿಪ್ತವಾಗಿ ಮೂಡಿಬಂದಿದೆ. ಇದರ ಅಧ್ಯಯನದಿಂದಾಗಿ ವಿದ್ಯಾರ್ಥಿಗಳು ಸಮಗ್ರ ರಾಮಾಯಣವನ್ನು ವಿಸ್ತಾರವಾಗಿ ತಿಳಿದುಕೊಳ್ಳಬೇಕೆಂದು ಬಯಸುತ್ತಾರೆ. VI ಈ ಮೂಲಕ ರಾಮಾಯಣದ ಆದರ್ಶಗಳು ಎಲ್ಲ ವಿದ್ಯಾರ್ಥಿಗಳ ಬದುಕಿನಲ್ಲಿ ನೆಲೆನಿಂತು ಅವರ ಯಶಸ್ವಿ ಜೀವನಕ್ಕೆ ಸೋಪಾನವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರು ಹಾಗೂ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರು ರಾಮಾಯಣದ ಪ್ರಥಮ ಸರ್ಗದ ಆನುವಾದ, ವಿವರಣೆ, ಟಿಪ್ಪಣಿ ಇವುಗಳನ್ನು ಸಿದ್ಧಪಡಿಸುವ ಕಾರ್ಯವನ್ನು ನಮಗೆ ವಹಿಸಿದ್ದರು. ಈ ಕಾರ್ಯವನ್ನು ಯಥಾಶಕ್ತಿ ನಾವು ನಿರ್ವಹಿಸಿದ್ದೇವೆ. ಎಲ್ಲ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕನ್ನಡದಲ್ಲಿ ಹಾಗೂ ಇಂಗ್ಲೀಷ್‌ನಲ್ಲಿ ಅನುವಾದ ಹಾಗೂ ವಿವರಣೆಗಳನ್ನು ನೀಡಲಾಗಿದೆ. ೨೦೦೪ನೇ ಸಾಲಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಥಮ ಸೆಮಿಸ್ಟರ್ ಬಿ.ಕಾಂ. ವಿದ್ಯಾರ್ಥಿಗಳಿಗಾಗಿ ಸುಭಾಷ್ ಸ್ಟೋರ್ಸ್ ಪ್ರಕಾಶನದ ಮೂಲಕ ರಾಮಾಯಣದ ಸುಂದರಕಾಂಡ ಭಾಗವನ್ನು ಮುದ್ರಿಸಲಾಗಿತ್ತು. ಈ ಗ್ರಂಥದ ಸಹಾಯವನ್ನು ಪಡೆದು ವಾಲ್ಮೀಕಿಗಳ ಜೀವನ, ಕಾಲ ಇತ್ಯಾದಿ ವಿಷಯಗಳ ಬಗ್ಗೆ ಇರುವ ಮಾಹಿತಿಯನ್ನು ನಾವು ಸ್ವೀಕರಿಸಿದ್ದೇವೆ. ಈ ಮೂಲಕ ಅವರಿಗೆ ಕೃತಜ್ಞ ತೆಯನ್ನು ಸಲ್ಲಿಸುತ್ತಿದ್ದೇವೆ. ನಮ್ಮ ಈ ಪ್ರಯತ್ನದಿಂದ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿ ಎಂಬುದು ನಮ್ಮ ಆಶಯ. ಹಿರಿಯರೂ ಹಾಗೂ ವಿದ್ವಾಂಸರೂ ಕೂಡ ಈ ಗ್ರಂಥವನ್ನು ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಿದರೆ ಮುಂದಿನ ನಮ್ಮ ಸಾಹಿತ್ಯಿಕ ಕಾರ್ಯಗಳಿಗೆ ಸಹಾಯವಾಗುವುದೆಂದು ನಂಬಿದ್ದೇವೆ. ಈ ಗ್ರಂಥದ ಡಿ.ಟಿ.ಪಿ. ಹಾಗೂ ಪೇಜ್ ಲೇಔಟ್ ಮೊದಲಾದ ಎಲ್ಲ ತಾಂತ್ರಿಕ ಸಹಾಯವನ್ನು ಮಾಡಿರುವ ಮಹತಿ ಡಿ.ಟಿ.ಪಿ ಸೆಂಟರ್, ಇವರಿಗೆ ಧನ್ಯವಾದಗಳು. ಈ ಗ್ರಂಥವನ್ನು ಮುದ್ರಿಸಲು ಅಂಗೀಕರಿಸಿರುವ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕರಿಗೆ ಕೃತಜ್ಞ ತೆಗಳು. ಇತಿ ತಮ್ಮೆಲ್ಲರ ವಿಶ್ವಾಸಿಗಳು ಡಾ. ಎಸ್.ಎನ್.ಪ್ರಾಣೇಶ ಡಾ. ಶ್ರೀಹರಿ ಆರ್ಷಿ ಪೀಠಿಕೆ ವಾಲ್ಮೀಕಿ ವಿರಚಿತ ಶ್ರೀಮದ್ರಾಮಾಯಣ ಮತ್ತು ವ್ಯಾಸವಿರಚಿತ ಶ್ರೀಮನಹಾಭಾರತ ಗ್ರಂಥಗಳು ಭರತಖಂಡದ ಎರಡು ದಿವ್ಯ ನೇತ್ರಗಳಿದ್ದಂತೆ. ಋಷಿಪ್ರಣೀತವಾದ ಈ ಮಹಾಕೃತಿಗಳು ಆರ್ಷಕಾವ್ಯಗಳೆಂದೂ ರಾಷ್ಟ್ರಕಾವ್ಯಗಳೆಂದೂ ವಿಖ್ಯಾತವಾಗಿವೆ. ಭಾರತೀಯರ ಜೀವನ, ಸಂಸ್ಕೃತಿಗಳಲ್ಲಿ ಹಾಸುಹೊಕ್ಕಾಗಿರುವ ಈ ಮೇರುಕೃತಿಗಳು ನಿತ್ಯಪೂಜೆಯನ್ನು ಪಡೆಯುತ್ತಿರುವ ಪೂಜ್ಯ ಗ್ರಂಥಗಳೂ ಆಗಿವೆ. ಭರತಖಂಡದಲ್ಲಿ ವೇದಗಳ ನಂತರದ ಪವಿತ್ರಸ್ಥಾನ ಈ ಎರಡು ಮಹಾಕಾವ್ಯಗಳಿಗೆ ಸಲ್ಲುತ್ತದೆ. ಭಾರತೀಯ ಪರಂಪರೆಯಲ್ಲಿ ಆರ್ಷಕಾವ್ಯಗಳು 'ಇತಿಹಾಸ' ಎಂದೂ ಜನಜನಿತವಾಗಿವೆ. 'ಇತಿಹಾಸ ಪುರಾಣಾಭ್ಯಾಂ ವೇದಾರ್ಥಮುಪಬೃಂಹಯೇತ್' ಎಂಬ ಮಾತಿನಲ್ಲಿ ಇತಿಹಾಸವೆಂದರೆ ರಾಮಾಯಣ ಮತ್ತು ಮಹಾಭಾರತ. ಇವು ಮಹಾಕಾವ್ಯಕೃತಿಗಳಾಗಿದ್ದರೂ ಚಾರಿತ್ರಿಕ ಮಹತ್ತ್ವವುಳ್ಳ ಕೃತಿಗಳೆಂದು ಹಿಂದಿನಿಂದಲೂ ಮನ್ನಣೆ ಪಡೆದಿವೆ. ಇವು ಚರಿತ್ರೆಯ ಆಧಾರವಿಲ್ಲದ ಕೇವಲ ಕಟ್ಟುಕತೆಯಲ್ಲ. ವಾಸ್ತವಿಕ ಸಂಗತಿಗಳನ್ನು ಮೂಲಸಾಮಗ್ರಿಯಾಗಿಸಿಕೊಂಡು ಪರಿಪುಷ್ಟವಾಗಿ ಬೆಳೆದ ಕಾವ್ಯಕೃತಿಗಳು. ಇದಕ್ಕೆ ಆಧಾರವಾಗಿ ಗುಜರಾತಿನ ದ್ವಾರಕಾ ಪ್ರದೇಶದಲ್ಲಿ ನಡೆದ ಸಮುದ್ರ ತಳದ ಸಂಶೋಧನೆಯನ್ನು (Marine Archaeology) ಹೇಳಬಹುದಾಗಿದೆ. ದ್ವಾರಕಾಪಟ್ಟಣದ ಅವಶೇಷಗಳು ಸಾಗರದ ಆಳದಲ್ಲಿ ಬೆಚ್ಚಗೆ ಕೂತು ಮಹಾಭಾರತದ ಪ್ರಮುಖಪಾತ್ರವಾದ ಶ್ರೀಕೃಷ್ಣನು ಚಾರಿತ್ರಿಕ ವ್ಯಕ್ತಿ ಎಂಬುದನ್ನು ಸಾರಿ ಹೇಳುತ್ತಿವೆ. ಇದೇ ರೀತಿ ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಕ್ಷೇತ್ರಗಳು, ನಗರಗಳು, ನದಿಗಳು, ಪರ್ವತಗಳು ಇಂದಿಗೂ ಬಹುಮಟ್ಟಿಗೆ ಅದೇ ಹೆಸರಿನಲ್ಲಿಯೇ ಇದ್ದು , ಆ ಕಾವ್ಯದ ಭೌಗೋಳಿಕ ಪ್ರಾಮಾಣಿಕತೆಯನ್ನು ಒದಗಿಸುತ್ತವೆ. ಭಾರತೀಯರ ಮನೆಮನೆಗಳಲ್ಲಿ ಇವತ್ತು ಕೂಡ ಕಾವ್ಯವ್ಯಕ್ತಿಗಳ ನಾಮಧೇಯಗಳೂ, ಆದರ್ಶಗಳೂ ಜೀವಂತವಾಗಿವೆ. ಹೋಲಿಕೆ ಹೆಚ್ಚಿರುವ ಸ್ನೇಹಪರರಾದ ಅಣ್ಣತಮ್ಮಂದಿರನ್ನು ರಾಮ-ಲಕ್ಷ್ಮಣರು ಎಂದರೆ, ಕಾದಾಡುವ ಸಹೋದರರನ್ನು ವಾಲಿ-ಸುಗ್ರೀವರು ಎನ್ನುತ್ತೇವೆ. ಸರಳೆಯೂ, ಸಾಧ್ವಿಯೂ ಆದ ಸ್ತ್ರೀಯನ್ನು ಸೀತಾದೇವಿಯೆಂದು ಗೌರವದಿಂದ VIII ಕಾಣುತ್ತೇವೆ. ಬಲಿಷ್ಠನಾಗಿ ಅಧಿಕಾರ ದರ್ಪದಿಂದ ಮೆರೆವ ಕಾಮುಕನನ್ನು ರಾವಣನೆನ್ನುತ್ತೇವೆ. ರಾಮಾಯಣವು ಆದಿಕಾವ್ಯವೆಂದೂ, ವಾಲ್ಮೀಕಿಮಹರ್ಷಿ ಆದಿಕವಿಯೆಂದೂ ಪ್ರಸಿದ್ಧರಾಗಿದ್ದಾರೆ. ‘जाते जगति वाल्मीकौ कविरित्यभिधाऽभवत्' ಎಂಬುದು ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಸರ್ವಮಾನ್ಯವಾದ ಅಭಿಪ್ರಾಯ. ವೇದಗಳು ಸಂಸ್ಕೃತ ಸಾಹಿತ್ಯದ ಮೂಲಸೆಲೆ, ಇತರ ಸಾಹಿತ್ಯಕ್ಕೆ ಜನಪದದ ನೆಲೆಗಟ್ಟು ಇದ್ದಂತೆ ಸಂಸ್ಕೃತ ಸಾಹಿತ್ಯಕ್ಕೆ ವೇದವಾಙ್ಮಯ. ವೇದಮಂತ್ರಗಳಲ್ಲಿನ ತ್ರಿಷ್ಟುಪ್, ಅನುಷ್ಟುಪ್ ಛಂದಸ್ಸುಗಳೇ ಸಾಹಿತ್ಯದ ಛಂದೋಬಂಧಕ್ಕೆ ಮೂಲಸಾಮಗ್ರಿ. ವಾಲ್ಮೀಕಿಮಹರ್ಷಿಯು ಛಂದಸ್ಸನ್ನು ಲೌಕಿಕ ಸಾಹಿತ್ಯನಿರ್ಮಾಣಕ್ಕೆ ಪಳಗಿಸಿದ ಆದಿಕವಿ. ರಾಮಾಯಣ ರಚನೆಗೆ ಪ್ರೇರಣೆ ನೀಡಿದ ಕ್ರೌಂಚವಧ ಪ್ರಸಂಗ ಇದನ್ನು ಪುಷ್ಟಿಕರಿಸುತ್ತದೆ. ‘ಮಾ ನಿಷಾದ’ ಪದ್ಯದಲ್ಲಿ ನಿಹಿತವಾಗಿರುವ ಪಾದಬದ್ಧತೆ, ಅಕ್ಷರಸಮತೆ, ಲಯ ಗೇಯಕ್ಕೆ ಒಗ್ಗುವ ಗುಣ, ಸ್ವತಃ ಅದನ್ನಾಡಿದ ವಾಲ್ಮೀಕಿಯನ್ನೇ ಬೆರಗುಗೊಳಿಸಿ ಹೊಸ ಕಾವ್ಯಪದ್ಧತಿಗೆ ನಾಂದಿಯಾಯಿತೆಂದು ಬಾಲಕಾಂಡದ ಪ್ರಾಸ್ತಾವಿಕ ಸರ್ಗಗಳು ಸ್ಪಷ ್ಟಪಡಿಸುತ್ತವೆ. ಸೃಷ್ಟಿಕರ್ತನಾದ ಬ್ರಹ್ಮನೇ ವಾಲ್ಮೀಕಿಯನ್ನು ಕಾವ್ಯಬ್ರಹ್ಮನೆಂದು ಪರಿಗಣಿಸಿ, ಸ್ಫೂರ್ತಿಯನ್ನೂ, ಸಾಮರ್ಥ್ಯವನ್ನೂ ಒದಗಿಸಿದನೆಂಬುದು ಅತ್ಯಂತ ಅರ್ಥಪೂರ್ಣವಾಗಿದೆ. मच्छन्दादेव तेब्रह्मन् प्रवृत्तेयं सरस्वती । ಎಂಬ ಬ್ರಹ್ಮನ ನುಡಿ, ಕಾವ್ಯಕ್ಕೆ ಮೂಲ ಅಯತ್ನಿತವಾದ ಅಂತಃಸ್ಫೂರ್ತಿ, ಪ್ರತಿಭಾ ಶಕ್ತಿ ಇವೇ ಎಂದು ಸಾರುತ್ತಿದೆ. वृत्तं कथय धीरस्य यथा ते नारदात् श्रुतम् ॥ १.२.३१ रहस्यं च प्रकाशं च यद् वृत्तं तस्य धीमतः । १.२.३३ तच्चाप्यविदितं सर्वं विदितं ते भविष्यति ॥ १.२.३५ IX 'ನಾರದರಿಂದ ಕೇಳಿದ ರಾಮ ಕಥೆಯನ್ನು ಕಾವ್ಯವಾಗಿಸು. ಈಗ ಗೋಚರಿಸದ ವಿವರಗಳೆಲ್ಲ ಕಾವ್ಯಬಂಧಕಾಲದಲ್ಲಿ ಗೋಚರಿಸುತ್ತವೆ. ಕಥಾ ನಾಯಕನ ಮಹಾಚರಿತ್ರೆಯ ಆಂತರ್ಯವನ್ನೂ ಬಾಹ್ಯವನ್ನೂ ಪ್ರಕಾಶಗೊಳಿಸು.' ಬ್ರಹ್ಮನು ವಾಲ್ಮೀಕಿಗೆ ನೀಡಿದ್ದು ಸೂಚನೆಯೋ, ಸಲಹೆಯೋ, ವರದಾನವೋ ಯಾವುದಾದರೂ ಸರಿ, ಬ್ರಹ್ಮವಾಕ್ಯದ ಧ್ವನಿಯಂತೂ ಸೂರ್ಯಪ್ರಕಾಶದಷ್ಟು ನಿಚ್ಚಳವಾಗಿದೆ. ಮಹಾಕಾವ್ಯರಚನೆಗೆ ಬೇಕಾದ್ದು ಪ್ರತಿಭೆ, ಅಂತಃಸ್ಫೂರ್ತಿ, ರಸಾವೇಶ, ಅಂತರ್ದೃಷ್ಟಿಗಳು. ಅವು ವಾಲ್ಮೀಕಿ ಮಹರ್ಷಿಯಲ್ಲಿ ನೆಲೆ ನಿಂತಿದ್ದುವು. ಶ್ರೀಮದ್ರಾಮಾಯಣದ ಕರ್ತೃ ವಾಲ್ಮೀಕಿ ಮಹರ್ಷಿ ವಾಲ್ಮೀಕಿ ಮಹರ್ಷಿಯ ಬಗ್ಗೆ ಸಿಗುವ ವಿವರಗಳು ಅತ್ಯಂತ ಸ್ವಲ್ಪ. ಕರ್ತೃವಿಗಿಂತ ಕೃತಿಯನ್ನೇ ಮಾನ್ಯ ಮಾಡುವ ಪರಂಪರೆ ಭಾರತದ್ದು. ಹಾಗಾಗಿ ಕವಿ ವಿಚಾರಗಳಾದ ಅವರ ಕಾಲ, ಜೀವನ, ವೈಯಕ್ತಿಕ ವೃತ್ತಾಂತಗಳು ಗೌಣವಾಗಿಬಿಡುತ್ತವೆ. ಆದಿಕವಿಯ ಬಗ್ಗೆ ದೊರೆತಿರುವ ನಿಶ್ಚಿತ ಮಾಹಿತಿ ಇಷ್ಟು , ಆತ ತಮಸಾನದಿಯ ತೀರದಲ್ಲಿದ್ದ ಆಶ್ರಮವಾಸಿಗಳಾಗಿದ್ದರು. ಈ ತಮಸೆ ಗಂಗಾನದಿಯ ಪ್ರದೇಶದ ಒಂದು ಕಿರುನದಿ ಎಂಬುದು ರಾಮಾಯಣದಿಂದಲೇ ತಿಳಿಯುತ್ತದೆ. ವಾಲ್ಮೀಕಿ ಮಹರ್ಷಿಗಳಿಗೆ ಪ್ರಾಚೇತಸರೆಂಬ ನಾಮನಿರ್ದೇಶವೂ ಇದೆ. ಪ್ರಚೇತಸ ಋಷಿಗಳ ಪುತ್ರ ವಾಲ್ಮೀಕಿ. ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ । ವೇದಃ ಪ್ರಾಚೇತಸಾದಾಸೀತ್ ಸಾಕ್ಷಾದ್ರಾಮಾಯಣಾತ್ಮನಾ || ಎಂಬ ಮಾತು ಪ್ರಸಿದ್ಧವಿದೆಯಷ್ಟೆ. ಸೃಷ್ಟಿಕರ್ತ ಬ್ರಹ್ಮ ಮೊದಲು ಸೃಷ್ಟಿಸಿದ ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ , ಪುಲಹ, ಕ್ರತು, ಪ್ರಚೇತಸ, ವಸಿಷ್ಠ , ಭೃಗು ಮತ್ತು ನಾರದ ಎಂಬ ದಶ ಪ್ರಜಾಪತಿಗಳಲ್ಲಿ ಪ್ರಚೇತಸನೂ ಒಬ್ಬ. ಕಾವ್ಯ ಪ್ರತಿಭಾ ಸಂಪತ್ತನ್ನೇ ಸೂರೆಗೊಂಡಿದ್ದ ಮೇರು ಕವಿ ಮಹರ್ಷಿ ವಾಲ್ಮೀಕಿ. ಪ್ರತಿಭೆಯ ಜತೆಗೆ ಲೋಕಕಾರುಣ್ಯವೂ ಸೇರಿ ವಾಲ್ಮೀಕಿಯ ವ್ಯಕ್ತಿತ್ವ ಸರ್ವಕಾಲಕ್ಕೂ ಸ್ಫೂರ್ತಿಯ ಸೆಲೆಯಾಗಿದೆ. ತಾವು ರಚಿಸಿದ ರಾಮಾಯಣವನ್ನು ಲವಕುಶರಿಗೆ ಕಂಠಪಾಠ ಮಾಡಿಸಿ ಅವರಿಂದ X ಕಾವ್ಯ ಪ್ರಚಾರವನ್ನೂ ಮಾಡಿಸಿದ ವಾಲ್ಮೀಕಿ ಮಹರ್ಷಿಯ ವಿವರವಾದ ವ್ಯಕ್ತಿಚಿತ್ರಣಗಳನ್ನು ಕಾಳಿದಾಸ, ಭವಭೂತಿ, ದಿಙ್‌ನಾಗ ಮುಂತಾದ ಶ್ರೇಷ್ಠ ಪ್ರಾಚೀನ ಸಂಸ್ಕೃತ ಕವಿಗಳ ಕಾವ್ಯ , ನಾಟಕಗಳಲ್ಲಿ ಕಾಣಬಹುದಾಗಿದೆ. ವಾಲ್ಮೀಕಿಯನ್ನು ಕುರಿತು ಜನರಲ್ಲಿ ಹರಡಿರುವ ಒಂದು ಕಥೆಯೂ ಇದೆ. ವಲ್ಮೀಕ( ಹುತ್ತ ) ದಿಂದ ಬಂದವನು ವಾಲ್ಮೀಕಿ ಎಂಬುದಕ್ಕೆ ಪುಷ್ಟಿಯೊದಗಿಸುವ ಮಾತಿದು. ಬೇಡನಾಗಿ ಕಾಡಿನಲ್ಲಿದ್ದು ಕಳ್ಳತನವನ್ನು ಮಾಡುತ್ತಿದ್ದ ವ್ಯಕ್ತಿ ಒಮ್ಮೆ ನಾರದರ ಕೈಗೆ ಸಿಕ್ಕಿದಾಗ (ಅಥವಾ ಋಷಿಗಳು) ಅವರು ಬೇಡನಿಗೆ ತಾನು ಮಾಡುತ್ತಿದ್ದ ಪಾಪ ಕರ್ಮದ ಅರಿವುಂಟುಮಾಡುತ್ತಾರೆ. ಪಶ್ಚಾತ್ತಾಪ ಪಟ್ಟ ಕಳ್ಳನಿಗೆ ಪ್ರಾಯಶ್ಚಿತ್ತರೂಪವಾಗಿ ರಾಮಮಂತ್ರ ಜಪಿಸಲು ಹೇಳಿದ್ದು , ರಾಮಧ್ಯಾನದಲ್ಲೇ ತಲ್ಲೀನನಾದ ಬೇಡನ ಸುತ್ತ ಹುತ್ತ ಬೆಳೆದು, ಕಡೆಯಲ್ಲಿ ರಾಮ ಪ್ರತ್ಯಕ್ಷನಾದದ್ದು , ಬಳಿಕ ಬೇಡ ರಾಮಾಯಣದ ಕವಿಯಾದದ್ದು , ಇತ್ಯಾದಿ. ವಾಲ್ಮೀಕಿಯ ಹೆಸರಿನಲ್ಲಿ ಒಂದು ಜನಾಂಗವೂ ಕರ್ನಾಟಕದಲ್ಲಿ ಇದೆ ಎಂಬುದೂ ಒಂದು ವಿಶೇಷ. ವಾಲ್ಮೀಕಿಯನ್ನು ಆದಿಕವಿಯೆಂದು ಗೌರವಿಸುವ ಯಾವ ಪ್ರಾಚೀನ ಕವಿಯೂ ವಾಲ್ಮೀಕಿಯ ಹಿಂದಿನ ಜೀವನವನ್ನು ಕುರಿತು ಮೇಲಿನ ಕಥೆಯನ್ನು ಉಲ್ಲೇಖಿಸುವುದಿಲ್ಲ. ಪ್ರಸಂಗಾಂತರದಿಂದಲೂ ಸ್ಮರಿಸಿಕೊಳ್ಳುವುದಿಲ್ಲ ಎಂಬುದನ್ನೂ ಗಮನಿಸಬಹುದು. ಉದಾಹರಣೆಗೆ ಚಂಪೂ ರಾಮಾಯಣದ ಕರ್ತೃ ಭೋಜದೇವನ ಈ ಉಕ್ತಿಯನ್ನು ಕಾಣಬಹುದು. वाचं निशम्य भगवान् स तु नारदस्य प्राचेतसः प्रवचसां प्रथमः कवीनाम् ।। १-५ ಇಲ್ಲಿ ವಾಲ್ಮೀಕಿ ಮಹರ್ಷಿಯನ್ನು ಕವಿಗಳಲ್ಲಿ ಮೊದಲಿಗರೆಂದೂ ಪ್ರಚೇತಸರ ಪುತ್ರರೆಂದು ಮಾತ್ರ ಹೇಳಲಾಗಿದೆ. ಆದ್ದರಿಂದ ಮೇಲೆ ಹೇಳಿದ ಕಥೆ ಇತ್ತೀಚೆಗೆ ಯಾರೋ ಕಟ್ಟಿರಬೇಕೆಂಬುದು ಗೊತ್ತಾಗುತ್ತದೆ. ಕಾಲ : ಕೃತ, ತ್ರೇತಾ, ದ್ವಾಪರ, ಕಲಿ ಎಂಬ ಚತುರ್ಯುಗಗಳ ಭಾರತೀಯ ಕಾಲಮಾನದ ಪ್ರಕಾರ ರಾಮಾಯಣ ತ್ರೇತಾಯುಗಕ್ಕೆ ಸೇರಿದ್ದು , ಕೃಷ್ಣಾವತಾರವಾದ ದ್ವಾಪರಕ್ಕಿಂತ ಹಿಂದಿನದು. XI ಈಗ ನಡೆಯುತ್ತಿರುವುದು ಕಲಿಯುಗವಷ್ಟೇ. ರಾಮಾವತಾರದ ನಂತರದ ತ್ರೇತಾಯುಗದ ಉಳಿಕೆ, ದ್ವಾಪರ ಮತ್ತು ಈವರೆಗೆ ಸಂದಿರುವ ಕಲಿಕಾಲವನ್ನು ಒಟ್ಟುಗೂಡಿಸಿದರೆ, ರಾಮಾಯಣ 8,99,100 ವರ್ಷಗಳಷ್ಟು ಹಿಂದಿನದು ಎಂದಾಗುತ್ತದೆ. ಆದರೆ ಈಗ ಯಾವುದೇ ಗಣನೆಯನ್ನು ಪಾಶ್ಚಾತ್ಯ ಪದ್ಧತಿಯ ಕಾಲಮಾನದಿಂದಲೇ ಅಳತೆ ಮಾಡುವ ಬಳಕೆ ಇರುವುದರಿಂದ ಇಷ್ಟು ಪ್ರಾಚೀನತೆಯನ್ನು ಪಾಶ್ಚಾತ್ಯ ಪಂಡಿತರೂ ಆಧುನಿಕ ಭಾರತೀಯ ವಿದ್ವಾಂಸರೂ ಒಪ್ಪುವುದಿಲ್ಲ. ಗಣಿತಜ್ಞ ಆರ್ಯಭಟ ತನ್ನ ಆರ್ಯಭಟೀಯಂ ಗ್ರಂಥದಲ್ಲಿ ಕಲಿಕಾಲದ ಆರಂಭವನ್ನೂ ಸೂಚಿಸಿದ್ದಾನೆ. ಅದು ಕ್ರಿ.ಪೂ. 3101 ವರ್ಷಗಳೆಂದು. ಅಂದರೆ ಈಗ್ಗೆ 5104 ವರ್ಷಗಳು ಸಂದಿವೆ. ರಾಮಕಥೆಯನ್ನು ಮಹಾಭಾರತದ ವನಪರ್ವದಲ್ಲಿ ಯುಧಿಷ್ಠಿರನಿಗೆ ಮಾರ್ಕಂಡೇಯ ಋಷಿಗಳು ಹೇಳುತ್ತಾರೆ. ಭಾರತಕ್ಕಿಂತ ರಾಮಕಥೆ ಪ್ರಾಚೀನ ಎಂಬುದು ಇದರಿಂದಲೂ ತಿಳಿಯುತ್ತದೆ. ಅಂದ ಮೇಲೆ ರಾಮಾಯಣ 5104 ವರ್ಷಗಳಿಗಿಂತ ಹಿಂದಿನದೆಂಬುದು ನಿರ್ವಿವಾದ ಎಂದಂತಾಯಿತು. ಆದರೇನು ವಿಂಟರ್‌ನಿಟ್ಸ್ ವೆಬರ್, ಮುಂತಾದ ಕೆಲವು ಪಾಶ್ಚಾತ್ಯ ಪಂಡಿತರು ರಾಮಾಯಣಕ್ಕೆ ಇಷ್ಟು ಪ್ರಾಚೀನತೆಯನ್ನು ಒಪ್ಪಲು ತಯಾರಿಲ್ಲ. ಅವರ ಪ್ರಕಾರ ಕ್ರಿ.ಪೂ. ಮೂರನೇ ಶತಮಾನ ರಾಮಾಯಣದ ರಚನಾಕಾಲವಿರಬಹುದಂತೆ. ಅಪೌರುಷೇಯವಾದ ವೇದಗಳಿಗೆ ಕ್ರಿ.ಪೂ.1300-1200ರ ಕಾಲವನ್ನೂ ನಿಗದಿ ಮಾಡುತ್ತಾರೆ ಈ ಪಂಡಿತರು. ನಮ್ಮ ಪುರಾತನ ಸಾಹಿತ್ಯದ ಕಾಲದ ವಿಚಾರದಲ್ಲಿ ಈ ಅಂತೆಕಂತೆಗಳನ್ನು ನಂಬಲು ಏನೂ ಕಾರಣವಿಲ್ಲ ಎಂಬುದು ಸ್ವಯಂವೇದ್ಯ. ಇತ್ತೀಚೆಗೆ ಕ್ಯಾಂಬೆ ಕೊಲ್ಲಿಯಲ್ಲಿ ನಡೆದ ಸಂಶೋಧನೆಗಳಿಂದ ರಾಮಾಯಣಕಾಲದ ಅವಶೇಷಗಳು ಪತ್ತೆಯಾಗಿರುವ ಅತ್ಯಂತ ಅಚ್ಚರಿಯ ಸುದ್ದಿ ಹೊರಬಿದ್ದಿದ್ದು , ಇದರ ಪ್ರಾಚೀನತೆ ಲಕ್ಷ ವರ್ಷಗಳ ಗಣನೆಯಲ್ಲಿದೆ ಎಂಬುದೂ ಕೂಡ ಗಮನಾರ್ಹ. ಇದಕ್ಕೆ ಪೂರಕವಾದ ಮತ್ತೊಂದು ವಾರ್ತೆಯೂ ಪತ್ರಿಕೆಗಳಲ್ಲಿ ಕಾಣಿಸಿಕೊಂಡಿದೆ. ಅಮೇರಿಕದ ನಾಸಾ (NASA) ಸಂಸ್ಥೆಯ ಉಪಗ್ರಹಗಳ ಸೂಕ್ಷ್ಮೇಕ್ಷಿಕೆಗಳಿಗೆ ಸಮುದ್ರದಡಿಯಲ್ಲಿ ಪ್ರಾಚೀನಕಾಲದ ಸೇತುವೆಯೊಂದು ಕಂಡಿದ್ದು ಅದೂ XII ರಾಮಾಯಣದ್ದಿರಬಹುದೆಂದು ಹೇಳಲಾಗಿದೆ. ಶ್ರೀರಾಮನು ಕಪಿವೀರರ ಸಹಾಯದಿಂದ ಸಮುದ್ರಕ್ಕೆ ಸೇತು ಬಂಧ ಮಾಡಿ, ತನ್ಮೂಲಕ ತನ್ನ ಸೇನೆಯನ್ನು ಲಂಕೆಗೆ ಕೊಂಡೊಯ್ದ ಅಭೂತಪೂರ್ವ ಸಾಹಸದ ಸಮಗ್ರ ವಿವರಗಳು ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಬರುತ್ತವೆಯಷ್ಟೆ. ಇದರಿಂದ ತಿಳಿಯುವುದೇನೆಂದರೆ, ರಾಮಾಯಣದ ಕಾಲವನ್ನು ಈಗಲೇ ಇದಮಿತ್ಥಂ ಎಂದು ಹೇಳಲು ಬರುವುದಿಲ್ಲ. ನವನವೀನ ಸಂಶೋಧನೆಗಳ ನೆರವಿನಿಂದ ಹೊರಬರುವ ಪುಷ್ಟಪ್ರಮಾಣಗಳನ್ನಾಧರಿಸಿ ಅದರ ಪ್ರಾಚೀನತೆಯನ್ನು ನಿಶ್ಚಯಿಸಬೇಕಾಗಿದೆ. ರಾಮಾಯಣದ ಅನನ್ಯತೆ : ರಾಮಾಯಣವು ಶತಶತಮಾನಗಳ ಕಾಲಪ್ರವಾಹವನ್ನು ಮೆಟ್ಟಿನಿಂತು ನಿತ್ಯನೂತನವಾಗಿ ಕಾಣುವುದಕ್ಕೆ ಅದರಲ್ಲಿ ಅಡಗಿರುವ ಅನನ್ಯವಾದ ಸ್ವಾರಸ್ಯವೇ ಕಾರಣ. ರಾಮಾಯಣ ಕಥೆಯ ಕಕ್ಷೆಯಲ್ಲಿ ಜೀವ ಜಗತ್ತಿನ ಪ್ರಾತಿನಿಧಿಕ ರೂಪಸ್ವರೂಪಗಳೆಲ್ಲ ಕಾಣುತ್ತವೆ. ಮಾನವರು, ದಾನವರು, ದೇವತೆಗಳು, ಗಂಧರ್ವರು, ವಿದ್ಯಾಧರರು, ಪ್ರಾಣಿಗಳು, ಪಶುಗಳು, ಪಕ್ಷಿಗಳು, ಪ್ರಕೃತಿ ಎಲ್ಲರೂ ಈ ಮಹಾಕಥೆಯ ಪಾತ್ರಗಡಣದಲ್ಲಿ ಸೇರಿದ್ದಾರೆ. ವಿಶ್ವಜೀವನದಲ್ಲಿ ಪ್ರತಿಯೊಬ್ಬರದೂ ಒಂದು ಹೊಣೆಗಾರಿಕೆಯಿದೆ, ಪ್ರಮುಖ ಪಾತ್ರವಿದೆ. ಎಲ್ಲ ಜೀವಿಗಳಲ್ಲೂ ಒಂದಲ್ಲ ಒಂದು ಸೃಷ್ಟಿಸ್ವಾರಸ್ಯ ಅಡಗಿದೆ. ಜಗತ್ತನ್ನು ಬಂಧಿಸಿರುವುದು ಜೀವವೈವಿಧ್ಯದ ನಡುವಿನ ಸಾಮಂಜಸ್ಯ , ಸಾಮರಸ್ಯ. ಅದಿಲ್ಲದಿದ್ದಲ್ಲಿ ವಿಶ್ವವು ಕುಂಟೋ, ಕುರುಡೋ, ಅಸಂಗತವೋ, ಅಸಂಬದ್ಧವೋ ಆಗುತ್ತದೆ. ಯಾರಿಗೂ ತಾನೇ ಶ್ರೇಷ್ಠನೆಂಬ ಅಹಂಭಾವ ಸಲ್ಲದು. ಎಂಥೆಂಥ ವಿದ್ಯೆ , ವೈಭವ ಪರಾಕ್ರಮ ಸಾಹಸಗಳೆಲ್ಲ ದರ್ಪ, ಅಹಂಕಾರ, ದೌಷ್ಟ್ಯಗಳಿದ್ದಲ್ಲಿ ಹೇಳಹೆಸರಿಲ್ಲದೆ ನಿರ್ನಾಮವಾಗುತ್ತದೆಂಬ ಸತ್ಯವನ್ನು ರಾವಣಾಸುರನ ಪಾತ್ರದ ಮೂಲಕ ಜೀವಂತಸಂದೇಶವಾಗಿಸಿದ್ದಾನೆ ಮಹಾಕವಿ. ಹಾಗೆಯೇ ಸಮತ್ವ , ಸ್ನೇಹ, ವಿನಯ, ಸರಳತೆ, ಸ್ವಾರ್ಥರಾಹಿತ್ಯಗಳು ಎಲ್ಲರನ್ನೂ ಒಂದುಗೂಡಿಸುವ, ನಿಸರ್ಗ ಜೀವನವನ್ನೇ ರಕ್ಷಿಸುವ ತಾರಕಶಕ್ತಿಯೆಂಬುದನ್ನೂ ಶ್ರೀರಾಮನ ಜೀವನ, ಸಾಧನೆಗಳು ಎತ್ತಿತೋರುತ್ತವೆ. ಬೇಡರ ಹೆಂಗಸು ಶಬರಿ, ಬೆಸ್ತರ ರಾಜ ಗುಹ, ಜಟಾಯು, ಸಂಪಾತಿ ಮುಂತಾದ ಪಕ್ಷಿಗಳು, ಹನುಮಂತ, ಸುಗ್ರೀವ ಮೊದಲಾದ XIII ವಾನರವೀರರು, ಜಾಂಬವಂತ, ವಿಭೀಷಣನಂಥ ರಾಕ್ಷಸಕುಲಸಂಜಾತರು - ಇವರೆಲ್ಲರ ಬಾಳಿಗೆ ಒದಗಿದ ರಾಮಚಂದ್ರನ ಸ್ನೇಹಸ್ಪರ್ಶ ಅವರಿಗೆ ಯಾವ ಕೃತಕೃತ್ಯತೆ ನೀಡಿತು ಎಂಬುದೇ ರಾಮಾಯಣಕಥೆಯ ಸಾರಭಾಗ. ಮನುಷ್ಯನಿಗೆ ತಾನು ಅತಿಬುದ್ಧಿವಂತನೆಂಬ ಹೆಮ್ಮೆ ಇರುವುದಾದರೆ ಅದೂ ಪೊಳ್ಳು ಎಂಬುದನ್ನು ಪವನಾತ್ಮಜನ ಪಾತ್ರದ ಮೂಲಕ ಎತ್ತಿಹಿಡಿಯಲಾಗಿದೆ. 