Chapter 8-11 from 8 to 11 PDF
Document Details
Uploaded by ThankfulPeridot4417
Tags
Summary
This document contains chapters 8, 9, and 10 of a Kannada language textbook. It includes information on Indian poets like D.R. Bendre and Kuvempu, along with some questions on their works. It introduces readers to the subject of Kannada literature and cultural context.
Full Transcript
# ಸಾಂಸ್ಕೃತಿಕ ಕನ್ನಡ ## ಅಧ್ಯಾಯ - 8 ### ಕುರುಡು ಕಾಂಚಾಣಾ - ದ.ರಾ. ಬೇಂದ್ರೆ #### ಕವಿ ಪರಿಚಯ: * ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು. * ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿಯಂದು ಪ್ರಸಿದ್ಧರಾಗಿದ್ದಾರೆ. * 1973ರಲ್ಲಿ, ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ...
# ಸಾಂಸ್ಕೃತಿಕ ಕನ್ನಡ ## ಅಧ್ಯಾಯ - 8 ### ಕುರುಡು ಕಾಂಚಾಣಾ - ದ.ರಾ. ಬೇಂದ್ರೆ #### ಕವಿ ಪರಿಚಯ: * ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು. * ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿಯಂದು ಪ್ರಸಿದ್ಧರಾಗಿದ್ದಾರೆ. * 1973ರಲ್ಲಿ, ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ನೀಡಲಾಯಿತು. * ಬೇಂದ್ರೆಯವರು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. #### ಕವನದ ಆಶಯ: * ನಾ ಕಾಂಚಾಣಾದ ಕ್ರೌರ್ಯವನ್ನು ಮೂರ್ತೀಕರಿಸುವ ಕುರುಡು ಕಾಂಚಾಣಾವನ್ನು ನಾದಲೀಲೆ" ಎಂಬ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. * ಈ ಕವಿತೆಯ ಒಂದೊಂದು ಪ್ರತಿಮೆಯೂ ಕುರುಡು ಕಾಂಚಾಣಾದ ಕ್ರೌರ್ಯವನ್ನು ಅರ್ಥಪೂರ್ಣವಾಗಿ ಚಿತ್ರಿಸುತ್ತದೆ. * ಕುರುಡು ಕಾಂಚಾಣಾದ ಕುಣಿತವು ಮಾಮೂಲು ಕುಣಿತವಲ್ಲ. * ಎಲ್ಲಾ ವಿಕೃತಿಯ ಮೊತ್ತ ಅದು ಎಂಬುದನ್ನು ಬೇಂದ್ರೆಯವರ ಅದ್ಭುತ ಪ್ರತಿಭೆಯಿಂದ ಮೂಡಿಬಂದಿರುವ ಪ್ರತಿಮೆಗಳು ಅತ್ಯಂತ ಸಮರ್ಥವಾಗಿ ಚಿತ್ರಿಸುತ್ತಾ ಕವನಕ್ಕೆ ಅಪೂರ್ವ ಕಲಾಸಿದ್ಧಿಯನ್ನು ತಂದು ಕೊಟ್ಟಿವೆ. #### ಕವನ: ``` ಈ ಕುರುಡು ಕಾಂಚಾಣಾ ಕುಣಿಯುತಲಿತ್ತು ಈ ಕಾಲಿಗೆ ಬಿದ್ದವರ ತುಳಿಯುತಲಿತ್ತೋ ಕುರುಡು ಕಾಂಚಾಣ బాణంతియెలుಬ నా ಬಾಣದ ಬಿಳಿಪಿನಾ ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ ಸಣ್ಣ ಕಂದಮ್ಮಗಳ ಕಣ್ಣೀನ ಕವಡೀಯ ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ ಬಡವರ ಒಡಲಿನ ಬಡಬಾನಲದಲ್ಲಿ ಸುಂಡು ಸುಡು ಪಂಜು ಕೈಯೊಳಗಿತ್ತೋ ಕಂಬನಿ ಕುಡಿಯುವ ಹುಂಬ ಬಾಹಿಲೆ ಮೈ ದುಂಬಿದಂತುಧೂ ಉಧೋ ಎನ್ನುತಲಿತ್ತೋ ಕೂಲಿ ಕುಂಬಳಿಯವರ ಪಾಲಿನ ಮೈದೊಗಲ ಧೂಳಿಯ ಭಂಡಾರ ಹಣೆಯೊಳಗಿತ್ತೋ ಗುಡಿಯೊಳಗೆ ಗಣಣ, ಮ ಹಡಿಯೊಳಗ ತನನ, ಅಂ ಗಡಿಯೊಳಗ ಝಣ ಝಣ ನುಡಿಗೊಡುತಿತ್ತೋ ಹ್ಯಾಂಗಾರ ಕುಣಿಕುಣಿದು ಮಂಗಾಟ ನಡೆದಾಗ ಅಂಗಾತ ಬಿತ್ತೋ, ಹೆಗಲಲ್ಲಿ ಎತ್ತೋ ``` #### ಕವಿ ಪರಿಚಯ: * ದ. ರಾ ಬೇಂದ್ರೆಯವರು ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. * ಅವರನ್ನು "ಕನ್ನಡದ ವರಕವಿ' ಎಂದು ಪರಿಗಣಿಸಲಾಗಿದೆ. * ಬೇಂದ್ರೆಯವರು 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿದಂದ ಪ್ರಸಿದ್ಧರಾಗಿದ್ದಾರೆ. * 1896ರಲ್ಲಿ ಧಾರವಾಡದಲ್ಲಿ ಜನಿಸಿದ ಬೇಂದ್ರೆಯವರು ಪ್ರಧಾನವಾಗಿ ಕವಿಯಾದರೂ ಸಾಹಿತ್ಯದ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿ ನಾಡಿನ ಸಾಹಿತ್ಯ ಪರಂಪರೆಯನ್ನು ಬೆಳಗಿದವರು. * ನಾಟಕ, ಸಾಹಿತ್ಯ ಮೀಮಾಂಸೆ, ಜೀವನ ಚರಿತ್ರೆ,ಆಧ್ಯಾತ್ಮ, ಅನುವಾದ ಮುಂತಾಗಿ ಅವರ ಕೃತಿಗಳು ಅತ್ಯಂತ ಜನಪ್ರಿಯವಾಗಿವೆ. * ಜಾನಪದ ಪರಂಪರೆಗೆ ಮಾರುಹೋಗಿದ್ದ ಕವಿ ಬೇಂದ್ರೆಯವರು ತಮ್ಮ ಬಹುತೇಕ ಕಾವ್ಯ ರಚನೆಯನ್ನು ದೇಸಿ ಮಟ್ಟಿನಲ್ಲಿ ಮಾಡಿದರು. * ಅವರ ಕವಿತೆಗಳ ಆಳ, ಅರಹು, ವಿಸ್ತಾರಗಳು ಓದುಗರನ್ನು ಗಂಭೀರ ಚಿಂತನೆಗೆ ಹಚ್ಚುತ್ತವೆ. * ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸದಾಗಿ ಕುಡಿಯೊಡೆದ ಇಂದಿನ ಸುಗಮ ಸಂಗೀತ ಕ್ಷೇತ್ರ ಬೇಂದ್ರೆಯವರ ನೂರಾರು ಕವಿತೆಗಳನ್ನು ಗಾಯನಕ್ಕೆ ಅಳವಡಿಸಿದೆ. * ಬೇಂದ್ರೆಯವರ ಅರ್ಥಪೂರ್ಣವಾದ ಸುಮಧುರ ಕಾವ್ಯ ಮನುಜ ಕುಲಕ್ಕೆ ಮಾರ್ಗದರ್ಶಕವಾಗಿದೆ. * ಮೂವತ್ತೇಳು ಕವನ ಸಂಕಲನಗಳನ್ನು ಹೊರತಂದ ಬೇಂದ್ರೆಯವರು ಆಧುನಿಕ ಕನ್ನಡ ಸಾಹಿತ್ಯ ಕಂಡ ಅಪ್ರತಿಮ ಕವಿ, 1974ರಲ್ಲಿ ಅವರ "ನಾಕುತಂತಿ" ಕವನ ಸಂಗ್ರಹಕ್ಕೆ ಜ್ಞಾನಪೀಠ ಪ್ರಶಸ್ತಿ ಸಲ್ಲುವ ಮೂಲಕ ನಾಡಿನ ಕೀರ್ತಿಯೂ ಹೆಚ್ಚಿತು. #### ಪದಕೋಶ: * ಜೋಮಾಲೆ - ಜೋತಾಡುವ ಮಾಲೆ * ಬಡಬಾನಲ * ಕೂಲಿಕುಂಬಳಿಯವರು - ಬಡವರು, ಕೂಲಿಮಾಡಿ ಬದುಕುವವರು * ಸಾಬಾಣ - ಸಾಬೂನು ## ಅಭ್ಯಾಸಕ್ಕಾಗಿ ಪ್ರಶ್ನೆಗಳು ### ಬಹು ಆಯ್ಕೆ ಮಾದರಿಯ ಪ್ರಶ್ನೆಗಳು 1. ಕುರುಡು ಕಾಂಚಾಣ ಪದ್ಯದ ರಚನಾಕಾರರು ಯಾರು? * ಅ. ಮಾಸ್ತಿ * ಆ. ಕುವೆಂಪು * ಇ. ಬೇಂದ್ರೆ * ಈ. ಡಿ.