'ಬುದ್ಧಿಮತಾಂ ವರಿಷ್ಠ'ನೆಂಬ ಹೆಗ್ಗಳಿಕೆ ಸಲ್ಲುವುದು ಕಪಿವೀರನಾದ ಮಾರುತಿಗೆ. ಬಾಹ್ಯಸೌಂದರ್ಯ ಎಷ್ಟೇ ಆಕರ್ಷಕವಾದರೂ ಆದರಣೆ ಸಲ್ಲಬೇಕಾದ್ದು ಆಂತರಿಕ ಸತ್ತ್ವಕ್ಕೆ ಎಂಬ ಸತ್ಯ ರಾಮಾಯಣ ಎತ್ತಿಹಿಡಿದಿರುವ ಮಹಾಮೌಲ್ಯಗಳಲ್ಲಿ ಒಂದು. ಮನುಷ್ಯನನ್ನು ಎತ್ತರಕ್ಕೇರಿಸುವ ಒಂದು ಅಂಶವಿದ್ದರೆ ಅದು 'ಧರ್ಮ''. ಧರ್ಮದ ವ್ಯಾ ಖ್ಯೆ ವಿಪುಲವಾಗಿದೆ. ಅನೇಕ ಮಗ್ಗಲುಳ್ಳ ಸಂಕೀರ್ಣತತ್ತ್ವ ಧರ್ಮ. ಆದರೂ ಅದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಕಷ್ಟವಲ್ಲ. ಸ್ವಾರ್ಥಿಯಲ್ಲದ, ವಿಶಾಲದೃಷ್ಟಿಯಿರುವ ಮಾನವ ಎಲ್ಲವನ್ನೂ ನೇರವಾಗಿ ನಿಚ್ಚಳವಾಗಿ ಕಂಡು ನಿಸರ್ಗದ ಸಹಜತೆಯಲ್ಲಿ ಒಂದಾಗಿ ಮಾನವ ಧರ್ಮವನ್ನು ಮೆರೆಯಬಲ್ಲನೆಂಬುದಕ್ಕೆ , ಒಂದು ಪ್ರಸಂಗವನ್ನಿಲ್ಲಿ ಉದಾಹರಿಸಬಹುದು. ಮಾರೀಚವಧೆ ಮಾಡಿ ಶ್ರೀರಾಮನು ಪರ್ಣಕುಟಿಯೆಡೆಗೆ ಬಂದಾಗ ಸೀತೆ ಕಾಣೆಯಾಗಿದ್ದಾಳೆ. ಕಾದಾಟ, ಬಡಿದಾಟದ ಕುರುಹುಗಳು ಕಾಣುತ್ತಲಿವೆ. ಸೀತೆ ರಾಕ್ಷಸರ ಬಾಯಿಗೆ ತುತ್ತಾಗಿರಬಹುದೆಂಬ ಪ್ರಬಲ ಸಂದೇಹ ರಾಮನಿಗೆ. ದುಃಖ ಒತ್ತಿ ಬರುತ್ತಿದೆ. ಅಲ್ಲಿ ಏನು ನಡೆದಿದೆ ಎಂಬುದನ್ನು ಹೇಳಲು ಯಾರೂ ಇಲ್ಲ. ಪ್ರಾಣಿಗಳು ತನಗೆ ಏನೋ ಸಂಕೇತ ನೀಡುತ್ತಿವೆ ಎಂಬುದನ್ನು ಆತ ಗಮನಿಸುತ್ತಾನೆ. 'ಸೀತೆಯೆಲ್ಲಿ'' ಎಂದು ಅವುಗಳನ್ನು ಕೇಳಿದಾಗ ಅವು ದಕ್ಷಿಣದಿಕ್ಕಿಗೆ ಮುಖಮಾಡಿ ಆಕಾಶಮಾರ್ಗವನ್ನು ತೋರುತ್ತಿವೆಯಂತೆ. एते महामृगा वीर मामीक्षन्ते पुनःपुनः । वक्तु कामा इह हि मे इङ्गितान्युपलक्षये ॥ XIV क्व सीतेति निरीक्षन् वै बाष्पसंरुद्धया गिरा । एवमुक्ता नरेन्द्रेण ते मृगा सहसोत्थिताः ॥ दक्षिणाभिमुखा सर्वे दर्शयन्तो नभःस्थलम् । मैथिली ं ह्रियमाणा सा दिशं यामभ्यपद्यत ॥ अरण्य 64.15.19 ಪ್ರಾಣಿಗಳು ತೋರಿದ ದಕ್ಷಿಣ ದಿಕ್ಕಿನೆಡೆ ಮುಂದುವರಿದಾಗಲೇ ಶ್ರೀರಾಮನಿಗೆ ಜಟಾಯು ಕಂಡಿದ್ದು. ರಾವಣನೊಡನೆ ಕಾದಾಡಿ ಕುಸಿದು ಮೃತ್ಯುಮುಖನಾದ ಆ ವೀರಪಕ್ಷಿ ರಾಮನಿಗೆ ಸೀತೆಯನ್ನು ರಾವಣ ಕೊಂಡೊಯ್ದ ವಾರ್ತೆಯನ್ನೂ, ಮಾರ್ಗವನ್ನು ತೋರುತ್ತದೆ. ಭರತಖಂಡದಲ್ಲಿ ಸಾಹಿತ್ಯ , ಸಂಸ್ಕೃತಿಯ ಅಡಿಗಲ್ಲು ರಾಮಾಯಣ, ಮಹಾಭಾರತಗಳು ಭರತಖಂಡದ ಸಾಹಿತ್ಯವನ್ನು ಪೋಷಿಸಿವೆ. ಸಂಸ್ಕೃತವೂ ಸೇರಿದಂತೆ ಭಾರತೀಯ ಸಾಹಿತ್ಯಸೌಧಕ್ಕೆ ಇರುವ ಮೂರು ಆಧಾರಸ್ತಂಭಗಳೆಂದರೆ ರಾಮಾಯಣ, ಮಹಾಭಾರತ ಮತ್ತು ಬೃಹತ್ ಕಥೆ. ಮಹಾಭಾರತವನ್ನು ‘‘ಸರ್ವೇಷಾಂ ಕವಿಮುಖ್ಯಾನಾಮ್ ಉಪಜೀವೋ ಭವಿಷ್ಯತಿ'' ಎಂದು ಹೇಳಿದಂತೆ ರಾಮಾಯಣವೂ ‘‘ಪರಂ ಕವೀನಾಮಾಧಾರಮ್'' ( ಬಾಲ, 4.20) ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ. ಈ ಕೃತಿಗಳ ನಾನಾರೂಪಗಳು, ಸಂಗ್ರಹಗಳು, ಅದನ್ನಾಧರಿಸಿದ ವಿವಿಧ ಕಾವ್ಯಪ್ರಕಾರಗಳು, ವಿವಿಧ ಭಾಷೆಗಳಲ್ಲಿವೆ. ರಾಮಾಯಣ ಕಥೆಯ ಸಣ್ಣಪ್ರಸಂಗಗಳನ್ನಾಧರಿಸಿದ ರೂಪಕಗಳು, ಗೀತಕಾವ್ಯಗಳು, ಅಸಂಖ್ಯವಾಗಿವೆ. ರಾಮಾಯಣ ಕೇವಲ ಭರತಖಂಡದ ಮಹಾಕಾವ್ಯವಷ್ಟೆ ಅಲ್ಲ ; ಅದರ ಯಶಸ್ಸು ವಿಶಾಲವಾದದ್ದು. ಉಪಖಂಡದ ಬಳಿಯ ಅನೇಕ ದ್ವೀಪಗಳಲ್ಲಿ ದೇಶಗಳಲ್ಲಿ ರಾಮಾಯಣ ರಾಷ್ಟ್ರಕಾವ್ಯವಾಗಿ ಇಂದಿಗೂ ಮಾನ್ಯವಾಗಿದೆ. ಇಂಡೋನೇಷಿಯಾ, ಸಿಲೋನ್ ಮುಂತಾದ ದೇಶಗಳಲ್ಲಿ ರಾಮಾಯಣಾಧಾರಿತ ನೃತ್ಯ ರೂಪಕಗಳು ಆ ದೇಶಗಳ ಸಾಂಸ್ಕೃತಿಕ ಸ್ವರೂಪಗಳ, ಉಜ್ವಲವರ್ಣದ ವೇಷ, ಭಾಷೆ, ಆಯಾ ದೇಶದ ಭವ್ಯ ಕಲಾಪರಂಪರೆಯನ್ನು ಪ್ರತಿಫಲಿಸುತ್ತಿವೆ. ಭಾರತದೇಶದಲ್ಲಿ ಜನಜೀವನ, ಸಂಸ್ಕೃತಿ, ಆಚಾರ-ವಿಚಾರಗಳಲ್ಲೂ XV ರಾಮಾಯಣದ ಪಾತ್ರಗಳ ಮೌಲ್ಯಗಳ ಒತ್ತು ಗಾಢವಾಗಿದೆ. ರಾಮಾಯಣ ಕಾವ್ಯ , ಚಿತ್ರ, ಶಿಲ್ಪ , ಸಂಗೀತ, ನೃತ್ಯ , ವಾಸ್ತುಶಿಲ್ಪ , ನಾಟಕಪ್ರಕಾರಗಳು, ರಂಗಭೂಮಿ ಮುಂತಾದ ಎಲ್ಲ ಜಾನಪದ, ಮಾರ್ಗ ಕಲಾಪ್ರಕಾರಗಳ ಮೇಲೂ ಅಗಾಧವಾದ ಅಚ್ಚಳಿಯದ ಪ್ರಭಾವವನ್ನು ಉಂಟುಮಾಡಿದೆ. ಈ ನೈಜಾಂಶವನ್ನು ಪಾಶ್ಚಾತ್ಯರೂ ಕೂಡ ಗಮನಿಸಿರುವುದನ್ನು ಕಾಣಬಹುದು. In India, the Rāmāyaṇa and Mahābhārata, Rāma and Sītā, Hanuman and Rāvana, Visņu and the Garuda, Krsna and Rādha, the Kauravas and the Pāndavas, are everywhere, in sculptured stone about the temples, and on the carved woodwork of houses ; on the graven brass and copper of domestic utensils ; or painted in fresco on walls, Rāma, like Vişnu, dressed in yellow, the color of joy, Lakṣmaṇa in purple, Bharata in green, and Satrughna in red.... They are the charm which has stayed the course of time in India. (quoted in 'A History of Indian Lit- erature,' p.251, Herbert H. Gowen, D.D. from Sir George Bird- wood's Industrial Arts of India) ಬಾಲಕಾಂಡ: ಬಾಲಕಾಂಡವು ಹೆಸರಿಗೆ ತಕ್ಕಂತೆ ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಜನನವನ್ನು, ಬಾಲ್ಯವನ್ನು, ದಶರಥಮಹಾರಾಜನ ಸುಖಸಂಸಾರದ ಚಿತ್ರವನ್ನು ನೀಡುತ್ತದೆ. ವಿಶ್ವಾಮಿತ್ರರಂಥ ರಾಜರ್ಷಿ ಬ್ರಹ್ಮರ್ಷಿಗಳ ಮಾರ್ಗದರ್ಶನದಲ್ಲಿ ಲಕ್ಷ್ಮಣಸಮೇತನಾಗಿ ಶ್ರೀರಾಮ ಅಮೋಘವಾದ ಅಸ್ತ್ರ ಶಸ್ತ್ರ ವಿದ್ಯೆಗಳನ್ನು ಕಲಿಯುತ್ತಾನೆ. ಅರಣ್ಯಪ್ರದೇಶಗಳ, ತಪೋವನಗಳ, ನದಿಗಳ, ಪರ್ವತಗಳ ಸಾನ್ನಿಧ್ಯದಲ್ಲಿ ಶ್ರೀರಾಮಚಂದ್ರನ ವಿಶ್ವದೃಷ್ಟಿ ಅರಳುತ್ತದೆ. ಲೋಕಾನುಭವ ಊರ್ಜಿತವಾಗುತ್ತದೆ. ಒಳಿತು ಕೆಡುಕುಗಳನ್ನೊಳಗೊಂಡ ಜೀವಜಗತ್ತಿನ ವಿವಿಧ ಮುಖಗಳ ಪರಿಚಯವೂ ಆಗುತ್ತದೆ. ಆತ ಬ್ರಹ್ಮಚರ್ಯದಿಂದ ಮುಂದೆ ಸಾಗಿ, ಜನಕಪುತ್ರಿಯ ಕೈಹಿಡಿದು ಗೃಹಸ್ಥಾಶ್ರಮಕ್ಕೆ ಕಾಲಿಡುವ ಮಧುರ ಮಂಗಳ ಮಹೋತ್ಸವದೊಂದಿಗೆ ಬಾಲಕಾಂಡ ಕೊನೆಗಾಣುತ್ತದೆ. Introduction The Ramayana is one of the most revered literary works in Indian culture and heritage, as it is a source of inspiration, strength, and belief to millions of people in India and abroad. This great epic along with the Mahābhārata has enriched the culture of India, moulded her national character, shaped her value system, and supported her rich literary tradition. There- fore the two magnificent masterpieces naturally occupy a place of pre-eminence in the fields of both literature and cul- ture. They are held in high respect as National epics in India. The national epics are creations of the revered sages Valmi- ki and Vedavyasa. This distinction has conferred on them the title Ārșa kävyas, meaning rshipranita. The hoary tradition in India has always regarded the Rāmāyaṇa as the adikävya and Vālmīki as the adikavi, which means that he is the first and the foremost poet. Bhojadeva, author of the graceful work Champürāmāyaṇa makes it clear when he pays his tributes to the great sage thus : मधुमयभणितीनां मार्गदर्शी महर्षिः Valmiki is not only considered as the father of Indian poetic tradition but is looked up to as a model, a pathfinder by the poets who followed him. In the Vedic literature is found the origin and growth of In- dian literary, philosophical, spiritual traditions. It must be ac- cepted that the Vedic phase documents the inspiring genius XVII of the Vedic people in its naturally beautiful and powerful ex- pressions. The language was already enriched by the Vedic seers and a kind of poetic fabric was also available in the Ve- das. The Vedic literature in the Sanskrit language perhaps sets itself on equal footing with the Janapada or folk literature of other languages. It is folk literature that provides the rich and resourceful backdrop for the development of classical litera- ture. Sage Valmiki- made use of the Vedic meters anuştubh, tris- tubh, etc., along with the ballads in vouge to fashion a perfect kävya, of his own. Valmiki's polished diction, poetic fervor, and mellifluous music of the flow of language made an instant ap- peal to the critics. He is fondly referred to as the cuckoo that sings the sweet song of Rama perched on the branch of po- etry. कूजन्तं रामरामेति मधुरं मधुराक्षरम् । आरुह्य कविताशाखां वन्दे वाल्मीकिकोकिलम् ।। Rāmāyaṇa is the Adikävya, first and foremost epic. The story of Räma is very old. It is told in the Vana Parva of the Ma- habharata, to boost the drooping spirits of Yudhistira. Rāmāyaṇa tells the story of the valiant prince of the solar dy- nasty, Sri Rama, son of Dasaratha, thus his virtuous wife Sita's sufferings, selfless service of Lakshmana, nobility of Bharata, undaunted courage and devotion to duty of Hanuman, power, and prosperity of Rävana, the pratinayaka. The creator God Brahma himself pronounced immortality on the poetic cre- ation of Valmiki. XVIII यावत् स्थास्यन्ति गिरयः सरितश्च महीतले । तावत् रामायणकथा लोकेषु प्रचरिष्यति ।। The immortal character of the great poem should be cred- ited to the ennobling and uplifting qualities, to which the hu- man aspiration is bound forever. The spirit of sacrifice man is capable of, his ability to uphold moral and ethical standards even at times of deep crises, his capacity to maintain strong filial bonds, his struggle to retain the integrity of character both at the individual and public lev- els, in short, the victory of virtue over the powerful evil, show- cased as the great and grand story of the Ramayana has sent a ray of hope to mankind. It is rejuve- nating the faith in the ultimate goodness of man today, as it did in the Pandava hero, Yudhistira then. The eternal val- ues embedded in the epic in a graceful poetic garb makes it the most enjoyable poem, over which the fleeting time has but little effect. Ramayana's popularity has remained unfaded through the long lanes of centuries that have rolled since its composition. वाल्मीकिगिरिसम्भूता रामसागरगामिनी । पुनातु भुवनं पुण्या रामायणमहानदी ।। It is not at all surprizing that the Rāmāyaṇa has left an indel- ible mark on the multifaceted cultural expression of the sub- continent. Music, dance, art and architecture, social practices, and literary output innumerable art forms both folk and clas- sical are imbued with the spirit of the Rāmāyaṇa. XIX Sage Valmiki : Valmiki is the son of sage प्रचेतस्. He is referred to as प्राचेतस्. He lived in an ascetic grove on the banks of the river तमसा. He was a compassionate man of profound insight. ympathy All the poets who succeded Vālmīki speak highly of him as the first poet who paved the way for kavya tradition in the classical age. Bhojadeva, the celebrated author of the Champū Ramayana, says: प्राचेतसः प्रवचसां प्रथमः कवीनाम् Great poets and dramatists like Kälidāsa, Bhavabhūti, Ding- naga give intimate pictures of sage Valmiki's personality. He is supposed to have given shelter to queen Sita, after she was abandoned in the forest, due to the scandal that spread in Ayodhya. He is also credited with the important task of initiat- ing and training her twin sons Lava and Kuşa into the tradition of singing his enchanting poem Rāmāyaṇa. Kalidasa speaks in high adoration of the magnanimous heart and kārunya of Valmiki. thus तामभ्यगच्छत् रुदितानुसारी श्लोकत्वमापद्यत यस्य शोकः ।। (Raghuvamsa - 14th Canto) The main sentiment of the epic Rāmāyaṇa according to the well-known critic Anandavardhana is Karuna. Many stories are in vogue about sage Välmiki's early life. According to one version, he was an ordinary hunter who in- XX dulged in sinful acts of fleecing the travelers of their valuables and killing them. A sage who was a victim of this hunter once converted him into a pious man and made him do tapas. Later the hunter became a poet due to the hang, metamorphosis that took place in his outlook and personality. However, it appears that the eminent poets who followed Valmiki do not subscribe to these accounts. None of them have made even a passing remark about them. Maybe these accounts originated later and therefore lack in authenticity and in veracity. Age of the Rāmāyaṇa: As per the Indian tradition, Râmāyaṇa belongs to the treta- yuga. Treta is the second time scale in the four-fold time con- cept viz., Krta, treta, dväpara, and Kali. Now we are in the Kali age which is in progress. If we take into account the remaining portion of the treta after Rāmāvatāra, the time span of dväpara and the number of years that have rolled in the Kaliyuga, the age of the Rāmāyaṇa would be about 8, 99, 100 years. But the western scholars who have toiled a great deal to fix the historical dates of the Indian literary works and their Indian counterparts do not concede such antiquity to the Rāmāyaṇa. Aryabhata, an ancient Indian mathematician in his mathe- matical work Aryabhatiyam has mentioned the beginning of the Kali age, which is about 3000 B.C. Based on the evidence of Aryabhata it is about 5100 years since Kali began. XXI In the Vanaparvan of the Mahabharata, sage Markandeya relates the story of Rama and Sita to Yudhistira. This. supports the tradition that Rāmavatāra took place before Kṛṣṇāvatära. Even a rough estimate based on genuine indigenous evidence, the Rāmāyaṇa needs to be placed before 5000 years. However, even the Vedas, considered as revelations are placed about 1300 B.C. by the scholars of the previous century. But it should also be admitted that the final word about the dates of many other ancient works is yet to be pronounced. Discoveries made using modern technological help are shed- ding new light in this direction. Recent archaeological findings beneath the sea in Camby and the satellite photographs taken by NASA are pointing towards the presence of a very ancient stone bridge built underneath the sea. It is also conjectured that it might be the same 'setu' built by Rama with the help of the Vanara heroes to cross the ocean and reach the city of Lanka on the other shore of the sea. The probable date suggested for this bridge is about 17 lakh years. In light of these findings, it is clear that judgments cannot be pronounced on the correct date of the Rāmāyaṇa right now. Meaning and message of the Rāmāyaṇa. It may also be noted that the Rāmāyaṇa, tells the story of the integral life of the universe. It binds into one fold several planes of existence that look so different in nature. There are gods, demons, men, vanaras, birds, rākshasas, and many oth- ers. But life in the universe is a cooperative effort. Peaceful XXII co-existence amongst several life forms is possible if all the involved elements are responsible, controlled, dutiful, and re- spect the dignity and right to life of the others. One attacking the other does impair the delicate balance that is maintained by Nature. The story of the Rāmāyaṇa, with Śri Rāma as the central character, sends this message in clear terms. Rāma's vision, depth of understanding, self-control, a deep sense of duty coupled with immense physical might capable enough to punish the guilty, acts as a cohesive force amongst different levels of existence. All forms of life are equally dignified sug- gests the Rāmāyana. A man endowed with intelligence has a higher duty of maintaining harmony in nature. Species other than human beings are also capable of a virtuous, and ethical life. Birds and beasts are also moved by an innate good sense. They can also see the difference between what is good and what is evil. Don't we have the inspiring example of Jatäyu, the great vulture fighting the invincible Rāvaṇa at the time of Sita's abduction? Unmindful of his old age and limited capacity he jumps to resist Rāvana and lays his life at the altar of a noble cause. Śrī Rāma also reciprocates this selfless act of the bird by according paternal respect to him. The death of the bird was mourned and funeral rites as per the Vedic injunctions were performed by Rāma as in the case of his own father. S. R. Leela श्रीवाल्मीिकमहर्षिविरिचते श्रीमद्‌रामायणे बालकाण्डे प्रथमः सर्गः तपःस्वाध्यायनिरतं तपस्वी वाग्विदां वरम् । नारदं परिपप्रच्छ वाल्मीकिर्मुनिपुङ्गवम् ॥1-1-1 ॥ को न्वस्मिन् साम्प्रतं लोके गुणवान् कश्च वीर्यवान् । धर्मज्ञश्च कृतज्ञश्च सत्यवाक्यो दृढव्रतः ॥ 1-1-2 ॥ चारित्र्येण च को युक्तः सर्वभूतेषु को हितः । विद्वान् कः कः समर्थश्च कश्चैकप्रियदर्शनः ॥ 1-1-3 ॥ आत्मवान् को जितक्रोधो द्युतिमान् कोऽनसूयकः । कस्य बिभ्यति देवाश्च जातरोषस्य संयुगे ॥ 1-1-4 ॥ एतदिच्छाम्यहं श्रोतुं परं कौतूहलं हि मे । महर्षे त्वं समर्थोऽसि ज्ञातुमेवंविधं नरम् ॥ 1-1-5 ॥ श्रुत्वा चैतत्त्रिलोकज्ञो वाल्मीकेर्नारदो वचः । श्रूयतामिति चामन्त्र्य प्रहृष्टो वाक्यमब्रवीत् ॥ 1-1-6 ॥ बहवो दुर्लभाश्चैव ये त्वया कीर्तिता गुणाः । मुने वक्ष्याम्यहं बुद्ध्वा तैर्युक्तः श्रूयतां नरः ॥ 1-1-7 ॥ इक्ष्वाकुवंशप्रभवो रामो नाम जनैः श्रुतः । नियतात्मा महावीर्यो द्युतिमान् धृतिमान् वशी ॥ 1-1-8 ॥ 2 बुद्धिमान् नीतिमान् वाग्मी श्रीमाञ्छत्रुनिबर्हणः । विपुलांसो महाबाहुः कम्बुग्रीवो महाहनुः ॥ 1-1-9 ॥ महोरस्को महेष्वासो गूढजत्रुररिन्दमः । आजानुबाहुः सुशिराः सुललाटः सुविक्रमः ॥ 1-1-10 ॥ समः समविभक्ताङ्गः स्निग्धवर्णः प्रतापवान् । पीनवक्षा विशालाक्षो लक्ष्मीवाञ्छुभलक्षणः ॥ 1-1-11 ॥ धर्मज्ञः सत्यसन्धश्च प्रजानां च हिते रतः । यशस्वी ज्ञानसम्पन्नः शुचिर्वश्यः समाधिमान् ॥ 1-1-12 ॥ प्रजापतिसमः श्रीमान् धाता रिपुनिषूदनः । रक्षिता जीवलोकस्य धर्मस्य परिरक्षिता॥ 