വി.ಜಿ. 2. ದ.ರಾ.ಬೇಂದ್ರೆಯವರ ಪೂರ್ಣ ಹೆಸರೇನು? * ಅ. ಬೇಂದ್ರೆ * ಆ. ದ.ರಾ.ಬೇಂದ್ರೆ * ಇ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ * ಈ. ದತ್ತತ್ರಯ ರಾಮಚಂದ್ರ ಬೇಂದ್ರೆ 3. ದ.ರಾ ಬೇಂದ್ರೆಯವರ ಕಾವ್ಯನಾಮ ಯಾವುದು? * ಅ. ಅಂಬಿಕ * ಆ. ದತ್ತ * ಇ. ಅಂಬಿಕಾತನಯದತ್ತ * ಈ. ಅಂಜಿಕತನಯದತ್ತ 4. ಬೇಂದ್ರೆಯವರ ಕಾಲ ಎಷ್ಟು? * ಅ. 1896 * ಆ. 1906 * ಇ. 1903 * ಈ. 1803 5. ಬೇಂದ್ರೆಯವರ ಊರು ಯಾವುದು? * ಅ. ಹುಬ್ಬಳ್ಳಿ * ಆ. ಧಾರವಾಡ * ಇ. ಬೆಂಗಳೂರು * ಈ. ಮೈಸೂರು 6. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು ಯಾರು? * ಅ. ಬೇಂದ್ರೆ * ಆ. ಮಾಸ್ತಿ * ಇ. ಸಿದ್ಧಲಿಂಗಯ್ಯ * ಈ. ಡಿ.ವಿ.ಜಿ. 7. ಬೇಂದ್ರೆಯವರಿಗೆ ಎಷ್ಟರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆಯಿತು? * ಅ. 1968 * ಆ. 1974 * ಇ. 1979 * ಈ. 1988 8. ಬೇಂದ್ರೆಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು? * ಅ. ಮರಳಿ ಮಣ್ಣಿಗೆ * ಆ. ನಾದಲೀಲೆ * ಇ. ನಾಕುತಂತಿ * ಈ. ಕೃಷ್ಣಾವತಾರ 9. ಕುರುಡು ಕಾಂಚಾಣ ಪದ್ಯವನ್ನು ಯಾವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ? * ಅ. ನಾದಲೀಲೆ * ಆ. ಮಾಂದಳಿರು * ಇ. ಸಖಿಗೀತ * ಈ. ನಾಕುತಂತಿ 10. ಕುರುಡು ಕಾಂಚಾಣ ಇತ್ತು. * ಅ. ಕುಣಿಯುತ್ತಲಿತ್ತು * ಆ. ಹಾಡುತ್ತಲಿತ್ತು * ಇ. ಬೀಳುತ್ತಲಿತ್ತು * ಈ. ನೋಡುತ್ತಲಿತ್ತು 11. ಕುರುಡು ಕಾಂಚಾಣ ಯಾರನ್ನು ತುಳಿಯುತಲಿತ್ತು? * ಅ. ಹಳ್ಳಕ್ಕೆ ಬಿದ್ದವರು * ಆ. ಕೆಳಗೆ ಬಿದ್ದವರು * ಇ. ಕಾಲಿಗೆ ಬಿದ್ದವರು * ಈ. ನೇರಿಗೆ ಬಿದ್ದವರು 12. ಯಾರ ಎಲುಬನ್ನು ಕಾಂಚಾಣ ಕಿರುಗೆಜ್ಜೆಯಾಗಿ ಮಾಡಿಕೊಂಡಿದೆ? * ಅ. ಮಕ್ಕಳು * ಆ. ಮುದುಕರು * ಇ. ಹೆಂಗಸರು * ಈ. ಬಾಣಂತಿ 13. ಸಾಬಾಣ ಪದದ ಅರ್ಥವೇನು? * ಅ. ಸಾಬೂನು * ಆ. ಮಾಲೆ * ಇ. ಕೊರಳು * ಈ. ಮೂಳೆ 14. ಬಾಣಂತಿ ಎಲುಬನಲ್ಲಿ ಏನು ಮಾಡಿಕೊಂಡಿರುವರು? * ಅ. ಬಳೆ * ಆ. ಕಿರುಗೆಜ್ಜೆ * ಇ. ಮಾಲೆ * ಈ. ಮೂಳೆ 15. ಶ್ರೀಮಂತರು ಹಾಕುವ ಜೋಮಾಲೆ ಯಾವುದರಿಂದ ಮಾಡಿದ್ದು? * ಅ. ಕಣ್ಣಿನ ಕವಡೆ * ಆ. ವಜ್ರ * ಇ. ಮೂಳೆ * ಈ. ಬಂಗಾರ 16. ಶ್ರೀಮಂತರು ಯಾರ ಕಣ್ಣಿನ ಕವಡೆಯನ್ನು ಜೋಮಾಲೆ ಮಾಡಿಕೊಂಡು ಹಾಕಿಕೊಳ್ಳುವರು? * ಅ. ಸಣ್ಣ કાં * ಆ. ಸಣ್ಣ ಕಂದಮ್ಮ * ಇ. ಮುದುಕರು * ಈ. ಹೆಂಗಸರು 17. ಶ್ರೀಮಂತರು ಸಣ್ಣ ಕಂದಮ್ಮಗಳ ಕಣ್ಣಿನ ಕವಡೆಯನ್ನು ಏನು ಮಾಡಿಕೊಂಡು ಧರಿಸುತ್ತಿದ್ದರು? * ಅ. ಗೆಜ್ಜೆ * ಆ. ಉಂಗುರ * ಇ. ಜೋಮಾಲೆ * ಈ. ಉಂಗುರ 18. ಕಾಂಚಾಣವು ಬಡವರ ಕಣ್ಣೀರನ್ನು ಕುಡಿದು ಏನು ಮಾಡುತ್ತಿತ್ತು? * ಅ. ಕುಣಿಯುತ್ತಿತ್ತು * ಆ. ಉಧೋ ಉಧೋ ಎನ್ನುತ್ತಿತ್ತು * ಇ. ತುಳಿಯುತಿತ್ತು * ಈ. ಒದೆಯುತ್ತಿತ್ತು 19. ಶ್ರೀಮಂತರ ಹಣೆಯಲ್ಲಿ ಯಾರ ಧೂಳಿಯ ಭಂಡಾರ ಇರುವುದು? * ಅ. ಸಣ್ಣ ಕಂದಮ್ಮ * ಇ. ಕೂಲಿ ಕಂಬಳಿ * ಈ. ಬಡವರು 20. ಕಾಂಚಾಣ ಗುಡಿಯಲ್ಲಿ ಯಾವ ಶಬ್ದ ಮಾಡುವುದು? * ಅ. ತನನ * ಆ. ಗಣಣ * ಇ. ಝಣಝಣ * ಈ. ಢಣಢಣ 21. ಕಾಂಜಾಣ ಅಂಗಡಿಯಲ್ಲಿ ಯಾವ ಶಬ್ದ ಮಾಡುವುದು? * ಅ. ತನನ * ಆ. ಗಣಣ * ಇ. ಝಣಝಣ * ಈ. ಢಣಢಣ 22. ಕಾಂಚಾಣ ಮಹಡಿಯೊಳಗೆ ಯಾವ ಶಬ್ದ ಮಾಡುವುದು * ಅ. ತನನ * ಆ. ಗಣಣ * ಇ. ಝಣಝಣ * ಈ. ಢಣಢಣ 23. ಅಂಗಾತ ಬಿತ್ತೋ, ಎತ್ತೋ * ಅ. ಹೆಗಲಲಿ * ಆ. ಮಡಿಲಲಿ * ಇ. ಭುಜದಲಿ * ಈ. ಕೊರಳಲಿ ### ಉತ್ತರಗಳು 1. ಬೇಂದ್ರೆ 2. ದತ್ತಾತ್ರೇಯ ರಾಮಚಂದ್ರ ಬೇಂದ್ರೆ 3. ಅಂಬಿಕಾತನಯದತ್ತ 4. 1896 5. ಧಾರವಾಡ 6. ಬೇಂದ್ರೆ 7. 1974 8. ನಾಕುತಂತಿ 9. ನಾದಲೀಲೆ 10. ಕುಣಿಯುತಲಿತ್ತು 11. ಕಾಲಿಗೆ ಬಿದ್ದವರು 12. ಬಾಣಂತಿ 13. ಸಾಬೂನು 14. ಕಿರುಗೆಜ್ಜೆ 15. ಕಣ್ಣಿನ ಕವಡೆ 16. ಸಣ್ಣ ಕಂದಮ್ಮ 17. ಜೋಮಾಲೆ 18. ಉಧೋ ಉಧೋ ಎನ್ನುತ್ತಿತ್ತು 19. ಕೂಲಿ ಕಂಬಳಿ 20. ಗಣಣ 21. ಝಣಝಣ 22. ತನನ 23. ಹೆಗಲಲಿ ## ಅಧ್ಯಾಯ - 9 ### ಹೊಸಬಾಳಿನ ಗೀತೆ - ಕುವೆಂಪು #### ಕವಿ ಪರಿಚಯ: * ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ 29, 1904 - ನವೆಂಬರ್ 11, 1994), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. * ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. * ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. * ವಿಶ್ವಮಾನವ ಸಂದೇಶ ನೀಡಿದವರು. * ಕನ್ನಡದ ಎರಡನೆಯ "ರಾಷ್ಟ್ರಕವಿ". * ಜ್ಞಾನಪೀಠ ಪ್ರಶಸ್ತಿಯನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು, * ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು. * ಕುವೆಂಪು ಅವರು 20ನೆಯ ಶತಮಾನ ಕಂಡ ದೈತ್ಯ ಪ್ರತಿಭೆ. * ಅವರೊಬ್ಬ ರಸಋಷಿ ತಮ್ಮ ಮೇರು ಕೃತಿ "ಶ್ರೀ ರಾಮಾಯಣ ದರ್ಶನಂ"ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. * ಅವರ ಎರಡು ಬೃಹತ್ ಕಾದಂಬರಿಗಳಾದ "ಕಾನೂರು ಹೆಗ್ಗಡತಿ" ಹಾಗೂ "ಮಲೆಗಳಲ್ಲಿ ಮದುಮಗಳು" ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿವೆ. * ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ. #### ಹೊಸಬಾಳಿನ ಗೀತೆ ಈ ಕವನದ ಆಶಯ: * ಇದನ್ನು ಕೋಗಿಲೆ ಮತ್ತು ಸೋವಿಯತ್ ರಷ್ಯಾ ಸಂಕಲನದಿಂದ ಆರಿಸಿದೆ. * ದಾರಿದ್ರಭಾರ, ಶ್ರೀಮಂತರ ಶೋಷಣೆ ವರ್ಣ-ವರ್ಗ ವ್ಯವಸ್ಥೆಗಳ ತುಳಿಗಳಿಗೆ ಸಿಲುಕಿದವರಿಗೆ ತಿಳಿವು ಹೇಳಿ ಹುರಿದುಂಬಿಸುವ ಪ್ರಯತ್ನವನ್ನು ಕವಿ ಈ ಕವನದಲ್ಲಿ ಮಾಡಿದ್ದಾರೆ. * ಕೈಲಾಗದವರು, ಕೀಳು, ಹಣೆಬರಹಗಳೆಂಬ ಮೌಡ್ಯವನ್ನು ನೀಗಿ ಮುಂದೆ ಬನ್ನಿ ಎಂಬ ಕರೆಯನ್ನು ಯುವಪೀಳಿಗೆಗೆ ಕವಿ ಇಲ್ಲಿ ಕೊಟ್ಟಿದ್ದಾರೆ. * ಸಮಕಾಲೀನ ಪ್ರಜ್ಞೆಯ ಕುರುಹಾಗಿರುವ ಸರ್ವೋದಯ ಸಾರುವ ಕವನಗಳಲ್ಲಿ ಇದೂ ಒಂದು. #### ಕವನ: ``` ಸರ್ವರಿಗೆ ಸಮಬಾಳು! ಸರ್ವರಿಗೆ ಸಮಪಾಲು! ಎಂಬ ನವಯುಗವಾಣಿ ಘೋಷಿಸಿದ ಕೇಳಿ ಸಾಕಾ ಯುಗ ಯುಗದ ದಾರಿದ್ರ ಭಾರದಿಂ ಬೆನ್ ಬಾಗಿ ಗೋಳಿಡುವ ಬಡಜನರೇ, ಏಳಿ ಏಳಿ! ಶ್ರೀಮಂತರಡಿಗಳಲ್ಲಿ ಹುಡಿಯಲ್ಲಿ ಹೊರಳಾದೆ ಕುಸಿದು ಕುಗ್ಗಿದವರೆಲ್ಲ ಸಂತಸವ ತಾಳಿ! ಕಂಗೆಟ್ಟ ಸೋದರರೆ, ಬರುತಿಹಳು ಕಾಣಿ ದಾನವರ ಸೀಳಿ ಅದೊ ವಿಪ್ಲವದ ಕಾಳಿ! ಇಂದ್ರ ಸಿಂಹಾಸನಕ್ಕೆ ಬಂದಿಹುದು ಕೊನೆಗಾಲ; ಕಳಚಿ ಬೀಳುವುದಿಂದು ನಂದನದ ಬೇಲಿ! ದೇವತೆಗಳ ಶ್ರೀಲಮೋದಕ್ಕೆ ಬದಲಾಗಿ ಮಾತ್ರ ಗೋಚರಿಸಮದಲ್ಲಿ ಮರ್ತ್ಯರ ಕೃಷಿಯ ಕೇಲಿ! ದ್ರವ್ಯಾನುಕೂಲತೆಯ ಜಾತಿಯಾ ನೀತಿಯಾ ಪಕ್ಷಪಾತವನೆಲಗಲ ಕೊಚ್ಚುವುದು ಬುದ್ಧಿ; ಮತ್ತೊಂದು ನಾಕವನೆ ನೆಯ್ಯುವರು ಲೋಕದಲಿ ದೇವರ ನ್ಯಾಯವನು ಮಾನವರ ತಿದ್ದಿ! ಕೈಲಾಗದವರೆಂಬ ನಾವು ಕೇಳೆಂದೆಂಬ ಹಣೆಬರಹವೆಂದೆಂಬ ಮೂಢತೆಯ ನೀಗಿ ಯುಗಚಕ್ರಪರಿವರ್ತನೆಗೆ ಸರ್ವರೂ ಸೇರಿ ಹೆಗಲು ಕೊಟ್ಟೋಮ್ಮನಸು ಮಾಡಿ ನೆರವಾಗಿ! ಮೋಹಿನಿಗೆ ಮರುಳಾಗಿ ಮೂರ್ಖದಾನವರೆಲ್ಲ ತಮ್ಮ ಗೆಮ್ಮಯ ಪಾಲನನ್ಯರಿಗೆ ತೆತ್ತು ಸತ್ತಂತೆ ಸಾಯದಿರಿ; ಸಂಸ್ಕೃತಿಯ ಹೆಸರಿಂದ ಶ್ರೀಮಂತರೊಡ್ಡುವಾ ಬಲೆ ನಿಮಗೆ ಮೃತ್ಯು ಇಂದು ನೆತ್ತರು ಚೆಲ್ಲಿ ಮುಂದೆ ಬಹ ಮಕ್ಕಳಿಗೆ ಹೊಟ್ಟೆಗನ್ನವ, ಮೈಗೆ ಬಟ್ಟೆಯನು