1-1-13 ॥ रक्षिता स्वस्य धर्मस्य स्वजनस्य च रक्षिता । वेदवेदाङ्गतत्त्वज्ञो धनुर्वेदे च निष्ठितः ॥ 1-1-14 ॥ सर्वशास्त्रार्थतत्त्वज्ञो स्मृतिमान् प्रतिभानवान् । सर्वलोकप्रियः साधुरदीनात्मा विचक्षणः ॥ 1-1-15 ॥ सर्वदाभिगतः सद्भिः समुद्र इव सिन्धुभिः । आर्यः सर्वसमश्चैव सदैव प्रियदर्शनः ॥ 1-1-16 ॥ स च सर्वगुणोपेतः कौसल्यानन्दवर्धनः । समुद्र इव गाम्भीर्ये धैर्येण हिमवानिव ॥ 1-1-17 ॥ विष्णुना सदृशो वीर्ये सोमवत्प्रियदर्शनः । कालाग्निसदृशः क्रोधे क्षमया पृथिवीसमः । धनदेन समस्त्यागे सत्ये धर्म इवापरः ॥ 1-1-18 ॥ 3 तमेवंगुणसम्पन्नं रामं सत्यपराक्रमम् । ज्येष्ठं ज्येष्ठगुणैर्युक्तं प्रियं दशरथस्सुतम् ॥ 1-1-19 ॥ प्रकृतीनां हितैर्युक्तं प्रकृतिप्रियकाम्यया । यौवराज्येन संयोक्तुम् ऐच्छत्प्रीत्या महीपतिः ॥ 1-1-20 ॥ तस्याभिषेकसम्भारान् दृष्ट्वा भार्याथ कैकयी । पूर्वं दत्तवरा देवी वरमेनमयाचत । विवासनञ्च रामस्य भरतस्याभिषेचनम् ॥ 1-1-21 ॥ स सत्यवचनाद्राजा धर्मपाशेन संयतः । विवासयामास सुतं रामं दशरथः प्रियम् ॥ 1-1-22 ॥ स जगाम वनं वीरः प्रतिज्ञामनुपालयन् । पितुर्वचननिर्देशात् कैकेय्याः प्रियकारणात् ॥ 1-1-23 ॥ तं व्रजन्तं प्रियो भ्राता लक्ष्मणोऽनुजगाम ह । स्नेहाद् विनयसम्पन्नः सुमित्रानन्दवर्धनः । भ्रातरं दयितो भ्रातुः सौभ्रात्रमनुदर्शयन् ॥ 1-1-24 ॥ रामस्य दयिता भार्या नित्यं प्राणसमा हिता । जनकस्य कुले जाता देवमायेव निर्मिता ॥ 1-1-25 ॥ सर्वलक्षणसम्पन्ना नारीणामुत्तमा वधूः । सीताप्यनुगता रामं शशिनं रोहिणी यथा ॥ 1-1-26 ॥ पौरैरनुगतो दूरं पित्रा दशरथेन च । शृङ्गिबेरपुरे सूतं गङ्गाकूले व्यसर्जयत् ॥ 1-1-27 ॥ 4 गुहमासाद्य धर्मात्मा निषादाधिपतिं प्रियम् । गुहेन सहितो रामो लक्ष्मणेन च सीतया ॥ 1-1-28 ॥ ते वनेन वनं गत्वा नदीस्तीर्त्वा बहूदकाः । चित्रकूटमनुप्राप्य भरद्वाजस्य शासनात् ॥ 1-1-29 ॥ रम्यमावसथं कृत्वा रममाणा वने त्रयः । देवगन्धर्वसंकाशाः तत्र ते न्यवसन् सुखम् ॥ 1-1-30 ॥ चित्रकूटङ्गते रामे पुत्रशोकातुरस्तथा । राजा दशरथस्स्वर्गं जगाम विलपन् सुतम् ॥ 1-1-31 ॥ गते तु तस्मिन् भरतो वसिष्ठप्रमुखैर्द्विजैः । नियुज्यमानो राज्याय नैच्छत् राज्यं महाबलः ॥ 1-1-32 ॥ स जगाम वनं वीरो रामपादप्रसादकः ॥ 1-1-33 ॥ गत्वा तु स महात्मानं रामं सत्यपराक्रमम् । अयाचद्भ्रातरं रामम् आर्यभावपुरस्कृतः । त्वमेव राजा धर्मज्ञ इति रामं वचोऽब्रवीत् ॥ 1-1-34 ॥ रामोऽपि परमोदारः सुमुखस्सुमहायशाः । न चैच्छत् पितुरादेशात् राज्यं रामो महाबलः ॥ 1-1-35 ॥ पादुके चास्य राज्याय न्यासं दत्त्वा पुनः पुनः । निवर्तयामास ततो भरतं भरताग्रजः ॥ 1-1-36 ॥ स काममनवाप्यैव रामपादावुपस्पृशन् । नन्दिग्रामेऽकरोद् राज्यं रामागमनकाङ्क्षया ॥ 1-1-37 ॥ 5 गते तु भरते श्रीमान् सत्यसन्धो जितेन्द्रियः । रामस्तु पुनरालक्ष्य नागरस्य जनस्य च । तत्रागमनमेकाग्रो दण्डकान् प्रविवेश ह ॥ 1-1-38 ॥ प्रविश्य तु महारण्यं रामो राजीवलोचनः । विराधं राक्षसं हत्वा शरभङ्गं ददर्श ह । सुतीक्ष्णं चाप्यगस्त्यं च अगस्त्यभ्रातरं तथा ॥ 1-1-39 ॥ अगस्त्यवचनाच्चैव जग्राहैन्द्रं शरासनम् । खड्गञ्च परमप्रीतस्तूणी चाक्षयसायकौ ॥ 1-1-40 ॥ वसतस्तस्य रामस्य वने वनचरैः सह । ऋषयोऽभ्यागमन् सर्वे वधायासुर-रक्षसाम् ॥ 1-1-41 ॥ स तेषां प्रतिशुश्राव राक्षसानां तदा वने । प्रतिज्ञातश्च रामेण वधः संयति रक्षसाम् । ऋषीणामग्निकल्पानां दण्डकारण्यवासीनाम् ॥ 1-1-42 ॥ तेन तत्रैव वसता जनस्थाननिवासिनी । विरूपिता शूर्पणखा राक्षसी कामरूपिणी ॥ 1-1-43 ॥ ततः शूर्पणखावाक्यादुद्युक्तान् सर्वराक्षसान् । खरं त्रिशिरसं चैव दूषणं चैव राक्षसम् । निजघान रणे रामस्तेषां चैव पदानुगान् ॥ 1-1-44 ॥ वने तस्मिन् निवसता जनस्थाननिवासिनाम् । रक्षसां निहतान्यासन् सहस्राणि चतुर्दश ॥ 1-1-45 ॥ ततो ज्ञातिवधं श्रुत्वा रावणः क्रोधमूर्छितः । सहायं वरयामास मारीचं नाम राक्षसम् ॥ 1-1-46 ॥ 6 वार्यमाणः सुबहुशो मारीचेन स रावणः । न विरोधो बलवता क्षमो रावण तेन ते ॥ 1-1-47 ॥ अनादृत्य तु तद्वाक्यं रावणः कालचोदितः । जगाम सहमारीचस्तस्याश्रमपदं तदा ॥ 1-1-48 ॥ तेन मायाविना दूरमपवाह्य नृपात्मजौ । जहार भार्यां रामस्य गृध्रं हत्वा जटायुषम् ॥ 1-1-49 ॥ गृध्रञ्च निहतं दृष्ट्वा हृतां श्रुत्वा च मैथिलीम् । राघवः शोकसंतप्तो विललापाकुलेन्द्रियः ॥ 1-1-50 ॥ ततस्तेनैव शोकेन गृध्रं दग्ध्वा जटायुषम् । मार्गमाणो वने सीतां राक्षसं सन्ददर्श ह । कबन्धं नाम रूपेण विकृतं घोरदर्शनम् ॥ 1-1-51 ॥ तन्निहत्य महाबाहुर्ददाह स्वर्गतश्च सः । स चास्य कथयामास शबरीं धर्मचारिणीम् । श्रमणां धर्मनिपुणामभिगच्छेति राघव ॥ 1-1-52 ॥ सोऽभ्यगच्छन्महातेजाः शबरीं शत्रुसूदनः । शबर्या पूजितः सम्यग् रामो दशरथात्मजः ॥ 1-1-53 ॥ पम्पातीरे हनुमता सङ्गतो वानरेण ह । हनुमद्वचनाच्चैव सुग्रीवेण समागतः ॥ 1-1-54 ॥ सुग्रीवाय च तत्सर्वं शंसद्रामो महाबलः । आदितस्तद् यथावृत्तं सीतायाश्च विशेषतः ॥ 1-1-55 ॥ 7 सुग्रीवश्चापि तत्सर्वं श्रुत्वा रामस्य वानरः । चकार सख्यं रामेण प्रीतश्चैवाग्निसाक्षिकम् ॥ 1-1-56 ॥ ततो वानरराजेन वैरानुकथनं प्रति । रामायावेदितं सर्वं प्रणयात् दुःखितेन च ॥ 1-1-57 ॥ प्रतिज्ञातञ्च रामेण तदा वालिवधं प्रति । वालिनश्च बलं तत्र कथयामास वानरः ॥ 1-1-58 ॥ सुग्रीवः शङ्कितश्चासीन्नित्यं वीर्येण राघवे । राघवप्रत्ययार्थं तु दुन्दुभेः कायमुत्तमम् । दर्शयामास सुग्रीवः महापर्वतसन्निभम् ॥ 1-1-59 ॥ उत्स्मयित्वा महाबाहुः प्रेक्ष्य चास्थि महाबलः । पादाङ्गुष्ठेन चिक्षेप संपूर्णं दशयोजनम् ॥ 1-1-60 ॥ बिभेद च पुनस्सालान् सप्तैकेन महेषुणा । गिरिं रसातलञ्चैव जनयन् प्रत्ययं तथा ॥ 1-1-61 ॥ ततः प्रीतमनास्तेन विश्वस्तस्स महाकपिः । किष्किन्धां रामसहितो जगाम च गुहां तदा ॥ 1-1-62 ॥ ततोऽगर्जद्धरिवरः सुग्रीवो हेमपिङ्गलः । तेन नादेन महता निर्जगाम हरीश्वरः ॥ 1-1-63 ॥ अनुमान्य तदा तारां सुग्रीवेण समागतः । निजघान च तत्रैनं शरेणैकेन राघवः ॥ 1-1-64 ॥ ततः सुग्रीववचनात् हत्वा वालिनमाहवे । सुग्रीवमेव तद्राज्ये राघवः प्रत्यपादयत् ॥ 1-1-65 ॥ 8 स च सर्वान् समानीय वानरान् वानरर्षभः । दिशः प्रस्थापयामास दिदृक्षुर्जनकात्मजाम् ॥ 1-1-66 ॥ ततो गृध्रस्य वचनात् संपातेर्हनुमान् बली । शतयोजनविस्तीर्णं पुप्लुवे लवणार्णवम् ॥ 1-1-67 ॥ तत्र लङ्कां समासाद्य पुरीं रावणपालिताम् । ददर्श सीतां ध्यायन्तीम् अशोकवनिकां गताम् ॥ 1-1-68 ॥ निवेदयित्वाभिज्ञानं प्रवृत्तिं विनिवेद्य च । समाश्वास्य च वैदेहीं मर्दयामास तोरणम् ॥ 1-1-69 ॥ पञ्च सेनाग्रगान् हत्वा सप्त मन्त्रिसुतानपि । शूरमक्षं च निष्पिष्य ग्रहणं समुपागमत् ॥ 1-1-70 ॥ अस्त्रेणोन्मुक्तमात्मानं ज्ञात्वा पैतामहाद् वरात् । मर्षयन् राक्षसान् वीरो यन्त्रिणस्तान् यदृच्छया ॥ 1-1-71 ॥ ततो दग्ध्वा पुरीं लङ्काम् ऋते सीताञ्च मैथिलीम् । रामाय प्रियमाख्यातुं पुनरायान्महाकपिः ॥ 1-1-72 ॥ सोऽभिगम्य महात्मानं कृत्वा रामं प्रदक्षिणम् । न्यवेदयदमेयात्मा दृष्टा सीतेति तत्त्वतः ॥ 1-1-73 ॥ ततः सुग्रीवसहितो गत्वा तीरं महोदधेः । समुद्रं क्षोभयामास शरैरादित्यसन्निभैः ॥ 1-1-74 ॥ दर्शयामास चात्मानं समुद्रः सरितां पतिः । समुद्रवचनाच्चैव नलं सेतुमकारयत् ॥ 1-1-75 ॥ 9 तेन गत्वा पुरीं लङ्कां हत्वा रावणमाहवे । रामः सीतामनुप्राप्य परां व्रीडामुपागमत् ॥ 1-1-76 ॥ तामुवाच ततो रामः परुषं जनसंसदि । अमृष्यमाणा सा सीता विवेश ज्वलनं सती ॥ 1-1-77 ॥ ततोऽग्निवचनात् सीतां ज्ञात्वा विगतकल्मषाम् । कर्मणा तेन महता त्रैलोक्यं सचराचरम् ॥ 1-1-78 ॥ सदेवर्षिगणं तुष्टं राघवस्य महात्मनः । बभौ रामः सम्प्रहृष्टः पूजितः सर्वदेवतैः ॥ 1-1-79 ॥ अभ्यषिच्य च लङ्कायां राक्षसेन्द्रं विभीषणम् । कृतकृत्यस्तदा रामो विज्वरः प्रमुमोद ह ॥ 1-1-80 ॥ देवताभ्यो वरं प्राप्य समुत्थाप्य च वानरान् । अयोध्यां प्रस्थितो रामः पुष्पकेण सुहृद्वृतः ॥ 1-1-81 ॥ भरद्वाजाश्रमं गत्वा रामः सत्यपराक्रमः । भरतस्यान्तिके रामो हनूमन्तं व्यसर्जयत् ॥ 1-1-82 ॥ पुनराख्यायिकां जल्पन् सुग्रीवसहितस्तदा । पुष्पकं तत् समारुह्य नन्दिग्रामं ययौ तदा ॥ 1-1-83 ॥ नन्दिग्रामे जटां हित्वा भ्रातृभिः सहितोऽनघः । रामः सीतामनुप्राप्य राज्यं पुनरवाप्तवान् ॥ 1-1-84 ॥ प्रहृष्टमुदितो लोकस्तुष्टः पुष्टः सुधार्मिकः । निरामयो ह्यरोगश्च दुर्भिक्षभयवर्जितः ॥ 1-1-85 ॥ न पुत्रमरणं केचित् द्रक्ष्यन्ति पुरुषाः क्वचित् । 10 नार्यश्चाविधवा नित्यं भविष्यन्ति पतिव्रताः ॥ 1-1-86 ॥ न चाग्निजं भयं किञ्चिन्नाप्सु मज्जन्ति जन्तवः । न वातजं भयं किञ्चित् नापि ज्वरकृतं तथा । न चापि क्षुद्भयं तत्र न तस्करभयं तथा ॥ 1-1-87 ॥ नगराणि च राष्ट्राणि धनधान्ययुतानि च । नित्यं प्रमुदिताः सर्वे यथा कृतयुगे तथा ॥ 1-1-88 ॥ अश्वमेधशतैरिष्ट्वा तथा बहुसुवर्णकैः । गवां कोट्ययुतं दत्त्वा विद्वद्भ्यो विधिपूर्वकम् । असंख्येयं धनं दत्त्वा ब्राह्मणेभ्यो महायशाः ॥ 1-1-89 ॥ राजवंशान् शतगुणान् स्थापयिष्यति राघवः । चातुर्वर्ण्यं च लोकेऽस्मिन् स्वे स्वे धर्मे नियोक्ष्यति ॥ 1-1-90 ॥ दशवर्षसहस्राणि दशवर्षशतानि च । रामो राज्यमुपासित्वा ब्रह्मलोकं प्रयास्यति ॥ 1-1-91 ॥ इदं पवित्रं पापघ्नं पुण्यं वेदैश्च सम्मितम् । यः पठेद् रामचरितं सर्वपापैः प्रमुच्यते ॥ 1-1-92 ॥ एतदाख्यानमायुष्यं पठन् रामायणं नरः । सपुत्रपौत्रः सगणः प्रेत्य स्वर्गे महीयते ॥ 1-1-93 ॥ पठन् द्विजो वागृषभत्वमीयात् स्यात् क्षत्रियो भूमिपतित्वमीयात् । वणिक् जनः पण्यफलत्वमीयात् जनश्च शूद्रोऽपि महत्त्वमीयात् ॥ 1-1-94 ॥ इति वाल्मीकिरामायणे आदिकाव्ये बालकाण्डे प्रथमः सर्गः ॥१-१॥ ಶ್ರೀವಾಲ್ಮೀಕಿರಾಮಾಯಣ-ಬಾಲಕಾಂಡ-ಪ್ರಥಮಸರ್ಗ: ನಾರದಮಹರ್ಷಿಗಳು ಶ್ರೀವಾಲ್ಮೀಕಿ ಮುನಿಗಳ ಆಶ್ರಮಕ್ಕೆ ಭೇಟಿ ನೀಡುತ್ತಾರೆ- ಅಷ್ಟರಲ್ಲಿ , ವಾಲ್ಮೀಕಿಮುನಿಗಳು ಚತುರ್ಮುಖಬ್ರಹ್ಮದೇವರ ಅಪ್ಪಣೆಯಂತೆ ರಾಮಾಯಣವನ್ನು ರಚಿಸಲು ನಿಶ್ಚಯಿಸಿರುತ್ತಾರೆ. ಆಗ ವಾಲ್ಮೀಕಿಗಳು ನಾರದರ ಬಳಿ ಎಲ್ಲ ಸದ್ಗುಣಗಳನ್ನೂ ಹೊಂದಿರುವ ಮರ್ಯಾದಾಪುರುಷೋತ್ತಮನ ಬಗ್ಗೆ ಕುತೂಹಲದಿಂದ ಕೇಳುತ್ತಾರೆ. ಕನ್ನಡಾನುವಾದ ಹಾಗೂ ವಿವರಣೆ ಶ್ಲೋಕ - 1 ಅನುವಾದ:- ತಪಸ್ವಿಯಾದ ವಾಲ್ಮಿಕಿ ಮುನಿಗಳು, ಸದಾ ತಪಸ್ಸು , ವೇದಾಧ್ಯಯನದಲ್ಲಿ ನಿರತರಾದ, ಮಾತುಬಲ್ಲವರಲ್ಲಿ ಶ್ರೇಷ್ಠರಾದ ಮುನಿವರರಾದ ನಾರದರನ್ನು ವಿನಯದಿಂದ ಇಂತೆಂದು ಕೇಳಿದರು- ವಿವರಣೆ:- ವಾಲ್ಮೀಕಿ ರಾಮಾಯಣದ ಮೊದಲ ಪದ್ಯವಿದು. ನಿರಂತರ ಧ್ಯಾನದಿಂದ ವಿಶೇಷಮನೋಬಲ ಸಾಧಿಸಿದ ವಾಲ್ಮೀಕಿ ಮಹರ್ಷಿ ತ್ರಿಲೋಕಸಂಚಾರಿಗಳಾದ ಬ್ರಹ್ಮಮಾನಸಪುತ್ರರಾದ ನಾರದ ಮುನಿಯನ್ನು ಪ್ರಸ್ತುತ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವ್ಯಕ್ತಿ ಯಾರು ಎಂದು ತಿಳಿಯುವ ಬಗೆಯಿಂದ ಇಂತೆಂದು ಕೇಳಿದರು. ಆ ಶ್ರೇಷ್ಠತಮ ವ್ಯಕ್ತಿ ವಿಷ್ಣುವಿನ ಅವತಾರನಾದ ಶ್ರೀರಾಮನೇ ಎಂದು ತಿಳಿದಿದ್ದರೂ ಈ ನಿಜಾಂಶವನ್ನು ಬ್ರಹ್ಮಮಾನಸಪುತ್ರರಾದ ನಾರದ ಶ್ರೀಮುಖದಿಂದ ತಿಳಿದು, ಅವರಿಂದಲೇ ಶತ-ಕೋಟಿಪದ್ಯವಿಸ್ತಾರವುಳ್ಳ ಶ್ರೀರಾಮನ ಚರಿತೆಯನ್ನು ಸಂಗ್ರಹರೂಪದಿಂದ ಕೇಳಿ ನಾರದರ ಆಶೀರ್ವಾದ ಮತ್ತು ವಾಗ್ದೇವತೆ ಸರಸ್ವತಿಯ ಪತಿ ಬ್ರಹ್ಮದೇವರ ಆದೇಶದಂತೆ ನಾರದರಿಂದ ಯಥಾಶ್ರುತವಾದ ರಾಮಚರಿತೆಯನ್ನು ೨೪೦೦೦ ಶ್ಲೋಕಗಳಲ್ಲಿ ಸಂಗ್ರಹಿಸಿ, ಅಗಾಧಸಾಮರ್ಥ್ಯವಿರುವ ತಮ್ಮ ಮನದಲ್ಲಿ ರಚಿಸಿ, ಮುಂದೆ ಶ್ರೀರಾಮನ ಪುತ್ರರಾದ ಕುಶಲವರಿಂದ ಅದನ್ನು ಅಯೋಧ್ಯಾ ರಾಜಧಾನಿಯೆಲ್ಲೆಡೆ ಹಾಡಿಸಿ, ಪ್ರಸ್ತುತ ಪ್ರಪಂಚಕ್ಕೆ ಅನರ್ಘವಾದ ಕೊಡುಗೆಯನ್ನು ನೀಡಿದರು. 12 ಮಹರ್ಷಿ ವಾಲ್ಮೀಕಿ ವಿರಚಿತ ರಾಮಚರಿತೆಯನ್ನು ಗೌರವದಿಂದ ‘ಶ್ರೀಮದ್-ವಾಲ್ಮೀಕಿರಾಮಾಯಣ’ ಎಂದು ಕರೆಯಲಾಗುತ್ತದೆ. ಶ್ಲೋಕ - 2 ಅನುವಾದ:- ಹೇ ನಾರದರೇ! ಪ್ರಸ್ತುತ ಪ್ರಪಂಚದಲ್ಲಿ ಯಾರಿಹನು? ಗುಣಗಳಿಂದ ತುಂಬಿರುವವನು, ಶಕ್ತಿವಂತನು, ಧರ್ಮವನ್ನು ಅರಿತವನು, ಉಪಕಾರವನ್ನು ಸ್ಮರಿಸುವವನು (ಕೃತಜ್ಞ ನು), ಸದಾ ಸತ್ಯವನ್ನೇ ನುಡಿಯುವವನು, ಮತ್ತು ನಿಯಮವನ್ನು ಪಾಲಿಸುವವನು. ವಿವರಣೆ :- ಈ ಶ್ಲೋಕದಿಂದ ಆರಂಭಿಸಿ ಮುಂದಿನ ಎರಡು ಶ್ಲೋಕಗಳಲ್ಲಿ ದಿವ್ಯಜ್ ಞಾ ನಿಗಳಾದ ವಾಲ್ಮೀಕಿ ಮಹರ್ಷಿಗಳು ಅತ್ಯಂತ ಶ್ರೇಷ್ಠವ್ಯಕ್ತಿಯಲ್ಲಿ ಕಾಣಬಹುದಾದ ವಿಶೇಷ-ಗುಣಗಳನ್ನು ಆಯ್ದು ಇಂತಹ ಗುಣಗಳು ಯಾರಲ್ಲಿ ಇರಬಹುದು ? ಎಂಬ ಪ್ರಶ್ನೆಯನ್ನು ಕುತೂಹಲದಿಂದ ನಾರದರ ಮುಂದಿಡುತ್ತಾರೆ. ವೀರ್ಯವಾನ್ = ಶಕ್ತಿ, ಸಾಮರ್ಥ್ಯವುಳ್ಳವನು. ಕೃತಜ್ಞ : = ಇನ್ನೊಬ್ಬರು ಮಾಡಿದ ಉಪಕಾರವನ್ನು ಸ್ಮರಿಸುವವನು. ದೃಢವ್ರತ: = ಹಿಡಿದ ನಿಯಮವನ್ನು ತಪ್ಪದೇ ಮಾಡುವವನು. ಶ್ಲೋಕ - 3 ಅನು:- ಸನ್ನಡತೆಯಿಂದ ಕೂಡಿದವನು, ಸಕಲ ಪ್ರಾಣಿಗಳಿಗೆ ಹಿತವನ್ನು ಉಂಟು ಮಾಡುವವನು,ವೇದಜ್ ಞಾ ನನ್ನು ಪಡೆದವನು, ಸಮರ್ಥನು ಮತ್ತು ಕಣ್-ಮನಸೆಳೆವ ಆಕಾರವುಳ್ಳವನು, - ವಿವರಣೆ:- ಈ ಶ್ಲೋಕದಲ್ಲಿಯೂ ಅನೇಕ ವಿಶೇಷಗುಣಗಳನ್ನು ಆಯ್ದು ವಾಲ್ಮೀಕಿಯು ಕೇಳುತ್ತಿದ್ದಾರೆ. ಮನೆಯ ಒಳಗೆ ಹಾಗೂ ಮನೆಯ ಹೊರಗಿನ ಸಮಾಜದಲ್ಲಿ ಒಂದೇ ತೆರನಾದ ನಡತೆಯನ್ನು ಹೊಂದಿರುವುದು ಅಸಾಮಾನ್ಯವಾದ ಗುಣ. ಅಂತೆಯೇ ಪಶು,ಪಕ್ಷಿ ,ಪ್ರಾಣಿಗಳನ್ನು ತನ್ನಂತೆಯೇ ಎಂದು ಭಾವಿಸುವುದು, ಅವರೆಲ್ಲರಲ್ಲಿ ಪರಮಾತ್ಮನನ್ನು ಕಾಣುವುದೂ ಅಸಾಮಾನ್ಯವಾದ ಗುಣ. 13 ಇಂತಹ ಅಸಾಧಾರಣ ಗುಣಗಳುಳ್ಳ ಮಹಾತ್ಮನು ಯಾರು? ಎಂದು ವಾಲ್ಮೀಕಿಗಳ ಅಭಿಪ್ರಾಯ. ಶ್ಲೋಕ - 4 ಅನುವಾದ:- ಆತ್ಮನಿಗ್ರಹವುಳ್ಳವನು, ಕೋಪವನ್ನು ಗೆದ್ದವನು, ದೇಹಕಾಂತಿಯುಳ್ಳವನು, ಅಸೂಯೆ ಇಲ್ಲದವನು ಯಾರು? ಅಲ್ಲದೆ ಇಂತಹ ವ್ಯಕ್ತಿಯು ಕ್ರೋಧದಿಂದ ರಣರಂಗದಲ್ಲಿ ನಿಂತರೆ ದೇವತೆಗಳು ಇವನನ್ನು ಕಂಡು ಹೆದರುವರು ಅಂತಹವನು ಯಾರು? ವಿವರಣೆ:- ಮೂರು ಶ್ಲೋಕಗಳಲ್ಲಿ ಮನುಷ್ಯರಲ್ಲಿ ಕಾಣಸಿಗದ ದೇವರಲ್ಲೇ ಕಾಣಬಹುದಾದ ಲೋಕೋತ್ತರ-ಗುಣಗಳನ್ನು ಆಯ್ದು ವಿವೇಕಿಯಾದ ವಾಲ್ಮೀಕಿಗಳು ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಶ್ರೀರಾಮನನ್ನೇ ನಾರದರು ಉದಾಹರಣೆಯಾಗಿ ನೀಡುತ್ತಾರೆಂಬ ತವಕದಿಂದ ಉತ್ತರಕ್ಕಾಗಿ ಕಾಯಿತ್ತಿದ್ದಾರೆ. ಈ ಮೂರನೇ ಶ್ಲೋಕದಲ್ಲಿ ಮೂರು ವಿಶೇಷಗುಣಗಳನ್ನು ಕೇಳಲಾಗಿದೆ. ಆತ್ಮವಾನ್- ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸಿದವನು, ಜಿತಕ್ರೋಧ:- ಕೋಪವನ್ನೇ ಗೆದ್ದವನು, ಅನಸೂಯಕ:- ಹೊಟ್ಟೆಕಿಚ್ಚು ಇಲ್ಲದವನು. ಲೋಕೋತ್ತರವಾದ ಈ ಮೂರು ಗುಣಗಳು ಮನುಷ್ಯರಲ್ಲಿ ಕಾಣಸಿಗುವುದಿಲ್ಲ. ಆದ್ದರಿಂದ ಈ ಎಲ್ಲ ಗುಣಗಳುಳ್ಳವನು ದೇವರೇ ಆಗಿರುತ್ತಾನೆ ಎಂದು ವಾಲ್ಮೀಕಿ ಮಹರ್ಷಿಗಳ ಪ್ರಶ್ನೆಯ ಒಳಭಾವ.. ಶ್ಲೋಕ - 5 ಅನುವಾದ:- ಇಂತಹ ಅತ್ಯಂತ ಶ್ರೇಷ್ಠ ಯಾರೆಂದು ತಿಳಿಯಲು ನನ್ನ ಮನಸ್ಸು ಹಾತೊರೆಯುತ್ತಿದೆ. ಮಹರ್ಷಿ ನಾರದರೇ! ಇಂತಹ ವ್ಯಕ್ತಿ ಯಾರೆಂದು ತಿಳಿಯುವ ಸಾಮರ್ಥ್ಯ ನಿಮಗಿದೆಯಷ್ಟೆ!! ವಿವರಣೆ:- ಅತಿಮಾನುಷ ಗುಣಗಳನ್ನು ಆಯ್ದು “ಇಂತಹ ವ್ಯಕ್ತಿ ಯಾರೆಂದು ತಿಳಿಯುವ ತವಕ ನನ್ನದಾಗಿದೆ. ತ್ರಿಕಾಲ ಜ್ ಞಾ ನಿಗಳಾದ 14 ನಾರದರೆ! ನಿಮಗಷ್ಟೇ ಅಂತಹ ವ್ಯಕ್ತಿಯ ಪರಿಚಯವಿರಲು ಸಾಧ್ಯ” ಎನ್ನುವ ವಾಲ್ಮೀಕಿಗಳ ಮನದಲ್ಲಿ ಆ ವ್ಯಕ್ತಿ ವಿಷ್ಣುವಿನ ಅವತಾರ ಶ್ರೀರಾಮನೇ ಎಂದು ಇತ್ತು.. ಶ್ಲೋಕ - 6 ಅನುವಾದ:- ವಾಲ್ಮೀಕಿ ಮಹರ್ಷಿಗಳ ಪ್ರಶ್ನಪೂರ್ವಕ ಮಾತುಗಳನ್ನು ಕೇಳಿದ, ಮೂರ್ಲೋಕಗಳ ಆಗು ಹೋಗುಗಳನ್ನು ಅರಿತ ನಾರದರು ವಾಲ್ಮೀಕಿ ಮಹರ್ಷಿಗಳನ್ನು ಕುರಿತು “ ಕೇಳಿರಿ! ಹೇಳುತ್ತೇನೆ” ಎಂದು ಹರ್ಷದಿಂದ ಇಂತೆಂದು ಹೇಳಿದರು- ಶ್ಲೋಕ - 7 ಅನುವಾದ:- ಮಹರ್ಷಿ, ವಾಲ್ಮೀಕಿಗಳೇ ! ನೀವು ಹೇಳಿದ ಅಂತಹ ಹಲವಾರು ಗುಣಗಳು ಈ ಲೋಕದಲ್ಲಿ ಅತಿ ವಿರಳ. ನನ್ನ ಬುದ್ಧಿಗೆ ಹೊಳೆದಂತೆ ಅಂತಹ ವಿಶೇಷಗುಣಗಳಿಂದ ತುಂಬಿದ ಮನುಷ್ಯನ ಬಗ್ಗೆ ಹೇಳುತ್ತೇನೆ. ಕೇಳಿರಿ ! – ವಿವರಣೆ :- ಈ ಶ್ಲೋಕದಲ್ಲಿ ನಾರದರು ವಾಲ್ಮೀಕಿಮಹರ್ಷಿಗಳಿಗೆ, ಮುನಿಯೇ! ನೀವು ಹೇಳಿದ ಅಂತಹ ಲೋಕೋತ್ತರ ಗುಣಗಳು ಮನುಷ್ಯರಲ್ಲಿ ಅತಿ ವಿರಳ. ನನ್ನ ಬುದ್ಧಿಗೆ ಹೊಳೆದಂತೆ ನಾನು ಅಂತಹ ಮನುಷ್ಯನ ಪರಿಚಯ ನೀಡುತ್ತೇನೆ, ಎನ್ನುವ ಮೂಲಕ ಅಂತಹ ಗುಣವಿಶಿಷ್ಟನಾದವನು ಮನುಷ್ಯರಿಗಿಂತ ಮಿಗಿಲಾದ ದೇವತೆಯೇ ಆಗಿರಬೇಕೆಂದು ಸೂಚನೆ ನೀಡುತ್ತಾರೆ.. ಶ್ಲೋಕ - 8 ಅನುವಾದ:- ನೀವು ಉಲ್ಲೇಖಿಸಿದ ಎಲ್ಲ ಗುಣಗಳನ್ನೂ ಹೊಂದಿರುವ ಒಬ್ಬ ವ್ಯಕ್ತಿ ಇದ್ದಾನೆ. ಅವನು ಇಕ್ಷ್ವಾಕುವಂಶದಲ್ಲಿ ಜನಿಸಿದವನು. ಅವನನ್ನು ಪ್ರಜೆಗಳು ಪ್ರೀತಿ ಹಾಗೂ ಗೌರವದಿಂದ “ರಾಮ” ಎಂದು ಕರೆಯುತ್ತಾರೆ. ಆತನು ಮನೋನಿಗ್ರಹವುಳ್ಳನೂ ಮಹಾಶಕ್ತಿವಂತನೂ ಆಗಿದ್ದಾನೆ. ಅಷ್ಟೇ ಅಲ್ಲದೆ ಕಾಂತಿಯುಕ್ತನೂ, ದೃಢಮನಸ್ಸುಳ್ಳವನೂ, 15 ಇಂದ್ರಿಯ ಮೇಲಣ ಹತೋಟಿ ಸಾಧಿಸಿದವನೂ, ಪರರನ್ನು (ವೈರಿಗಳನು) ಅಂಕೆಯಲ್ಲಿಡುವವನೂ ಆಗಿದ್ದಾನೆ. ಶ್ಲೋಕ - 9 ಅನುವಾದ:- ಅವನು ಅತ್ಯಂತ ಬುದ್ಧಿವಂತನೂ, ಸನ್ನಡತೆಯುಳ್ಳವನೂ, ಮಾತು ಬಲ್ಲವನೂ, ಮಂಗಳ-ಮೂರ್ತಿಯೂ, ವೈರಿಗಳನ್ನು ಸದೆಬಡೆವ ವಿಶಾಲವಾದ ಭುಜಗಳುಳ್ಳನೂ, ಪುಷ್ಟವಾದ ಬಾಹುಗಳುಳ್ಳನೂ, ಶಂಖದ ಆಕಾರದಂತಿರುವ ಕುತ್ತಿಗೆಯುಳ್ಳವನೂ, ಹಿರಿದಾದ ದವಡೆಯುಳ್ಳವನೂ ಆಗಿದ್ದಾನೆ. ಶ್ಲೋಕ - 10 ಅನುವಾದ:- ಆ ಮಹಾ ಪರಾಕ್ರಮಿಯು ವಿಶಾಲವಾದ ಎದೆಯುಳ್ಳವನೂ, ಮಹಾಬಿಲ್ಲುಗಾರನೂ, ಮಾಂಸಲವಾದ ಎದೆಯ ಎಲುಬುಗಳುಳ್ಳವನೂ (ಗೂಢಜತ್ರು:) ಹಗೆಗಳನ್ನು ಮಣಿಸುವವನೂ, ಉದ್ದವಾದ ಬಾಹುವುಳ್ಳವನೂ, ಸುಲಕ್ಷಣವಾದ ತಲೆಯುಳ್ಳವನೂ, ಅಗಲವಾದ ಸೊಬಗಿನ ಹಣೆಯುಳ್ಳವನೂ, ಆಗಿದ್ದಾನೆ. ಶ್ಲೋಕ - 11 ಅನುವಾದ:- (ಆ ಸುಭಗನು) ಸಮನಾದ ಅಳತೆಯ ಶರೀರವುಳ್ಳವನು,(ಅವನ ಶರೀರದ ಎಲ್ಲ ಅಂಗಗಳೂ ಸಮನಾಗಿದ್ದವು. ಆ ದೃಢ ಶರೀರವು ಎಲ್ಲ ಪ್ರಕಾರದ ಪುರುಷಲಕ್ಷಣಗಳನ್ನು ಹೊಂದಿತ್ತು ಎಂದರ್ಥ) ಪಸೆಯಿಂದ ಹೊಳೆವ ಮೈಬಣ್ಣವುಳ್ಳವನು, ಹಗೆಗಳನ್ನು ಮಣಿಸುವ ಶಕ್ತಿಯುಳ್ಳವನು, ಪುಷ್ಟವಾದ ವಿಶಾಲ ಎದೆಯುಳ್ಳವನು, ಬಿರಿದ ಕಣ್ಣುಳ್ಳವನು, ದೇಹಸಿರಿಯುಳ್ಳವನು, ಮಂಗಳಕರ ಆಕಾರವುಳ್ಳವನು,- ಶ್ಲೋಕ - 12 ಅನುವಾದ:- ಅವನು ನ್ಯಾಯನೀತಿಗಳನ್ನು ಬಲ್ಲವನು (ಧರ್ಮಜ್ಞ ), ಸತ್ಯವನ್ನು ಪಾಲಿಸುವ ವ್ರತವುಳ್ಳವನು, ಪ್ರಜಾಹಿತದಲ್ಲಿ ಆಸಕ್ತಿವುಳ್ಳವನು, ಕೀರ್ತಿವಂತನು, ಅರಿವು ತುಂಬಿದವನು, ಏಕಾಗ್ರತೆಯುಳ್ಳವನು ಆಗಿದ್ದನು. 16 ವಿವರಣೆ:- ೧. ಧರ್ಮವು ತ್ರಿವಿಧ. ಸಾಮಾಜಿಕಧರ್ಮ, ಶಾಶ್ವತಧರ್ಮ, ಹಾಗೂ ವೈಯಕ್ತಿಕಧರ್ಮ, ಸಾಮಾಜಿಕ ಧರ್ಮವು ಕಾಲಕ್ಕೆ ತಕ್ಕಂತೆ ಬದಲಾಗುವ ಸ್ಥಿತಿಯುಳ್ಳದ್ದು. ಪರಿಸ್ಥಿತಿ ಮತ್ತು ಕಾಲಕ್ಕೆ ತಕ್ಕಂತೆ ನ್ಯಾಯನೀತಿಗಳನ್ನು ಆಚರಿಸುವುದು ಧರ್ಮ. ಅದನ್ನು ತಿಳಿದವನು ಧರ್ಮಜ್ಞ. ಸತ್ಯ , ಅಹಿಂಸೆ ಮೊದಲಾದ ಜೀವನ ಮೌಲ್ಯಗಳು ಶಾಶ್ವತವಾಗಿರುತ್ತವೆ. ಸ್ವತಃ ಕಳ್ಳನೇ ಆದ ವ್ಯಕ್ತಿಯು ಸತ್ಯವನ್ನೇ ಹೇಳಬೇಕೆಂದು ಇತರರಿಗೆ ಉಪದೇಶಿಸುವುದನ್ನು ನಾವು ಕಾಣುತ್ತೇವೆ.ಇನ್ನು ವೈಯಕ್ತಿಕಧರ್ಮವು ಸಾಪೇಕ್ಷವಾಗಿರುವಂತದ್ದು. ಒಬ್ಬನೇ ವ್ಯಕ್ತಿಯು ತನ್ನ ತಂದೆತಾಯಿಗಳಿಗೆ ಮಗನಾಗಿರುತ್ತಾನೆ. ತನ್ನ ಹೆಂಡತಿಗೆ ಗಂಡನಾಗಿರುತ್ತಾನೆ. ತನ್ನ ಮಕ್ಕಳಿಗೆ ತಂದೆಯೂ ಆಗಿರುತ್ತಾನೆ. ಅಣ್ಣನಿಗೆ ತಮ್ಮನೂ, ತಮ್ಮನಿಗೆ ಅಣ್ಣನೂ ಆಗಿರುತ್ತಾನೆ. ಆಯಾ ಸಂದರ್ಭಗಳಲ್ಲಿ ಆಯಾ ವ್ಯಕ್ತಿಗಳೊಂದಿಗೆ ನಡೆದುಕೊಳ್ಳಬೇಕಾದ ರೀತಿಯೇ ವೈಯಕ್ತಿಕ ಧರ್ಮವಾಗಿರುತ್ತದೆ. ಈ ಧರ್ಮದ ಮರ್ಮವನ್ನು ಅರಿತವನು ಧರ್ಮಜ್ಞ. ರಾಮನು ಈ ವಿಧವಾದ ಎಲ್ಲ ಧರ್ಮಗಳನ್ನೂ ಸರಿಯಾಗಿ ಅರಿತವನಾಗಿದ್ದನು. ಅದರಂತೆಯೇ ನಡೆದುಕೊಂಡದ್ದನ್ನೂ ರಾಮಾಯಣವು ಬಹಳ ವರ್ಣಿಸಿದೆ. ಆದುದರಿಂದಲೇ ರಾಮನು ಮರ್ಯಾದಾ ಪುರುಷೋತ್ತಮನೆನಿಸಿದ್ದಾನೆ. ಈ ಎಲ್ಲ ಕಾರಣಗಳಿಂದಲೇ ರಾಮನು ಎಲ್ಲ ಮಾನವರ ಆದರ್ಶಪುರುಷನಾಗಿದ್ದಾನೆ. ನಮ್ಮ ಪ್ರಾಚೀನ ಶಾಸ್ತ್ರಗ್ರಂಥಗಳಲ್ಲಿ ದೇವರು ಏಕೆ ಮಾನವನಾಗಿ ಅವತಾರ ಮಾಡಬೇಕು? ಎಂದು ಪ್ರಶ್ನೆ ಮಾಡಿಕೊಂಡು ಅದಕ್ಕೆ ಉತ್ತರವಾಗಿ ಹೀಗೆ ನುಡಿದಿದ್ದಾರೆ ’’ಮರ್ತ್ಯಾವತಾರಸ್ತ್ವಿಹ ಮರ್ತ್ಯಶಿಕ್ಷಣಮ್” (ಮಾನವರಿಗೆ ತಮ್ಮ ಜೀವನ ಪದ್ಧತಿಯನ್ನು ಬೋಧಿಸುವ ಉದ್ದೇಶದಿಂದಲೇ ಭಗವಂತನು ಭೂಮಿಯ ಮೇಲೆ ಮಾನವನಾಗಿ ಅವತರಿಸುತ್ತಾನೆ) ೨. ಯಶಸ್ವೀ ಅಂದರೆ ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳನ್ನು ಮಾಡಿ ಹೆಸರು ಪಡೆದವನು. ಈ ಎಲ್ಲ ವಿಶೇಷಗುಣಗಳು ದೇಶವಾಳುವ ರಾಜನಲ್ಲಿ ಇರಬೇಕು. ೩. ಸಮಾಧಿ ಎಂದರೆ ಏಕಾಗ್ರತೆಯಿಂದಧ್ಯಾನದಲ್ಲಿ ಲೀನನಾಗುವುದು. ಒಬ್ಬ ರಾಜನಿಗೆ ಈ ತೆರನಾದ ಏಕಾಗ್ರತೆ ಪ್ರಜಾಪಾಲನೆಯಲ್ಲಿ ಇರಬೇಕು. 17 ಶ್ಲೋಕ -13 ಅನು - ಪ್ರಜಾಪತಿಯಾದ ಬ್ರಹ್ಮನಂತೆ ತನ್ನ ಪ್ರ?

Use Quizgecko on...
Browser
Browser