ನೀಡಿ ಇಂದು ನೋವಾದರೂ ಇಂದು ಸಾವಾದರೂ ಮುಂದೆ ಬಾಳಿಗೆ ಸೊಗಸು ನೆಮ್ಮದಿಯ ಮಾಡಿ ಇಂದು ನೀവೇಳದಿರೆ ಕೆಚ್ಚೆದೆಯ ತಾಳದಿರ ನಿಮ್ಮವರ ಬಾಳು ಎಂದೆಂದಿಗೂ ಹೇಡಿ! ಇಂದು ರಕ್ತದ ಬಿಂದು ಮುಂದೆ ಸೌಖ್ಯದ ಸಿಂಧು! *- ಎಂದು ಸಾಹಸ ಕೇಳಿ, ಹಿಂಜರಿಯಬೇಡಿ! ``` #### ಪದಕೋಶ: * ವಿಪ್ಲವ-ಕ್ರಾಂತಿ * ನಂದನ - ದೇವೇಂದ್ರನ ತೋಟ * ಕೇಲಿ-ಕೇಳಿ, ಆಟ * ನಾಕ-ಸ್ವರ್ಗ ## ಘಟಕ - 4: ತಾಂತ್ರಿಕ ವ್ಯಕ್ತಿಗಳ ಪರಿಚಯ ### ಅಧ್ಯಾಯ - 10 ### ಡಾ. ವಿಶ್ವೇಶ್ವರಯ್ಯ - ವ್ಯಕ್ತಿ ಮತ್ತು ಐತಿಹ್ಯ - ಎ ಎನ್ ಮೂರ್ತಿರಾವ್ * *('ಭಾರತ ರತ್ನ' ಖ್ಯಾತ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯನವರು ಹುಟ್ಟಿದ 15 ಸೆಪ್ಟೆಂಬರ್ ದಿನವನ್ನು "ಇಂಜಿನಿಯರ್'ಗಳ ದಿನವೆಂದು ಘೋಷಿಸಲಾಗಿದೆ. ಸರ್ಕಾರ ಸೇರಿದಂತೆ ದೇಶಾದ್ಯంత ఇಂజಿನీరింಗಳು ಸಂಘಗಳು ಈ ದಿನದಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ತಾಂತ್ರಿಕ ಸಭೆ, ಸಮಾರಂಭ ಸಂವಾದ, ವಿಷಯ ಮಂಡನೆಗಳು ಜರುಗುತ್ತವೆ. ಇದಕ್ಕೆ ಪೂರಕವಾಗಿ ಜನಸಾಮಾನ್ಯರಲ್ಲಿ "ವಿಶ್ವೇಶ್ವರಯ್ಯನವರ ಬಗ್ಗೆ ಹಲವು ಹತ್ತಾರು ಐತಿಹ್ಯಗಳು ಚಲಾವಣೆಯಲ್ಲಿವೆ. )*** #### ಲೇಖನದ ಆಶಯ: * ಸರ್ ಎಂ ವಿಶ್ವೇಶ್ವರಯ್ಯನವರು, ವಿಭಿನ್ನ ರೀತಿಯ ವೈಜ್ಞಾನಿಕ ಮತ್ತು ಆಧುನಿಕ ಸಮಾಜವನ್ನು ಕಟ್ಟಬೇಕು ಎಂಬ ನಿಲುವನ್ನು ಹೊಂದಿದ್ದರು. * ಸಮಾಜದಲ್ಲಿ ಸರ್ವ ಜನಾಂಗವು, ರಾಜ್ಯದ ಎಲ್ಲಾ ಸವಲತ್ತುಗಳನ್ನು ಪಡೆಯಬಹುದು ಎನ್ನುವಂತಹ ಭಾವನೆಯನ್ನು ಆಧುನಿಕ ನವಕರ್ನಾಟಕದ ಹಾಗೂ ನವ ಮೈಸೂರು ರಾಜ್ಯದಲ್ಲಿ ಪ್ರತಿಯೊಬ್ಬರು ಹೊಂದಿರಬೇಕು ಎಂಬಂತಹ ಕಲ್ಪನೆಯನ್ನು ಸರ್ ಎಂ ವಿ ಯವರು ಸ್ವತಂತ್ರ ಪೂರ್ವದಲ್ಲಿ ಹೊಂದಿದ್ದರು ಎಂಬ ಅಂಶವನ್ನು ಈ ಲೇಖನವು ಪ್ರಸ್ತುತಪಡಿಸುತ್ತದೆ. * ಈ ಲೇಖನದಲ್ಲಿ ವಿಶ್ವೇಶ್ವರಯ್ಯನವರು ಕೈಗಾರೀಕರಣ ಆಗದೆ ಇದ್ದರೆ ಭವಿಷ್ಯದ ಭಾರತಕ್ಕೆ ಮತ್ತು ನಮ್ಮ ನಾಡು ಕರ್ನಾಟಕಕ್ಕೆ ಉಜ್ವಲ ಭವಿಷ್ಯವಿಲ್ಲ ಎಂಬ ಮಾತನ್ನು ಹೇಗೆ ಹೇಳಿದ್ದಾರೆ ಮತ್ತು ತಮ್ಮ ಕಾರ್ಯಗಳಿಂದ ಮಾಡಿ ತೋರಿಸಿದ್ದಾರೆ ಎಂಬಂತಹ ಅಂಶಗಳನ್ನು ಪ್ರಸ್ತುತಪಡಿಸುತ್ತದೆ. * ವಿಶ್ವೇಶ್ವರಯ್ಯನವರ ಪ್ರಾಮಾಣಿಕತೆ ಮತ್ತು ದೂರದೃಷ್ಟಿಯುಳ್ಳ ಮನೋಭಾವ ಯಾವುದನ್ನೇ ಗಮನಿಸಿದರೂ ಅದರಲ್ಲಿ ಸಮಾಜಕ್ಕೆ ನೀಡಬಹುದಾದ ಧನಾತ್ಮಕ ಅಂಶಗಳನ್ನು ಗುರುತಿಸುವುದು ಅಂತಹ ವಿಷಯಗಳನ್ನು ಈ ಲೇಖನದಲ್ಲಿ ಕಾಣಬಹುದು. * ದಿವಾನ ಪದವಿಗೆ ರಾಜೀನಾಮೆ ನೀಡುವ ಪ್ರಸಂಗ ಹಿಂದುಳಿದ ವರ್ಗಗಳಿಗೆ ಸರಕಾರಿ ಕೆಲಸಗಳಲ್ಲಿ ಮೀಸಲಾತಿ ನೀಡುವ ಕುರಿತು ಮೈಸೂರಿನ ದೊರೆಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಲ್ಲರ್ ಆಯೋಗ ನೇಮಿಸಿ ಪಡೆದ ವರದಿಯನ್ನು ಜಾರಿಗೆ ತರಬೇಕೆಂದು ಬಯಸಿದರು ಇದಕ್ಕೆ ಸರ್ ಎಂ ವಿ ರವರ ಬಲವಾದ ವಿರೋಧವಿತ್ತು ಹೀಗೆ ಮಾಡುವುದರಿಂದ ಪ್ರತಿಭೆಗೆ ಅನ್ಯಾಯವನ್ನು ಮಾಡಿದಂತಾಗುತ್ತದೆ ಎಂದು ಅವರು ಭಾವಿಸಿದ್ದರು ಆದರೆ ಒಡೆಯರು ವರದಿಯನ್ನು ಜಾರಿಗೆ ತರಲು ನಿರ್ಧರಿಸಿದಾಗ ವಿಶ್ವೇಶ್ವರಯ್ಯನವರು ತಾತ್ವಿಕ ಕಾರಣವನ್ನು ನೀಡಿ ರಾಜೀನಾಮೆಯನ್ನು ನೀಡಿದರು, #### ಮೂಲ ಲೇಖನ: * ಲೇಖನುರ್ಷಗಳ ಹಿಂದೆ * ಹೋಗುತ್ತಿದ್ದಾಗ * ಹೋಗುತ್ತ ಬರಡು ಭೂಮಿಯಾಗಿತ್ತು. * ಈಗ ರಸ್ತೆಯ ಇಕ್ಕೆಲದಲ್ಲೂ ಕಣ್ಣಿಗೆ ಕಾಣುವನ್ನು ದೂರಿ ಹಸಿರು ಕಂಗೊಳಿಸುತ್ತದೆ. * ಜಿಲ್ಲೆ ಹಿಂದೆ ಇದ್ದ ಸ್ಥಿತಿಯ ನೆನಪಾಯಿತು. * ಆಗ ಅದು ಮಳೆ ಸಾಲದೆ, ನೀರಿನ ಸೌಕರ್ಯವಿಲ್ಲದೆ, ಎಲ್ಲಿ ನೋಡಿದರೂ ಭತ್ತದ ಬೆಳೆ; ಕಬ್ಬಿನ ಬೆಳೆ; * ಎಲ್ಲಾ ಕಡೆಗಳಿಂದಲೂ ನೀರಿನ ಕಲರವ ಕಿವಿಯನ್ನು ಮುತ್ತುತ್ತದೆ. * ನಾವು ಎಲ್ಲಿ ನೋಡಿದರೂ ಸರಿಯುವುದರಲ್ಲಿ ಮಗ್ನನಾಗಿದ್ದಾಗ ನನ್ನ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕ ಸುತ್ತ ಹಸುರಿನ ಕಡೆಗೆ ಕೈಬೀಸಿ ಇಂಗ್ಲಿಷಿನಲ್ಲಿ “ಂಟಟ ಣು) ಗುತಭಿತಚಿಡಿಚಿಥಿಚಿ (ಇವೆಲ್ಲ ವಿಶ್ವೇಶ್ವರಯ್ಯ" ಎಂದ. * ನನ್ನ ಮನಸ್ಸಿನಲ್ಲಿದ್ದ ಯೋಚನೆಯೇ ಆತನ ಬಾಯಿಯಿಂದ ಹೊರಟಿತು. * ಸಾಧಾರಣವಾಗಿ ನಾವು "ಇದೆಲ್ಲಾ ವಿಶ್ವೇಶ್ವರಯ್ಯನವರು ಮಾಡಿದೆ ಕೆಲಸ” ಎಂದು ಹೇಳುವ ಪದ್ಧತಿ. . * ಆದರೆ ಈ ಸಂದರ್ಭದಲ್ಲಿ ಆತ ಹೇಳಿದ್ದೇ ಸರಿ ಎನ್ನಿಸಿತು. * ಈಗ ವಿಶ್ವೇಶ್ವರಯ್ಯನವರ ಭೌತದೇಹ ನಮ್ಮೊಡನೆ ಇಲ್ಲ. * ಆದರೆ ಮಂಡ್ಯ ಜಿಲ್ಲೆಯ ಸೌಂದರ್ಯದಲ್ಲಿ, ಅಲ್ಲಿಯ ಜನರ ಅಭ್ಯುದಯದಲ್ಲಿ, ಅವರು ಜೀವಂತವಾಗಿದ್ದಾರೆ. * ಅಂತಹ ಸಂಪತ್ತನ್ನು ಸೃಷ್ಟಿಸಿ ಜನಜೀವನದ ಸೌಖ್ಯವನ್ನು ಹೆಚ್ಚಿಸುವುದೇ ಅವರ ಜೀವದ ಜೀವ, * ಆ ಜಿಲ್ಲೆಗೆ ನೀರನ್ನು ಒದಗಿಸುವ ಕೃಷ್ಣರಾಜಸಾಗರವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡವರು, ಅದರ ಯೋಜನೆಯನ್ನು ತಯಾರಿಸಿದವರು, ಅದನ್ನು ಕಟ್ಟಿಸಿದವರು. ವಿಶ್ವೇಶ್ವರಯ್ಯ, * ಅದರ ಪ್ರಯೋಜನವನ್ನು ಪಡೆಯುತ್ತಿರುವವರು ಮಂಡ್ಯದ ರೈತರು ಮತ್ತು ಅವರ ಮೂಲಕ ಮೈಸೂರು ರಾಜ್ಯ ಅದಕ್ಕಾಗಿಯೇ ನಾವು ಈ ಇಂಜಿನಿಯರ್ ರಾಜತಂತ್ರಜ್ಞರು ಮಾಡಿದ ಲೆಕ್ಕವಿಲ್ಲದಷ್ಟು ಉಪಕಾರಗಳಲ್ಲಿ ಮೊದಲು ಕೃಷ್ಣರಾಜಸಾಗರವನ್ನು ನೆನೆಯುತ್ತೇವೆ. . * ನನ್ನ ಆ ಸಹ ಪ್ರಯಾಣಿಕನು ವಿಶ್ವೇಶ್ವರಯ್ಯನವರ ಇತರ ಮಹಾಕಾರ್ಯಗಳನ್ನು ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಬ್ಯಾಂಕು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರಿನ ಚೇಂಬರ್ ಆಫ್ ಕಾಮರ್ಸ್ ಇವುಗಳನ್ನೂ ಸ್ಮರಿಸಿಕೊಂಡ. . * ಆದರೆ ಕೃಷ್ಣರಾಜ ಸಾಗರದ ಹೆಸರು ಹೇಳಿದ ಮೇಲೆ. . * ಗಾಂಧೀಜಿ ಒಂದು ಸಾರಿ ಹೇಳಿದರು: ಭಗವಂತ ಮಾನವರಿಗೆ ಕಾಣಿಸಿಕೊಂಡರೆ, ಮೊದಲು ಅನ್ನದ ರೂಪದಲ್ಲಿ ಕಾಣಿಸಿಕೊಳ್ಳಬೇಕು, ಎಂದು. * ವಿಶ್ವೇಶ್ವರಯ್ಯನವರು ತಮ್ಮನ್ನು ನೆನಿತ್ತವಾಗಿ ಮಾಡಿಕೊಂಡು ಮಂಡ್ಯ ಜಿಲ್ಲೆಯಲ್ಲಿ ಅನ್ನಬ್ರಹ್ಮನ ಅವತಾರ ಮಾಡಿಸಿದರು. * ಡಾ. ವಿಶ್ವೇಶ್ವರಯ್ಯನವರು 1919 ರಲ್ಲಿ ಸ್ವಂತ ಇಚ್ಛೆಯಿಂದ ದಿವಾನಗಿರಿಯನ್ನು ಬಿಟ್ಟುಕೊಟ್ಟು ಅಧಿಕಾರದಿಂದ ನಿವೃತ್ತರಾದರು; * ಆದರೆ ದೇಶಸೇವೆಯಿಂದ ನಿವೃತ್ತರಾಗಲಿಲ್ಲ. * ವರ್ಷಗಟ್ಟಲೆ ಅವರು ಕೃಷ್ಣರಾಜ ಸಾಗರದ ಅಭಿವೃದ್ಧಿ ಸಮಿತಿಯ ಮತ್ತು ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿ * ಖಾನೆಯ ಅಧ್ಯಕ್ಷರಾಗಿ ಕೆಲಸ ಮಾಡಿದರು. * ಅವರ ಜೀವನದ ಕೊನೆಯವರೆಗೂ ಕೈಗಾರಿಕೆ ಅಥವಾ ಇಂಜಿನಿಯರಿಂಗ್ ಗೆ ಸಂಬಂಧಪಟ್ಟ ತೊಡಕಾದ ಸಮಸ್ಯೆ ಏನು ಬಂದರೂ * ಮೈಸೂರು ರಾಜ್ಯವು ಅವರ ಸಲಹೆಯನ್ನು ಬೇಡುತ್ತಿತ್ತು. ಪಡೆಯುತ್ತಿತ್ತು. * ಅವರ ನಂತರ ಬಂದ ದಿವಾನರು ಮತ್ತು ಮಂತ್ರಿಗಳಲ್ಲಿ ಹೆಚ್ಚು ಕಡಿಮೆ ಎಲ್ಲರೂ ಅವರಲ್ಲಿ ಭಕ್ತಿಯಿಂದ ನಡೆದುಕೊಂಡು ಸಲಹೆ ಪಡೆದಿದ್ದಾರೆ. * ನಮ್ಮ ರಾಜ್ಯದ ಜನ ಜೀವನದಲ್ಲಿ ಅದೆಷ್ಟೋ ಕಡೆ ಅವರ ಕೈವಾಡ ಕಾಣುತ್ತದೆಯೋ! * ಅದಕ್ಕೆ ನಮ್ಮ ಜನ ದೊಡ್ಡದಾಗಿ ಕೈಬೀಸಿ ಹೇಳುತ್ತಾರೆ: * "ಇದೆಲ್ಲಾ ವಿಶ್ವೇಶ್ವರಯ್ಯನವರ ಕೆಲಸ” ಎಂದಲ್ಲ, " ಇದೆಲ್ಲಾ ವಿಶ್ವೇಶ್ವರಯ್ಯ” ಎಂದು; * ವಿಶ್ವೇಶ್ವರಯ್ಯನವರು ಸಾಧಿಸಿದ ಕೆಲಸಗಳಷ್ಟೇ ಬಹುಶಃ ಅವಕ್ಕಿಂತ ಹೆಚ್ಚಾಗಿ ಅವರ ವ್ಯಕ್ತಿತ್ವ ಜನರ ಮನಸ್ಸನ್ನು ಸೆಳೆದಿದೆ. . * ಅವರು ಅತ್ಯಂತ ದಕ್ಷರಾದ ಇಂಜಿನಿಯರ್. * ಮುಂದಾಲೋಚನೆಯುಳ್ಳ ರಾಜತಂತ್ರಜ್ಞರು, * ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ಘನವಾದ ಆದರ್ಶಗಳನ್ನು ಕಲ್ಪಿಸಿಕೊಂಡು ಅವನ್ನು ಸಾಧಿಸಲು ಶ್ರಮಿಸಿದವರು – * ಇದೆನ್ನೆಲ್ಲಾ ಒತ್ತಿ ಹೇಳಬೇಕಾದ ಅವಶ್ಯಕತೆಯಿಲ್ಲ. *